20.4 C
Bangalore
Monday, December 9, 2019

ಯುದ್ಧ ಗೆದ್ದ ಬಾಹುಬಲಿಯ ಮನದ ತುಮುಲ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಧರ್ಮಸ್ಥಳ: ಅಣ್ಣನ ಕಾಲಿಗೆರುವುದರಲ್ಲಿ ತಪ್ಪಿಲ್ಲ, ಆದರೆ ಭರತ ಚಕ್ರವರ್ತಿ ಕೊರಳಿಗೆ ಕತ್ತಿಯನ್ನೂರಿ ಶರಣಾಗು ಎನ್ನುವವನು ಅಣ್ಣನೇ ಆಗಿದ್ದರೂ ಅದಕ್ಕೆ ಮಣಿದರೆ ತಂದೆ ಆದಿನಾಥರಿಗೆ ಅವಮಾನ, ಪೌದನಾಪುರದ ಜನರಿಗೆ ಅವಮಾನ…
ಅದರ ಬದಲು ಅಯೋಧ್ಯೆಗೇ ತೆರಳಿ ಭರತನನ್ನು ಎದುರಿಸುವೆ… ಹೀಗೆಂದು ಬಾಹುಬಲಿ ತನ್ನ ಸ್ವಾಭಿಮಾನ ಪ್ರದರ್ಶಿಸುವ ಸನ್ನಿವೇಶ ಧರ್ಮಸ್ಥಳ ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಯುಕ್ತ ನಾಲ್ಕನೇ ದಿನದ ಪಂಚಮಹಾವೈಭವದ ಮುಖ್ಯಾಂಶ.

ಚಕ್ರರತ್ನವನ್ನು ಮುಂದಿಟ್ಟು 55 ದೇಶಗಳನ್ನೊಳಗೊಂಡ ಷಟ್ಖಂಡಗಳನ್ನೂ ಜಯಿಸಿ ಬಂದ ಭರತೇಶನಿಗೆ ಅಯೋಧ್ಯಾಪುರ ಪ್ರವೇಶ ಸಂದರ್ಭ ಚಕ್ರ ಮುಂದುವರಿಯದೆ ನಿಂತಾಗ ತಾನಿನ್ನೂ ಸೋದರರನ್ನು ಗೆದ್ದಿಲ್ಲ ಎಂದು ಗೊತ್ತಾಗುತ್ತದೆ. ಸೋದರನಿಗೆ ಶರಣಾಗುವುದಕ್ಕೆ ಸಿದ್ಧರಾಗದೆ 93 ಸೋದರರೂ ತಂದೆಯ ಮಾರ್ಗದಲ್ಲೇ ತೆರಳಿ ಸನ್ಯಾಸ ದೀಕ್ಷೆ ಪಡೆಯುತ್ತಾರೆ. ಇದರಿಂದ ಚಿಂತಿತನಾಗುವ ಭರತ ಇನ್ನುಳಿದ ಓರ್ವನೆ ತಮ್ಮ, ವೀರನೂ ಸಮರ್ಥನೂ ಆದ ಬಾಹುಬಲಿಯೂ ಅದೇ ಮಾರ್ಗದಲ್ಲಿ ಸಾಗದೆ, ಉಪಾಯದಿಂದ ಆತನನ್ನು ಕರೆಸಿ ತನಗೆ ಶರಣಾಗುವಂತೆ ಮಾಡಿಸಲು ಚತುರಮತಿಯಾದ ದಕ್ಷಿಣಾಂಕನನ್ನು ಕಳುಹಿಸುತ್ತಾನೆ.

 ಬಾಹುಬಲಿ ರಾಜ್ಯದ ವೈಭವ: ಮೊದಲೆರಡು ದಿನ ಆದಿನಾಥ ರಾಜ, ಭರತೇಶನ ರಾಜ್ಯದ ವೈಭವ ಪ್ರದರ್ಶಿಸಿದ ರೂಪಕದಲ್ಲಿ ಗುರುವಾರ ಬಾಹುಬಲಿಯ ಪೌದನಾಪುರ ರಾಜ್ಯದ ಸಂಪತ್ತಿನ ಪ್ರದರ್ಶನವಿತ್ತು. ಬಾಹುಬಲಿಯನ್ನು ಸಂದರ್ಶಿಸಲು ಆಗಮಿಸುವ ಭರತನ ಮಂತ್ರಿ ದಕ್ಷಿಣಾಂಕನ ಆಗಮನದ ಉದ್ದಕ್ಕೂ ಸಾಂಸ್ಕೃತಿಕ, ಸಾಂಪ್ರದಾಯಿಕ ಕಲೆ, ಸಾಂಪತ್ತಿಕ ಉತ್ಕೃಷ್ಟತೆಗಳು ಮೇಳೈಸುತ್ತವೆ. ಈ ಸನ್ನಿವೇಶದಲ್ಲಿ ಇಡೀ ಸಭಾಂಗಣವೇ ಒಂದು ವೇದಿಕೆಯಾಗಿ ಮಾರ್ಪಟ್ಟಿತು. ಪ್ರೇಕ್ಷಕರೇ ಇಲ್ಲಿ ಪೌದನಾಪುರದ ನಾಗರಿಕರು!
ಸಭಾಂಗಣದ ಅಲ್ಲಲ್ಲಿ 10 ಕಿರು ವೇದಿಕೆಗಳಿದ್ದು ಬಾಹುಬಲಿಯ ರಾಜ್ಯದ ಸಾಂಸ್ಕೃತಿಕ ಕಲೆಗಳನ್ನು ದಕ್ಷಿಣಾಂಕನಿಗೆ ತೋರಿಸುವುದಕ್ಕೆ ಬಳಸಲಾಯಿತು. ಭರತನಾಟ್ಯ, ಕಾವ್ಯಗೋಷ್ಠಿ, ವಾದ್ಯವೃಂದ, ಶಿಲ್ಪ-ಚಿತ್ರಕಲೆ-ಕುಸುರಿ, ರಂಗಶಾಲೆ, ಜಗಜಟ್ಟಿಗಳಿರುವ ಗರಡಿ ಮನೆ, ಮೋಹಿನಿಯಾಟ್ಟಂ, ಸಂಗೀತ ಶಾಲೆ, ಯಕ್ಷಗಾನದ ರಂಗಸ್ಥಳದಲ್ಲಿ ನಡೆದ ಪ್ರದರ್ಶನಗಳು ಸಭಿಕರನ್ನು ಮುದಗೊಳಿಸಿದವು.
ದಕ್ಷಿಣಾಂಕ ಈ ಎಲ್ಲ ವೈಭವದ ದರ್ಶನ ಮುಗಿಸಿ ಬರುವಾಗ ವೇದಿಕೆಗೆ ಯುವರಾಜ ಬಾಹುಬಲಿಯ ಪ್ರವೇಶವಾಗುತ್ತದೆ. ತುಂಬಿರುವ ರಾಜಸಭೆಗೆ ದಕ್ಷಿಣಾಂಕ ಬರುತ್ತಾನೆ. ತನ್ನ ವಾಕ್ಚಾತುರ್ಯದಿಂದಲೇ ಬಾಹುಬಲಿಯನ್ನು ಹೊಗಳುತ್ತಾನೆ. ಯಾವ ರೀತಿ ಉಳಿದ 93 ಸೋದರರು ಶರಣಾಗುವ ಬದಲು ದೀಕ್ಷೆ ಸ್ವೀಕಾರ ಮಾಡಿದರೆನ್ನುವುದನ್ನು ವಿವರಿಸುತ್ತಾನೆ. ಯಾವುದೇ ಕ್ಷಣದಲ್ಲೂ ಉದ್ವೇಗಕ್ಕೊಳಗಾಗದ ಬಾಹುಬಲಿ ಎಲ್ಲವನ್ನೂ ಆಲಿಸುತ್ತಾನೆ. ಆದರೆ ಯಾವಾಗ ದಿಗ್ವಿಜಯ ಮುಗಿಸುವುದಕ್ಕೆ ತನ್ನನ್ನೂ ಹಿರಿಯ ಸೋದರ ಶರಣಾಗಲು ಬಯಸುತ್ತಾನೆ ಎಂಬುದು ಅರಿವಾದಾಗ ಆಕ್ರೋಶಕ್ಕೊಳಗಾಗುತ್ತಾನೆ.

ಕ್ರುದ್ಧನಾದ ಬಾಹುಬಲಿ: ನಿನ್ನ ಮಿದು ಮಾತಿನ ಪೊರೆಯೊಳಗೆ ಎಂಥ ಉದ್ದೇಶವಿದೆ ಎಂದು ಅರಿತುಕೊಂಡೆ ಸೋದರರನ್ನು ದೀಕ್ಷೆಗೆ ಹೋಗುವಂತೆ ಮಾಡಿ, ನನ್ನ ಬಳಿ ಬಂದ ಉದ್ದೇಶವೂ ಶರಣಾಗತಿಯಾಗುವಂತೆ ಮಾಡುವುದೇ ಎಂದು ದಕ್ಷಿಣಾಂಕನ ಮೇಲೆ ಕ್ರುದ್ಧನಾಗುತ್ತಾನೆ. ಅಣ್ಣನ ಕಾಲಿಗೆರಗುವುದರಲ್ಲಿ ತಪ್ಪೇನಿದೆ ಎಂದು ದಕ್ಷಿಣಾಂಕ ಕೇಳಿದಾಗ, ಅಣ್ಣನಿರಬಹುದು ಆದರೆ ಕೊರಳಿಗೆ ಕತ್ತಿ ಹಿಡಿದು ಶರಣಾಗು ಎನ್ನುವ ಭರತ ಚಕ್ರವರ್ತಿಗೆ ಶರಣಾದರೆ ಅದು ರಾಜ್ಯದ ಜನರಿಗೆ ಅವಮಾನ ನೀವಿನ್ನು ಹೊರಡಿ ಎಂದು ಸೂಚಿಸುತ್ತಾನೆ. ಸಮಸ್ತ ಸೇನಾಪಡೆಯನ್ನೂ ಪೌದನಾಪುರದ ಸ್ವಾಭಿಮಾನ ಉಳಿಸುವುದಕ್ಕಾಗಿ ಯುದ್ಧಕ್ಕೆ ಸನ್ನದ್ಧರಾಗುವಂತೆ ಸೂಚಿಸುತ್ತಾನೆ.

ಹಿರಿಯ ಸೋದರನೊಂದಿಗೆ ಯುದ್ಧವೇರ್ಪಡಿಸುವುದಕ್ಕೆ ದುಃಖ ವ್ಯಕ್ತಪಡಿಸುವ ತಾಯಿಯನ್ನು, ಪತ್ನಿಯನ್ನು ಸಂತೈಸಿ ಯುದ್ಧ ಮಾಡುವುದಿಲ್ಲ, ಸಿಟ್ಟಲ್ಲಿ ಹಾಗೆ ಹೇಳಿದೆಯಷ್ಟೆ. ನಾನು ತೆರಳಿ ಅಣ್ಣನ ಕಾಲಿಗೆರಗುವೆ ಎಂದು ಸಮಾಧಾನ ಪಡಿಸುತ್ತಾನೆ. ಆದರೆ ಅವರನ್ನು ಅಂತಃಪುರಕ್ಕೆ ಕಳುಹಿಸಿದ ಬಳಿಕ ಬಾಹುಬಲಿಯ ಆಂತರಿಕ ತುಮುಲವನ್ನು ಧ್ವನಿ ಮತ್ತು ಬೆಳಕು ಹಾಗೂ ಅಭಿನಯದಲ್ಲಿ ಮನೋಜ್ಞವಾಗಿ ಪ್ರದರ್ಶಿಸಲಾಯಿತು. ಕೊನೆಯಲ್ಲಿ ಆಗಮಿಸುವ ಮಂತ್ರಿಗೆ ಬಾಹುಬಲಿ, ರಾಜ್ಯದ ಸ್ವಾಭಿಮಾನ ಉಳಿಸುವುದು ಅರಸನಾದ ನನ್ನ ಕರ್ತವ್ಯ, ಅದಕ್ಕಾಗಿ ತಾಯಿ, ಪತ್ನಿಗೆ ಸುಳ್ಳು ಹೇಳಿದ್ದರಲ್ಲಿ ತಪ್ಪಿಲ್ಲ, ಯುದ್ಧಕ್ಕೆ ಸನ್ನದ್ಧರಾಗೋಣ ಎನ್ನುತ್ತಾನೆ.
ದೃಷ್ಟಿ, ಜಲ, ಮಲ್ಲಯುದ್ಧ: ದಿಗ್ವಿಜಯ ಯಾತ್ರೆಯ ಹುಮ್ಮಸ್ಸಿನಲ್ಲಿರುವ ಭರತ ಚಕ್ರೇಶ್ವರನ ಮಂತ್ರಿಯಿಂದ ಬಂದ ಶರಣಾಗತಿಯ ಕೋರಿಕೆಯನ್ನು ಧಿಕ್ಕರಿಸಿ ಸ್ವಾಭಿಮಾನಕ್ಕಾಗಿ ಯುದ್ಧ ಸನ್ನದ್ಧನಾಗಿದ್ದಾನೆ ಬಾಹುಬಲಿ.
ಪರಸ್ಪರ ಯುದ್ಧವಾದರೆ ಅದು ಪ್ರಪಂಚ ಕಂಡು ಕೇಳರಿಯದ ಯುದ್ಧವಾಗಬಹುದು, ಅಪಾರ ಪ್ರಮಾಣದ ಸಾವುನೋವು, ವ್ಯರ್ಥ ರಕ್ತಪಾತ ಖಚಿತ. ಅದರಿಂದ ಯಾರೂ ಗೆಲ್ಲಲಾರರು, ಹಾಗಾಗಿ ಇದರ ಬದಲು ಭರತ-ಬಾಹುಬಲಿ ಪರಸ್ಪರ ತ್ರಿವಿಧ ಯುದ್ಧ ಮಾಡುವುದು ಸೂಕ್ತ ಎಂದು ಎರಡೂ ಕಡೆಯ ಮಂತ್ರಿಗಳು ತೀರ್ಮಾನಿಸುತ್ತಾರೆ.
ಅದರಂತೆ ಭರತ-ಬಾಹುಬಲಿ ಶುರು ಮಾಡುವುದು ದೃಷ್ಟಿ ಯುದ್ಧ. ವೇದಿಕೆಯೇರಿ ಪರಸ್ಪರ ಹುಬ್ಬೇರಿಸಿ, ದೃಷ್ಟಿಯುದ್ಧದಲ್ಲಿ ತೊಡಗುತ್ತಾರೆ, ಕೆಲ ನಿಮಿಷದಲ್ಲಿ ಅಣ್ಣನ ಸೋಲಾಗುತ್ತದೆ. ಮತ್ತೆ ಕೆರೆಗೆ ಧುಮುಕಿದ ಇಬ್ಬರೂ ಜಲಯುದ್ಧ ಶುರು ಮಾಡುತ್ತಾರೆ. ಜಲ ಸೇಚನದಲ್ಲೂ ಬಸವಳಿದ ಭರತೇಶ ಸೋಲೊಪ್ಪಿಕೊಂಡು ಕೊನೆಯದಾಗಿ ಮಲ್ಲಯುದ್ಧಕ್ಕೆ ಮುಂದಾಗುತ್ತಾನೆ.

ತೋಳಬಲದಲ್ಲೂ ತಮ್ಮ ಬಾಹುಬಲಿಗೆ ಯಾವುದೇ ಸಾಟಿಯಲ್ಲ ಭರತ ಎನ್ನುವುದು ಸಾಬೀತಾಗುತ್ತದೆ. ಸೋತ ಅಣ್ಣನನ್ನು ಹೆಗಲಿಗೇರಿಸಿ ನೆಲಕ್ಕೆ ಅಪ್ಪಳಿಸಲು ಮುಂದಾಗಿ ಕೆಲ ಹೆಜ್ಜೆ ಇರಿಸುವಾಗಲೇ ಬಾಹುಬಲಿಯ ಜ್ಞಾನಚಕ್ಷುಗಳು ತೆರೆದುಕೊಳ್ಳುತ್ತವೆ. ನಾನೇನು ದುಷ್ಟ ಕೆಲಸ ಮಾಡಿದೆ? ಅಣ್ಣನನ್ನೇ ಅಪಮಾನಿಸಿದೆ ಎಂದು ವ್ಯಾಕುಲನಾಗುತ್ತಾನೆ. ರಾಜ್ಯ, ಧನ, ಬಲವೆಲ್ಲವನ್ನೂ ಅಣ್ಣನಿಗೆ ಒಪ್ಪಿಸುವತ್ತ ಮನಸ್ಸು ಬಾಗುತ್ತದೆ. ಇದೇ ವೇಳೆ ಅಪಮಾನ ತಡೆದುಕೊಳ್ಳಲಾಗದ ಭರತ ಚಕ್ರರತ್ನವನ್ನು ತಮ್ಮನ ಮೇಲೆ ಪ್ರಯೋಗಿಸುತ್ತಾನೆ. ಚಕ್ರರತ್ನವು ಬಾಹುಬಲಿಯನ್ನು ಸಂಹರಿಸದೆ ಸುತ್ತು ಬಂದು ಸುಮ್ಮನಾಗುತ್ತದೆ. ಅಲ್ಲಿಗೆ ಭರತನ ಎಲ್ಲ ಅಹಂಕಾರವೂ ಇಳಿದುಹೋಗುತ್ತದೆ. ಬಾಹುಬಲಿ ವಿರಕ್ತನಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ದೀಕ್ಷಾಪಥದೆಡೆಗೆ ಮುಂದುವರಿಯುತ್ತಾನೆ. ಅಲ್ಲಿಗೆ ಪಂಚ ಮಹಾವೈಭವದ ಪ್ರಮುಖ ಘಟ್ಟವೊಂದು ಪೂರ್ಣಗೊಳ್ಳುತ್ತದೆ.

216 ಕಲಶಗಳಿಂದ ಪಾದಾಭಿಷೇಕ: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಗುರುವಾರ ಬೆಳಗ್ಗೆ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು. ಮಧ್ಯಾಹ್ನ ಯಜ್ಞಶಾಲೆಯಲ್ಲಿ ಬ್ರಹ್ಮಚ್ಛಾಂತಿ ಯಂತ್ರಾರಾಧನೆ, ಸಾಯಂಕಾಲ ಧ್ವಜಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನೆರವೇರಿತು. ಶುಕ್ರವಾರ ಬೆಳಗ್ಗೆ 9.30ರಿಂದ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಸಮವಸರಣ ದರ್ಶನ, ಭರತಾಗಮನ ಶಂಕೆ ನಿವಾರಣೆ, ಸಾಯಂಕಾಲ 7ರಿಂದ ಶ್ರೀ ಧರ್ಮಸ್ಥಳ ಯಕ್ಷಗಾನ ಮಂಡಳಿಯಿಂದ ಭರತಾಗಮನ ಯಕ್ಷಗಾನ ಪ್ರದರ್ಶನ ಯಕ್ಷ ಸಂಜೆ ನಡೆಯಲಿದೆ. ರತ್ನಗಿರಿಯಲ್ಲಿ ಅಗ್ರೋದಕ ಮೆರವಣಿಗೆ, ಬಾಹುಬಲಿಗೆ 216 ಕಲಶಗಳಿಂದ ಪಾದಾಭಿಷೇಕ ನೆರವೇರಲಿದೆ.

ನಾಳೆಯಿಂದ ಮಹಾಮಸ್ತಕಾಭಿಷೇಕ: ರತ್ನಗಿರಿಯಲ್ಲಿ ವಿರಾಜಮಾನರಾಗಿರುವ 39 ಅಡಿ ಎತ್ತರದ ಭಗವಾನ್ ಬಾಹುಬಲಿಗೆ ಫೆ.16ರಂದು 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಅಗ್ರೋದಕ ಮೆರವಣಿಗೆ ರತ್ನಗಿರಿಗೆ ಹೋಗಿ 8.45ರ ಮೀನ ಲಗ್ನದಲ್ಲಿ ಬಾಹುಬಲಿ ಸ್ವಾಮಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರಿಂದ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆ.17 ಮತ್ತು 18ರಂದೂ ಮಹಾಮಸ್ತಕಾಭಿಷೇಕ ನೆರವೇರಲಿದೆ.

ಕಿರಿಯ ವಯಸ್ಸಲ್ಲಿ ಪೀಠವೇರಿದ ಸ್ವಾಮೀಜಿಗೆ ಗೌರವ: 21ರ ಕಿರಿಯ ವಯಸ್ಸಿನಲ್ಲಿ ಕೊಲ್ಲಾಪುರ ನಾಂದಿನಿ ತೇರದಾಳ ಜೈನ ಮಠದ ಪೀಠವೇರಿದ ಶ್ರೀ ಜಿನಸೇನ ಭಟ್ಟಾರಕ ಪಟ್ಟಾರಕ ಮಹಾಸ್ವಾಮೀಜಿಯವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಬೆಳ್ಳಿದೀಪ ಹಾಗೂ ಅಭಿನಂದನಾ ಪತ್ರ ನೀಡಿದರು. ಡಾ.ಹೆಗ್ಗಡೆಯವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮಾದರಿ ಎಂದು ಸ್ವಾಮೀಜಿ ಶುಭ ಹಾರೈಸಿದರು.
ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಜೈನ ಶ್ರಾವಕ ಶ್ರಾವಕಿಯರ ರಕ್ಷಣೆಗೆ ಮಠಗಳನ್ನು ಸ್ಥಾಪಿಸಿ ಅಲ್ಲಿ ಮಹಾಸ್ವಾಮೀಜಿಗಳನ್ನು ನಿಯುಕ್ತಿಗೊಳಿಸಲಾಗುತ್ತಿದೆ. ತ್ಯಾಗಿಗಳು ಆತ್ಮಕಲ್ಯಾಣಕ್ಕಾಗಿ ಲೋಕಸಂಚಾರ ಕೈಗೊಳ್ಳುತ್ತಾರೆ. ಸ್ವಾಮೀಜಿಗಳು ಜೈನ ಸಮಾಜದ ರಕ್ಷಣೆಯಲ್ಲಿ ತೊಡಗುತ್ತಾರೆ. ಹಿಂದೆ ತಮಿಳುನಾಡಿಗೆ ಜೈನ ಯತಿಗಳು ಹೋಗುತ್ತಿರಲಿಲ್ಲ. ಈಗ ಶ್ರವಣಬೆಳಗೊಳ ಜೈನ ಮಠದ ಪ್ರಯತ್ನದಿಂದ ತಮಿಳುನಾಡಿನ ಎರಡು ಕಡೆ ಜೈನ ಮಠ ಸ್ಥಾಪನೆಯಾಗಿದೆ. ಹಾಗಾಗಿ ಜೈನ ಯತಿಗಳೂ ತಮಿಳುನಾಡಿಗೆ ಮಂಗಲ ಪರ್ಯಟನೆ ಕೈಗೊಳ್ಳುತ್ತಿದ್ದಾರೆ ಎಂದರು.
ಅರಹಂತಗಿರಿ ಜೈನ ಮಠದ ಶ್ರೀ ಧವಳಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಕನಕಗಿರಿ ಜೈನ ಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಹುಂಚ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಕಂಬದಹಳ್ಳಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇದ್ದರು.

ವಿವಿಧ ಗ್ರಂಥಗಳ ಬಿಡುಗಡೆ: 108 ವಿಶುದ್ಧಸಾಗರ ಮುನಿಮಹಾರಾಜರು ರಚಿಸಿದ ‘ಸೈಂತಾಲೀಸ್ ಶಕ್ತಿಯೋಂಕ ವಿಶದ್ ವ್ಯಾಖ್ಯಾನ್’ ಗ್ರಂಥವನ್ನು 108 ವರ್ಧಮಾನ ಸಾಗರ್ ಮಹಾರಾಜ್, ವೀರಪ್ಪ ಮೊಯ್ಲಿ ರಚಿಸಿದ ಡಾ.ವಿ.ಎಸ್.ರಾಜಣ್ಣ ಅನುವಾದಿಸಿದ ‘ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಗದ್ಯಾನುವಾದ ಗ್ರಂಥವನ್ನು 108 ಶ್ರೀ ಪುಣ್ಯಸಾಗರ ಮುನಿಮಹಾರಾಜ್ ಬಿಡುಗಡೆಗೊಳಿಸಿದರು. ಇರ್ವತ್ತೂರು ಬೀಡು ವಿಜಯಾ ಜಿ. ಜೈನ್ ಬರೆದ ‘ಧರ್ಮಸ್ಥಳದ ಶ್ರೀ ಗೊಮ್ಮಟೇಶ್ವರ ಚರಿತ್ರೆ ಸಾಂಗತ್ಯ’ವನ್ನು ವೀರಸಾಗರ ಮುನಿಮಹಾರಾಜರು, ಎಸ್.ಎಸ್.ಉಕ್ಕಾಲಿ ಮುಧೋಳ ಬರೆದ ‘ಆದಿಪುರಾಣ ಗ್ರಂಥ’ ಬಿಡುಗಡೆಯನ್ನು 108 ಶ್ರೀ ಸಿದ್ಧಸೇನಾಚಾರ್ಯ ನೆರವೇರಿಸಿದರು. ಡಾ.ವಸಂತ ಕುಮಾರ್ ಪೆರ್ಲ ಬರೆದ 50ನೇ ಪಟ್ಟಾಭಿಷೇಕ ಸುವರ್ಣ ಸಂಚಿಕೆ ದೇವಪುರ ಕುಡುಮ ಕೃತಿಯನ್ನು ವೀರಪ್ಪ ಮೊಯ್ಲಿ ಬಿಡುಗಡೆಗೊಳಿಸಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ, ನಾಡೋಜ ಡಾ.ಹಂ.ಪ.ನಾಗರಾಜಯ್ಯ, ಪ್ರೊ.ಬೈರಮಂಗಲ ರಾಮೇಗೌಡ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೊರತಂದಿರುವ ‘ಬಾಹುಬಲಿ ಗೀತಾಂಜಲಿ ಭಾಗ-2’ ಜೈನ ಧರ್ಮ ಕುರಿತ ಕೃತಿಯನ್ನು ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿ ಮಹಾರಾಜ್ ಬಿಡುಗಡೆ ಮಾಡಿದರು.

ಮನದಲ್ಲಿ ಮೂಡಿತ್ತು ಶಂಕೆ: 20 ದಿನದ ಹಿಂದೆಯೇ ಮನದಲ್ಲಿ ಒಂದು ಶಂಕೆ ಮೂಡಿತ್ತು, ಬೆಳಗ್ಗಿನ ಜಾವ ನಿದ್ದೆ ಬರುತ್ತಿರಲಿಲ್ಲ, ಅದಕ್ಕಾಗಿ ಜ್ಯೋತಿಷಿಗಳ ಬಳಿ ಪ್ರಶ್ನೆ ಕಳಿಸಿದ್ದೆ..
ಪಂಚ ಮಹಾವೈಭವ ದೃಶ್ಯರೂಪಕ ನಡೆಯುವ ವೇದಿಕೆ ಮುಂಭಾಗದ ಬೃಹತ್ ತಾತ್ಕಾಲಿಕ ಚಪ್ಪರ ಕುಸಿದಿರುವ ಬಗ್ಗೆ ಹೀಗೆಂದವರು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ.
ಸಭಾ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ಅವರು, ಕೆಲದಿನಗಳಿಂದ ಸರಿಯಾಗಿ ನಿದ್ದೆ ಮಾಡಲಾಗಿಲ್ಲ, ಯಾಕೋ ಏನೋ ಸರಿಯಿಲ್ಲ ಎಂಬಂತಹ ಭಾವನೆ ನನ್ನಲ್ಲಿ ಬರುತ್ತಾ ಇತ್ತು. ಇದು ಯಾಕೆ ಎಂದು 15 ದಿನಗಳ ಹಿಂದೆ ಜ್ಯೋತಿಷಿಗಳಿಗೆ ತಿಳಿಸಿದೆ. ಇದಕ್ಕೆ ಯಾವುದೋ ವಿಘ್ನವಾಗುವ ಲಕ್ಷಣವಿದೆ, ಹಾಗಾಗಿ ಪೂಜೆಯೊಂದನ್ನು ಮಾಡಿಸುವಂತೆ ಸೂಚಿಸಿದ್ದರು, ಅದನ್ನು ಮಾಡಿಸಿದೆ, ಜ್ಯೋತಿಷಿಗಳ ಮಾತು ನಿಜವಾಗಿದೆ, ಆದರೆ ಯಾವುದೇ ದೊಡ್ಡ ಅಪಾಯವಾಗಲಿಲ್ಲ, ಈ ಘಟನೆ ಖಂಡಿತವಾಗಿ ಸಣ್ಣದಲ್ಲ ಎಂದರು.
ಒಂದು ಗಂಟೆ ಮೊದಲು ಈ ಘಟನೆ ನಡೆದಿದ್ದರೆ ನಾವೆಲ್ಲರೂ ಅದರೊಳಗಿರುತ್ತಿದ್ದೆವು, ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದೆವು. ಆದರೆ ಜೈನ ಮಠಗಳ ಆಚಾರ್ಯರ ಸಾನ್ನಿಧ್ಯ, ಅವರ ತಪಸ್ಸಿನ ಕಾರಣದಿಂದಾಗಿ ಶಕ್ತಿಯೊಂದು ಜಾಗೃತವಾಗಿ ಅಪಾಯವನ್ನು ದೂರವಿಟ್ಟಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ದುರಂತ ತಪ್ಪಿಸಿದ್ದಾರೆ ಎಂದರು.

 ಗಾಳಿಸುದ್ದಿಗೆ ಕಿವಿಗೊಡದಿರಿ: ಗಾಳಿಗೆ ಪಂಚಮಹಾವೈಭವ ವೇದಿಕೆಯ ಚಪ್ಪರ ಗಾಳಿಯಿಂದ ಭಾಗಶಃ ಕುಸಿದಿದ್ದು, ನಾಲ್ವರಿಗೆ ಮಾತ್ರ ಸಣ್ಣಪುಟ್ಟ ಗಾಯವಾಗಿ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸಭೆ ಮುಗಿದು ಎಲ್ಲರೂ ಊಟಕ್ಕೆ ಹೋದ ಬಳಿಕ 30 ಮಂದಿ ಚಪ್ಪರದಡಿ ಇದ್ದು ಘಟನೆ ನಡೆದ ತಕ್ಷಣ ಎಲ್ಲರೂ ಹೊರಗೆ ಬಂದಿದ್ದಾರೆ. ಧರ್ಮಸ್ಥಳದಲ್ಲಿ ಶಾಂತಿಯಿಂದ ಮಸ್ತಕಾಭಿಷೇಕದ ಕಾರ್ಯಕ್ರಮಗಳು ನಿಗದಿಯಂತೆ ನಡೆಯುತ್ತಿವೆ. ಯಾವುದೇ ಗೊಂದಲವಿಲ್ಲ ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಸ್ಪಷ್ಟಪಡಿಸಿದೆ.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...