ಕುಂದಾಪುರ: ಬೈಂದೂರು ತಾಲೂಕಿನ ಬೋಳಂಬಳ್ಳಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ 27 ಅಡಿ (ಪೀಠ ಸಹಿತ) ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಪಂಚ ಕಲ್ಯಾಣ ಹಾಗೂ ಪ್ರತಿಷ್ಠಾ ಪೂರ್ವಕ ಮಹಾಮಸ್ತಕಾಭಿಷೇಕ ಹಾಗೂ ಪ್ರತಿಷ್ಠೋತ್ತರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಿತು.

ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಮಾರ್ಗದರ್ಶನದಲ್ಲಿ ಸೊಂದಾ ದಿಗಂಬರ ಜೈನ ಮಠದ ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಶುಕ್ರವಾರ ಮಸ್ತಕಾಭಿಷೇಕ ನಡೆಯಿತು.
ಭಗವಾನ್ ಶ್ರೀರಾಮಚಂದ್ರ ದೇವರ ರಾಜಕುಮಾರವಸ್ಥೆಯ 21 ಅಡಿ ಏಕಶಿಲಾ (ಪೀಠ ಸಹಿತ) ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.
ಮಹಾಮಸ್ತಕಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ಆಚಾರ್ಯ ಶ್ರೀ ಗುಲಾಭೂಷಣ ಮುನಿ ಮಹಾರಾಜರ ನೇತೃತ್ವದಲ್ಲಿ ಸಂಪನ್ನಗೊಂಡವು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಎರಡು ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು.
ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಧರ್ಮಸ್ಥಳದ ಹಷೇರ್ಂದ್ರ ಹೆಗ್ಗಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಅಳದಂಗಡಿ ಸೀಮೆಯ ಅರಸ ತಿಮ್ಮಣ್ಣರಸ ಅಜೀಲ, ಆಳ್ವಾಸ್ ಎಜುಕೇಶನ್ ಪ್ರತಿಷ್ಠಾನದ ಮೋಹನ್ ಆಳ್ವ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಭರತರಾಜ್ ಮೂಡಾರು, ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಕರುಣಾಕರ್ ಶೆಟ್ಟಿ, ಶೋಭಾ ಶಿವಕುಮಾರ್, ಶ್ರೀ ಕ್ಷೇತ್ರ ಒಡಂಬೈಲು ಧರ್ಮಾಧಿಕಾರಿ ವೀರರಾಜಯ್ಯ, ಶಿವಾನಂದ ಪ್ರಭು ಬೈಂದೂರು, ವೆಂಕಟೇಶ್ ಕಿಣಿ, ಸುರೇಶ್ ಶೆಟ್ಟಿ ಉಪ್ಪುಂದ, ಕೊಲ್ಲೂರು ದೇವಸ್ಥಾನದ ಟ್ರಸ್ಟಿ, ಮಹಾಲಿಂಗ ನಾಯ್ಕ, ವಕೀಲರಾದ ಮಯೂರ್ ಕೀರ್ತಿ, ಜಿನೇಂದ್ರ ವಕೀಲರು. ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್, ಡಾ.ರೋಷನ್ ಶೆಟ್ಟಿ, ಶಾಂತರಾಮ್ ಶೆಟ್ಟಿ ಬಾರ್ಕೂರು, ವಸಂತ್ ಗಿಳಿಯಾರ್, ಅಭಿಜಿತ್ ಎಂ., ವೃಷಭ್ ರಾಜ್ ಕಡಂಬ, ಸಂತೋಷ್ ಕುಮಾರ್ ಜೈನ್, ಪದ್ಮಪ್ರಸಾದ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು.
ಆಳುಪ ಅರಸು ಮನೆತನ ಹಾಗೂ ಶ್ರೀ ಕ್ಷೇತ್ರ ಬೋಳಂಬಳ್ಳಿ ಧರ್ಮದರ್ಶಿ ಧರ್ಮರಾಜ್ ಜೈನ್, ವನಿತಾ ಧರ್ಮರಾಜ್ ಮತ್ತು ಕುಟುಂಬಸ್ಥರಾದ ಅನಿಲ್ ಕುಮಾರ್, ಡಾ.ಆಕಾಶ್ ರಾಜ್ ಜೈನ್, ಡಾ.ಅಕ್ಷತಾ ಆದರ್ಶ್, ಪಾವನ, ಖಜಾಂಚಿ ನಾಗರಾಜ್ ಜೈನ್ ಬೋಳಂಬಳ್ಳಿ ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.