ಸೂತಕದಲ್ಲಿ ಸಂಭ್ರಮ ಬೇಡ

ಬಾಗಲಕೋಟೆ: ಯೋಧರ ಅಗಲಿಕೆಯ ನೋವಿನ ಸಂದರ್ಭದಲ್ಲಿ ಬಡೆ ಇಜ್ತೆಮಾ ಕಾರ್ಯಕ್ರಮ ನಡೆಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ನಾಗರಿಕ ಹಿತ ರಕ್ಷಣೆ ವೇದಿಕೆ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಮೂಲಕ ಆಗಮಿಸಿದ ವೇದಿಕೆ ಕಾರ್ಯಕರ್ತರು ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪ್ರತಿಭಟನೆ ನಡೆಸಿದರು.

ಭಯೋತ್ಪಾದಕರ ದಾಳಿಗೆ ವೀರ ಸೇನಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಅಗಲಿಕೆಯಿಂದ ದೇಶ ದುಃಖದಲ್ಲಿದೆ. ಇಂತಹ ಸಂದರ್ಭದಲ್ಲಿ ಬಡೆ ಇಜ್ತೆಮಾ ಕಾರ್ಯಕ್ರಮ ನಡೆಸುತ್ತಿರುವುದು ಸರಿಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕರು ಕಣ್ಣೀರು ಹಾಕುತ್ತಿರುವ ವೇಳೆ ಸಂಭ್ರಮದ ಕಾರ್ಯಕ್ರಮ ಮಾಡುತ್ತಿರುವುದು ಖೇದಕರ ಸಂಗತಿ ಬೇಸರ ವ್ಯಕ್ತಪಡಿಸಿದರು.

ಪ್ರಶಾಂತ ಪವಾರ, ವಿಜಯ ಸುಲಾಖೆ, ಕುಮಾರಸ್ವಾಮಿ ಹಿರೇಮಠ, ವಿಕ್ರಮ್ ದೇಶಪಾಂಡೆ, ನಾಗೇಶ ಅಂಬಿಗೇರ, ಮಹಾಂತೇಶ ಮಡಿವಾಳರ, ಬಸವರಾಜ ಕಟಗೇರಿ ಪ್ರತಿಭಟನೆಯಲ್ಲಿ ಇದ್ದರು.

One Reply to “ಸೂತಕದಲ್ಲಿ ಸಂಭ್ರಮ ಬೇಡ”

Comments are closed.