ಪ್ರವಾಹಕ್ಕೆ ಬೆಳೆ ನಾಶ: ಸಾಲಕ್ಕೆ ಹೆದರಿ ಯುವದಂಪತಿ ಆತ್ಮಹತ್ಯೆಗೆ ಶರಣು

ಬಾಗಲಕೋಟೆ: ಭೀಕರ ಪ್ರವಾಹಕ್ಕೆ ಸಿಲುಕಿ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಶಿವಲೀಲಾ ಬೆಳ್ಳಿ (21), ರಮೇಶ ಬೆಳ್ಳಿ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ನೇಣು ಬಿಗಿದುಕೊಂಡು ರಮೇಶ್​ ಸಾವಿಗೀಡಾದರೆ, ವಿಷ ಸೇವಿಸಿ ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂದಕೇಶ್ವರ ಪಿಕೆಪಿಎಸ್​ನಲ್ಲಿ ಟ್ರ್ಯಾಕ್ಟರ್ ಮೇಲೆ 1,98,262 ರೂ. ಸಾಲ, ಬೆಳೆಸಾಲ 50 ಸಾವಿರ ರೂ., ಪಟ್ಟದಕಲ್ಲಿನ ಕಾಳಿದಾಸ ಬ್ಯಾಂಕ್​ನಲ್ಲಿ ನೀರಾವರಿ ಹಾಗೂ ಹೊಲಕ್ಕೆ ಒಡ್ಡು ಹಾಕಲು 4.50 ಲಕ್ಷ ರೂ. ಸಾಲ, ಹೊಸೂರ ಗ್ರಾಮದ ಐಡಿಎಫ್​ಸಿ ಬ್ಯಾಂಕ್​ನಲ್ಲಿ 30,775 ರೂ. ಸಾಲ ಸೇರಿದಂತೆ ಒಟ್ಟು 7.19 ಲಕ್ಷ ರೂ. ಸಾಲ ಮಾಡಿದ್ದರು.

6 ಎಕರೆ ಜಮೀನಿನಲ್ಲಿ ಸೂರ್ಯಕಾಂತಿ, ಈರುಳ್ಳಿ ಹಾಗೂ ಗೋವಿನಜೋಳ ಬೆಳೆದಿದ್ದರು. ಆದರೆ, ಪ್ರವಾಹಕ್ಕೆ ಸಿಲುಕಿ ಬೆಳೆನಾಶವಾದ ಹಿನ್ನೆಲೆಯಲ್ಲಿ ಸಾಲಕ್ಕೆ ಹೆದರಿ ಯುವ ದಂಪತಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *