Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಹಲಸಿನ ಹಣ್ಣಿಗಾಗಿ ಸೆಲ್ಫಿ ಕೇಂದ್ರ ತೆರೆಯಲು ಮುಂದಾದ ಬಾಗಲಕೋಟೆ ವಿಶ್ವವಿದ್ಯಾಲಯ

Friday, 05.01.2018, 8:34 AM       No Comments

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ತನ್ನ ಆವರಣದಲ್ಲಿ ಸೆಲ್ಫಿ ಕೇಂದ್ರವೊಂದನ್ನು ತೆರೆಯಲು ನಿರ್ಧರಿಸಿದ್ದು, ಇದಕ್ಕಾಗಿ ವಿಶ್ವವಿದ್ಯಾಯಲದ ಮುಖ್ಯ ಆಡಳಿತ ಕಟ್ಟಡದ ಮುಂಭಾಗವಿರುವ ಪ್ರತಿಮೆಯನ್ನು ಆಯ್ಕೆ ಮಾಡಿಕೊಂಡಿದೆ.

ಪ್ರತಿಮೆಯ ವಿಶೇಷ
ಸೊಂಟದಲ್ಲಿ ಮಗುವನ್ನು ಹಿಡಿದಕೊಂಡು ತಲೆಯ ಮೇಲೆ ಹಲಸಿನ ಹಣ್ಣು ಹೊತ್ತುಕೊಂಡಿರುವ ಮಹಿಳಾ ಪ್ರತಿಮೆ ಇದಾಗಿದ್ದು, ಈ ವಿಶೇಷ ಹಣ್ಣು ಜಗತ್ತಿನ ಹಸಿವನ್ನು ನೀಗಿಸಬಲ್ಲದು ಎಂಬ ಸಂಕೇತ ಸೂಚಿಸುತ್ತದೆ.

ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಡಿ. ಎಲ್​. ಮಹೇಶ್ವರ್​ ಈ ಬಗ್ಗೆ ಮಾತನಾಡಿ, ಈ ಪ್ರತಿಮೆಯನ್ನು ಒಂದು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದ್ದು, ಇದೀಗ ಅದನ್ನು ಸೆಲ್ಫಿ ಕೇಂದ್ರವನ್ನಾಗಿ ಮಾಡುವ ಯೋಜನೆ ಮಾಡಲಾಗಿದೆ. ಅದಕ್ಕಾಗಿ ಕೆಲವು ಪೀಠೋಪಕರಣ ಹಾಗೂ ಸಣ್ಣ ವಸ್ತುಗಳನ್ನು ಬೇಕಾಗಿದ್ದು, ಅದನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.

ವಿಶ್ವವಿದ್ಯಾಲಯವು ಇಂತಹ ಸುಮಾರು ಅರ್ಧ ಡಜನ್​ ಪ್ರತಿಮೆಗಳ ವಿನ್ಯಾಸವನ್ನು ಮಾಡಿದೆ. ಒಂದೊಂದು ಪ್ರತಿಮೆಯೂ ವಿಭಿನ್ನವಾಗಿದ್ದು, ಬೇರೆ ಬೇರೆ ತೋಟಗಾರಿಕೆ ಅಂಶಗಳ ಮೇಲಿನ ಬೆಳಕು ಚೆಲ್ಲುತ್ತವೆ ಎಂದಿದ್ದಾರೆ.

ವಿಶ್ವವಿದ್ಯಾಲಯವು ಹಲಸಿನ ಹಣ್ಣಿಗೆ ವಿಶೇಷ ಹೊತ್ತನ್ನು ನೀಡಿದೆ. ಎಲ್ಲಾ ಪ್ರತಿಮೆಗಳಲ್ಲಿಯೂ ಇದರ ಇರುವಿಕೆಯ ಬಗ್ಗೆ ಯೋಚಿಸಿದ್ದು, ಹಲಸಿನ ಹಣ್ಣಿನ ಪ್ರಚಾರಕ್ಕಾಗಿ ವಿಜ್ಞಾನಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ಇದೆ.

ವಿಶ್ವವಿದ್ಯಾನಿಲಯವು ಹಲಸಿನ ಹಣ್ಣಿನ ಪ್ರಚಾರಕ್ಕಾಗಿ ಸುಧಾರಿತ ಕೇಂದ್ರವನ್ನು ಹೊಂದಿದ್ದು, ಇದರಲ್ಲಿ ವಿಜ್ಞಾನಿಗಳು, ಸಂಶೋಧಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹಲವಾರು ಸಂಶೋಧನಾ ಕಾರ್ಯಕ್ರಮಗಳನ್ನು ಅಳವಡಿಸಲಾಗಿದೆ.

ನಾವು ಹಲಸಿನ ಪ್ರಭೇದಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದೇವೆ ಮತ್ತು ತಾಂತ್ರಿಕ ಕಾರ್ಯಕ್ರಮಗಳು ಮತ್ತು ರೈತರಿಗೆ ವಿತರಿಸಲಾದ ಸಸಿಗಳನ್ನು ನಡೆಸುವ ವಿಶೇಷ ಹಲಸಿನ ಪ್ರಚಾರ ಕಾರ್ಯಕ್ರಮಗಳು ನಡೆಸುತ್ತಿದ್ದೇವೆ. ಬಹುಶಃ ನಾವು ಕರ್ನಾಟಕದಲ್ಲಿ ಹಲಸಿನ ಹಣ್ಣಿನ ಶ್ರೀಮಂತ ಸಂಪತ್ತನ್ನು ಹೊಂದಿದ್ದೇವೆ ಎಂದು ಉಪ ಕುಲಪತಿ ಹೇಳಿದ್ದಾರೆ.

ಕನ್ನಡ ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀ ಪಡ್ರೆ ಅವರು ಜಾಗತಿಕ ಹಲಸಿನ ರಾಯಭಾರಿಯಾಗಿದ್ದಾರೆ ಎಂದು ಉಪ ಕುಲಪತಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top