ಬಳ್ಳಾರಿ ಗುಂಪಿಗೆ ಜಯ

ಬಾಗಲಕೋಟೆ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಗುಂಪು ಮೇಲುಗೈ ಸಾಧಿಸಿದೆ.

ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಪುನಾರಾಯ್ಕೆಗೊಂಡಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ವಿಠ್ಠಲ ವಾಲಿಕಾರ, ಖಜಾಂಚಿಯಾಗಿ ಎಸ್.ಕೆ. ಹಿರೆಮಠ ಆಯ್ಕೆಯಾಗಿದ್ದಾರೆ. ರಾಜ್ಯ ಪರಿಷತ್‌ಗೆ ಎಸ್.ವಿ.ಸತ್ಯರೆಡ್ಡಿ ಆಯ್ಕೆಯಾಗಿದ್ದಾರೆ. 67 ಸದಸ್ಯ ಬಲದ ಜಿಲ್ಲಾ ಸಂಘಕ್ಕೆ ಬಳ್ಳಾರಿ ಗುಂಪು ಭಾರಿ ಮತ ಪಡೆದು ಆಯ್ಕೆಯಾಗಿದೆ. ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

 

Leave a Reply

Your email address will not be published. Required fields are marked *