ನಾಲ್ವರು ನಕಲಿ ಪತ್ರಕರ್ತರ ಬಂಧನ

ಬಾಗಲಕೋಟೆ: ವಾರಪತ್ರಿಕೆ ಮೇಲೆ ಸಿಬಿಐ ಎಂದು ಪದ ಬಳಸಿ ಜನರಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ನಕಲಿ ಪತ್ರಕರ್ತರನ್ನು ಬಂಧಿಸಿ ಸೆಕ್ಷನ್ 416, 420 ರ ಅಡಿಯಲ್ಲಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯ ಹುನಗುಂದ ಮೂಲದವರಾದ ಗುರುರಾಜ ರೇವಡಿ, ಸಂಗಪ್ಪ ಚಲವಾದಿ, ಮಳೇಂದ್ರಗೌಡ ಭೀಮನಗೌಡರ, ಬಸವರಾಜ ಗಡ್ಡಿ ಬಂಧಿತ ನಕಲಿ ಪತ್ರಕರ್ತರಾಗಿದ್ದಾರೆ. ಆರೋಪಿತರು ಎಸ್‌ಪಿ ಕಚೇರಿ ಮುಂದೆ ನಿಂತು ಸಿಬಿಐ ಎಂದು ಫೇಸ್‌ಬುಕ್‌ನಲ್ಲೂ ಬರೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ನವನಗರ ಪೊಲೀಸರು ತನಿಖೆ ನಡೆಸಿದ್ದಾರೆ