ಕಲುಷಿತ ನೀರು ನದಿಗೆ ಸೇರದಂತೆ ಕ್ರಮ

ಬಾಗಲಕೋಟೆ: ನದಿಯ ಪಕ್ಕದ ಗ್ರಾಮ ಹಾಗೂ ಪಟ್ಟಣಗಳಿಂದ ಬರುವ ಕಲುಷಿತ ನೀರು ನದಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಕಾರಿ ಆರ್.ರಾಮಚಂದ್ರನ್ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು.

ಜಿಲ್ಲಾಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಮಾಲಿನ್ಯ ನಿಯಂತ್ರಣ ಕುರಿತು ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲುಷಿತ ನೀರನ್ನು ನದಿಗೆ ಹರಿಬಿಡುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಕುಸಿಯುತ್ತದೆ. ಯಾವುದೇ ಕಾರಣಕ್ಕೂ ಕಲುಷಿತ ನೀರು ನದಿಗೆ ಸೇರದಂತೆ ಕ್ರಮವಹಿಸಲು ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಕೃಷ್ಣಾ ನದಿ ಪಕ್ಕದ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ, ಮದನಮಟ್ಟಿ ಹಾಗೂ ಆಸಂಗಿ ಗ್ರಾಮಗಳ ಕೊಳಚೆ ನೀರು ನದಿಗೆ ಹರಿಯದಂತೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಜಿಪಂ ಉಪಕಾರ್ಯದರ್ಶಿ ಎಸ್.ಎಸ್.ಹಿರೇಮಠ ಅವರಿಗೆ ಸೂಚಿಸಿದರು. ಅಲ್ಲದೆ, ಜಿಲ್ಲೆಯ ಗ್ರಾಮ ಮತ್ತು ನಗರ ಪ್ರದೇಶದಲ್ಲಿರುವ ಸಾಮೂಹಿಕ ಶೌಚಗೃಹಗಳ ಇರುವ ಸಂಖ್ಯೆ ಎಷ್ಟು, ಅದರಲ್ಲಿ ಬಳಕೆಯಾಗುತ್ತಿರುವ ಹಾಗೂ ಬಳಕೆಯಾಗದೆ ಇರುವ ಶೌಚಾಲಯಗಳ ಮಾಹಿತಿ ನೀಡಬೇಕು. ಅದರಲ್ಲಿ ಎಷ್ಟು ಸಾಮೂಹಿಕ ಶೌಚಗೃಹಗಳಿಗೆ ನೀರಿನ ವ್ಯವಸ್ಥೆ, ನಿರ್ವಹಣೆ ಕೈಗೊಂಡ ಮಾಹಿತಿ ಕೂಡ ಸಲ್ಲಿಸಬೇಕು ಎಂದು ಅಕಾರಿಗಳಿಗೆ ನಿರ್ದೇಶನ ನೀಡಿದರು.

ಮೊದಲು ನಗರ ಪ್ರದೇಶಗಳು ಮಾಲಿನ್ಯದಿಂದ ಮುಕ್ತಿಗೊಂಡು ಮಾದರಿ ನಗರಗಳಾಗಿ ಪರಿವರ್ತನೆಗೊಳ್ಳಬೇಕು. ಅದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿಯೂ ಮಾಲಿನ್ಯ ನಿಯಂತ್ರಿಸುವ ಕೆಲಸವಾಗಬೇಕು ಎಂದರು. ಈ ವೇಳೆ ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿದ ತೇರದಾಳ ಪಟ್ಟಣ ಪಂಚಾಯಿತಿ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸಭೆಯಿಂದ ಹೊರಗೆ ಕಳಹಿಸಿದರು.

ರಸ್ತೆ ಬದಿಯಲ್ಲಿ ಹಾಗೂ ಎಲ್ಲೆಂದರಲ್ಲಿ ಕಸ ಹಾಕುತ್ತಿರುವವರ ಮೇಲೆ ದಂಡ ಹಾಕಬೇಕು. ಶುಗರ್ಸ್ ್ಯಾಕ್ಟರಿಗಳಿಂದ ಬರುವ ಕಲುಷಿತ ನೀರು ನದಿಗೆ ಸೇರುತ್ತಿರುವ ಬಗ್ಗೆ ದೂರುಗಳು ಹಾಗೂ ಮರೆಗುದ್ದಿ ಗ್ರಾಮದಲ್ಲಿ ಶುಗರ್ಸ್ ್ಯಾಕ್ಟರಿಗಳಿಂದ ಮಾಲಿನ್ಯ ಆಗುತ್ತಿರುವ ಬಗ್ಗೆ ಪಿಸಿಬಿ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಸಿದವರಿಗೆ ನೋಟಿಸ್ ನೀಡಲು ಸೂಚಿಸಿದರು. ಇಟ್ಟಂಗಿ ಬಟ್ಟಿಗಳಿಂದ ಉಂಟಾಗುವ ಮಾಲಿನ್ಯ ಸಹ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಕಾರಿ ಸೂಚನೆ ನೀಡಿದರು. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಕಾರಿ ಎಂ.ಎ.ಮನಿಯಾರ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಿಯಾಯೋಜನೆ ಬಗ್ಗೆ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್.ಎಸ್.ಹಿರೇಮಠ, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ರಬಕವಿ-ಬನಹಟ್ಟಿ ನಗರಸಭೆಯ ಆಯುಕ್ತ ಆರ್.ಎಂ.ಕೊಡಗಿ, ಕೆಯುಐಡಿಎಪ್‌ಸಿಯ ಎಇ ಎಸ್.ಎಸ್.ಹತ್ತಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಕಾರಿಗಳು ಉಪಸ್ಥಿತರಿದ್ದರು.

ರಬಕವಿ-ಬನಹಟ್ಟಿ ನಗರಸಭೆಯು ಮನೆ ಮತ್ತು ಶೌಚಗೃಹಗಳಿಂದ ನಿರೂಪಯುಕ್ತವಾದ ನೀರನ್ನು ಒಂದೆಡೆ ಸಂಗ್ರಹಿಸಿ ಶುದ್ಧೀಕರಿಸುವ ಕಾರ್ಯ ಕೈಗೊಂಡಿದ್ದು, ಶುದ್ಧೀಕರಿಸಿದ ನೀರನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಶುದ್ಧೀಕರಿಸಿದ ನೀರು ಬಿಸಿಲರಿ ನೀರಿನಂತೆ ಇದ್ದು, ಅದನ್ನು ಕುಡಿಯಲು ಮಾತ್ರ ಬಳಸದೆ ಇತರ ಉದ್ದೇಶಗಳಿಗೆ ಹಾಗೂ ಜಮೀನುಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಯುಐಡಿಎಫ್‌ಸಿಯ ಸಹಾಯಕ ಇಂಜಿನಿಯರ್ ಎಸ್.ಎಸ್.ಹತ್ತಿ (8277222159) ಅವರನ್ನು ಸಂಪರ್ಕಿಸಬಹುದಾಗಿದೆ.
– ಆರ್.ರಾಮಚಂದ್ರನ್ ಜಿಲ್ಲಾಕಾರಿ, ಬಾಗಲಕೋಟೆ

Leave a Reply

Your email address will not be published. Required fields are marked *