ಬಾಲಲೀಲೆಯಲ್ಲಿ ಬಾಹುಬಲಿಯ ತ್ಯಾಗದ ದರ್ಶನ

ಧರ್ಮಸ್ಥಳ: ವೃಷಭ ದೇವನ ಪುತ್ರ-ಪುತ್ರಿಯರ ಜನವಾಗುತ್ತಲೇ ಅಯೋಧ್ಯಾ ನಗರಿಯಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆಮಾಡಿತು.
21ನೇ ದಿನ ನಾಮಕರಣ ಮಹೋತ್ಸವ ನಡೆಯಿತು. ಹಿರಿಯ ಜ್ಯೋತಿಷಿ ಆಗಮಿಸಿ ಜನ್ಮ ಕುಂಡಲಿ ಪರಿಶೀಲಿಸಿದರು.

ಭರತನ ಜಾತಕ ನೋಡಿ 14 ಜೀವರತ್ನ 7 ಅಜೀವ ರತ್ನ ಒಲಿದು ಬರಲಿದೆ. ದಿಗ್ವಿಜಯ ಮಾಡಲಿದ್ದಾನೆ ಎಂದರೆ, ಬಾಹುಬಲಿಯ ಜಾತಕ ನೋಡಿ ರಾಜ-ತ್ಯಾಗ ಯೋಗ ಸಮಾನವಾಗಿ ಒಲಿದು ಬರಲಿದೆ. ಲಲಿತಕಲಾ ವೀರನಾಗಿ ಗೌರವ ತಂದುಕೊಡುವುದರ ಜತೆಗೆ ಭೂಮಿಯಲ್ಲಿ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎನ್ನುತ್ತಾರೆ. ಇತರ ಜಾತಕ ಪರಿಶೀಲಿಸಿ ಎಲ್ಲರೂ ಅತ್ಯುನ್ನತ ಯೋಗ ಉಳ್ಳವರು, ಆತ್ಮಯೋಗ ಸಾಧಿಸಿ ಕೈವಲ್ಯ ಲಕ್ಷ್ಮಿ ಸಾಧಿಸುವರು ಎಂದು ತಿಳಿಸುತ್ತಾರೆ.

ಗುರುಗಳಿಂದ ಪಾಠ ಪ್ರವಚನದಲ್ಲಿ ಎಲ್ಲರೂ ಪ್ರಶಂಸೆಗೊಳಗಾಗುತ್ತಾರೆ. ಪಾಠದ ಬಳಿಕ ಆಟ. ಆಟದ ವೇಳೆ ಭರತನ ಶಕ್ತಿ, ಬಾಹುಬಲಿಯ ಯುಕ್ತಿ ತ್ಯಾಗ ಗುಣದ ಪರಿಚಯವಾಗುತದೆ. ಗೋಶಾಲೆಯಿಂದ ತಪ್ಪಿಸಿಕೊಂಡು ಬಂದ ಗೂಳಿ ಮಕ್ಕಳು ಆಡುತ್ತಿದ್ದಲ್ಲಿಗೆ ಬರುತ್ತದೆ, ಭರತ ತನ್ನ ಶಕ್ತಿಯಿಂದ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದಾಗ ಬಾಹುಬಲಿ ಹಣ್ಣು ನೀಡಿ ಗೂಳಿಯನ್ನು ಸಮಾಧಾನಗೊಳಿಸುತ್ತಾನೆ. ಕಣ್ಣಾಮುಚ್ಚಾಲೆ ಆಟದಲ್ಲಿ ಪೆದ್ದನಾದ ಚದುರ ಸೋಲುವ ಹಂತದಲ್ಲಿ ತಾನೇ ಸೋತು ಆತನನ್ನು ಗೆಲ್ಲಿಸುವ ಮೂಲಕ ಸೋತು ಗೆಲ್ಲುತ್ತಾನೆ. ಚದುರಂಗ ಆಟದಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎಂದು ಭರತನಿಗೆ ತೋರಿಸುತ್ತಾನೆ. ಹಾವು ಏಣಿ ಆಟದಲ್ಲೂ ಸೋತವರು ಕುಗ್ಗಬಾರದು- ಗೆದ್ದವರು ಹಿಗ್ಗಬಾರದು ಎಂದು ತೋರಿಸಿಕೊಡುತ್ತಾನೆ. ಪುಣ್ಯಕೋಟಿ ಕಥೆಯನ್ನು ಆಟವಾಗಿ ಆಡಿ ಹುಲಿಯೂ ಸಾಯದಂತೆ, ದನವೂ ಸಾಯದಂತೆ ತೋರಿಸಿ ಅಹಿಂಸೆಯೇ ಪರಮ ಧರ್ಮ ಎಂದು ತೋರಿಸುತ್ತಾನೆ.

Leave a Reply

Your email address will not be published. Required fields are marked *