20.4 C
Bengaluru
Sunday, January 19, 2020

ಶಿಸ್ತಿನ ಪಾಠ ಹೇಳಿದ ಗುರುಗಳಿಗೆ ನಮನ

Latest News

ತುಂಗಭದ್ರಾ ನದಿಯಲ್ಲಿ ದಂಪತಿ ಶವ ಪತ್ತೆ

ಗುತ್ತಲ: ದಂಪತಿ ಶವಗಳು ಸಮೀಪದ ಹಾವೇರಿ- ಬಳ್ಳಾರಿ ಜಿಲ್ಲೆಗಳ ಸಂಪರ್ಕ ಸೇತುವೆ ಕಳೆಗೆ ತುಂಗಭದ್ರಾ ನದಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿವೆ.

ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿ

ಹಾನಗಲ್ಲ: ನೌಕರರು ಸರ್ಕಾರಕ್ಕೆ ಬೇಡಿಕೆ ಇಡುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಪ್ರಾಮಾಣಿಕವಾಗಿ ಸಹಕರಿಸಬೇಕು. ಸರ್ಕಾರ-ನೌಕರರ ಸಂಘಟನೆ ಒಂದಾಗಿ ಶ್ರಮಿಸಬೇಕು ಎಂದು ಸರ್ಕಾರಿ ನೌಕರರ...

ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ...

ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ

ಹಾವೇರಿ: ಅಂಗವಿಕಲರಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ...

ಆಯುಷ್ಮಾನ್ ಭಾರತಕ್ಕೆ ಅನಾರೋಗ್ಯ

ಶಂಕರ ಶರ್ಮಾ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಯುಷ್ಮಾನ್ ಭಾರತ ಆರೋಗ್ಯ ಸೇವಾ ಕೇಂದ್ರವು ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿದ್ದು,...

ಬಾಗಲಕೋಟೆ: ಅವರೆಲ್ಲ ಒಂದೇ ಕಡೆ ತರಬೇತಿ ಪಡೆದು ಪೊಲೀಸ್ ಇಲಾಖೆಗೆ ಸೇರಿದವರು. ಒಂದೇ ಇಲಾಖೆಯಲ್ಲಿ ಅಕ್ಕಪಕ್ಕದ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಒಟ್ಟಾಗಿ ಸೇರಿರಲಿಲ್ಲ. 25 ವರ್ಷಗಳ ಬಳಿಕ ಸಹದ್ಯೋಗಿಗಳೆಲ್ಲ ಒಂದೆಡೆ ಸೇರಿ ಸಂಭ್ರಮಿಸಿ ಅಪರೂಪದ ಸಮ್ಮಿಲನಕ್ಕೆ ಸಾಕ್ಷಿಯಾದರು.

ಹೌದು, ಪೊಲೀಸ್ ಇಲಾಖೆಯ 1994ನೇ ಬ್ಯಾಚ್‌ನ ಅಖಂಡ ವಿಜಯಪುರ (ವಿಜಯಪುರ-ಬಾಗಲಕೋಟೆ) ಜಿಲ್ಲೆಯ ಪೊಲೀಸ್ ತಂಡದ ಸ್ನೇಹ ಸಮ್ಮಿಲನಕ್ಕೆ ಬಾಗಲಕೋಟೆ ನಗರ ಸಾಕ್ಷಿಯಾಯಿತು.

ನವನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಪೊಲೀಸ್ ಇಲಾಖೆಗೆ ಹೊಸ ಭಾಷೆ ಬರೆಯಿತು. ಸದಾ ಒತ್ತಡದಲ್ಲಿ ಬದುಕಿನ ಕ್ಷಣಗಳನ್ನು ಕಳೆಯುವ ಪೊಲೀಸ್ ಇಲಾಖೆ ಸಿಬ್ಬಂದಿ ಬಹಳ ವರ್ಷಗಳ ನಂತರ ಕುಟುಂಬದವರೊಂದಿಗೆ ಒಂದೆಡೆ ಸೇರಿ ಸಂತಸಪಟ್ಟರು. ಸೇವೆಗೆ ಅವಕಾಶ ಕೊಟ್ಟು ಇಲಾಖೆಯ ಶಿಸ್ತು, ಸಂಯಮ, ಸಮಯ ಪ್ರಜ್ಞೆ ತಿಳಿಸಿಕೊಟ್ಟ ಗುರುವೃಂದಕ್ಕೆ ವಂದನೆ ಸಲ್ಲಿಸಿದರು. ಅಕಾಲಿಕವಾಗಿ ಸಾವಿಗೀಡಾದ ಸಹಪಾಠಿಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಬಸವಪ್ರಭು ಕೊಕಟನೂರ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಒತ್ತಡದ ಬದುಕು ಸಾಗಿಸುವ ಪೊಲೀಸ್ ಸಿಬ್ಬಂದಿ ಒಂದು ಕಡೆ ಸೇರಿ ಸಂಭ್ರಮಿಸುವುದು ತೀರಾ ವಿರಳ. ಅಖಂಡ ವಿಜಯಪುರ ಜಿಲ್ಲೆ ಇದ್ದಾಗ ಪೊಲೀಸ್ ನೇಮಕಾತಿ ಸಂದರ್ಭದಲ್ಲಿ ಸೇವೆಗೆ ಸೇರಿದ 1994 ರ ಬ್ಯಾಚ್‌ನ ಪೊಲೀಸ್ ತಂಡ ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮ ಮಾಡಿದೆ ಎಂದು ಶ್ಲಾಘಿಸಿದರು.

ನಾವು ಉನ್ನತ ಹುದ್ದೆ ಅಲಂಕರಿಸಿದರೂ ಬದುಕಿನಲ್ಲಿ ಏನೇ ಬದಲಾವಣೆಯಾದರೂ ಸರಳವಾಗಿ ಜೀವನ ಸಾಗಿಸುವುದನ್ನು ರೂಢಿಸಿಕೊಳ್ಳಬೇಕು. ಇಂಥ ಜೀವನ ಶೈಲಿ ನಮ್ಮನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ಯಾವುದೇ ಪದವಿ ಇರಲಿ ಗೌರವಯುತವಾಗಿ ಬದುಕಬೇಕು ಎಂದರು.

ನೇಮಕಾತಿ ಸಂದರ್ಭದಲ್ಲಿ ನನಗೆ ಅನೇಕ ಒತ್ತಡಗಳು ಬಂದರೂ ಯಾವುದಕ್ಕೂ ಜಗಲಿಲ್ಲ. ಮೆರಿಟ್ ಆಧಾರ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿದೆ ಎಂದು ಹೇಳಿದರು.

ಪ್ರಾಮಾಣಿಕತೆ, ಸತ್ಯ, ನಿಷ್ಠೆಯಿಂದ ಬದುಕಿದರೆ ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಮಯ ಪ್ರಜ್ಞೆ ಮರೆಯಬಾರದು. ಕೇವಲ ಪೊಲೀಸ್ ಆಗಿದ್ದೇನೆ ಎಂದು ಬೇಸರಪಡಬಾರದು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಇಲಾಖೆಯಲ್ಲಿ ದೊಡ್ಡ ಹುದ್ದೆ ಅಲಂಕರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪೊಲೀಸ್ ಅಧೀಕ್ಷಕ ರಾಜಣ್ಣ ಅಂಗಡಿ ಮಾತನಾಡಿ, ಪೊಲೀಸ್ ಇಲಾಖೆ ಒಂದು ಕುಟುಂಬ ವಿದ್ದಂತೆ. ಒಂದೇ ಬ್ಯಾಚ್‌ನ ಸಹೋದ್ಯೋಗಿಗಳು ರಜತ ಮಹೋತ್ಸವ ಹಿನ್ನೆಲೆ ಒಂದಾಗಿರುವುದು ಸಂತಸದ ವಿಚಾರ ಎಂದರು.

ಪೊಲೀಸ್ ಇಲಾಖೆಯಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಸಿಬ್ಬಂದಿ ಅಮಾನತು ಮಾಡುವುದು ದೊಡ್ಡ ಶಿಕ್ಷೆಯಲ್ಲ. ತಪ್ಪು ತಿದ್ದಿ ಉತ್ತಮ ಸೇವೆ ಸಲ್ಲಿಸಲು ಅವಕಾಶ ನೀಡುವುದು ಬಹು ಮುಖ್ಯವಾಗಿದೆ ಎಂದ ಅವರು, ಪೊಲೀಸ್ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದ ಕಡೆ ಗಮನ ಕೊಡಬೇಕು. ಒತ್ತಡಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ನಿವೃತ್ತ ಪೊಲೀಸ್ ಉಪಾಧೀಕ್ಷಕ ಎಸ್.ಕೆ.ನಾಯಕ, ನಿವೃತ್ತ ಆರ್‌ಎಸ್‌ಐಗಳಾದ ಎಸ್.ಬಿ.ಉಣ್ಣೀಭಾವಿ, ಆರ್.ಎಂ.ಜಗಲಿ, ಅಧಿಕಾರಿಗಳಾದ ಎ.ಎಚ್.ಕಲಾದಗಿ, ಎಸ್.ಎಲ್.ನಾಯಕ, ಬಿ.ವೈ.ಸುಧಾಕರ, ಡಿ.ಎಚ್.ತಾಳಿಕೋಟಿ, ಕೆ.ಡಿ.ಅಚನೂರ, ಎಸ್.ಎಂ.ಜಂಗಮಶೆಟ್ಟಿ, ಬಾಗಲಕೋಟೆ ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.

ಆ ಕಾಲಕ್ಕೆ ಪೊಲೀಸ್ ಇಲಾಖೆಗೆ ಸೇರುವುದು ಸವಾಲಾಗಿತ್ತು. ನಮ್ಮ ತಂಡದ ಸದಸ್ಯರು ಬಡ ಕುಟುಂಬದಿಂದ ಬಂದವರು. ಅಂದು ವಿಜಯಪುರ ಎಸ್ಪಿ ಆಗಿದ್ದ ಬಸವಪ್ರಭು ಕೊಕಟನೂರ ಯಾವುದನ್ನೂ ನೋಡಲಿಲ್ಲ. ನೇರ ಸಂದರ್ಶನ ಮಾಡಿ ಮೆರಿಟ್ ಆಧಾರ ಮೇಲೆ ನೇಮಕಾತಿ ಮಾಡಿಕೊಂಡರು. ನಮ್ಮ ಪಾಲಿನ ದೇವರು ಅವರು.
– ಅನಿಲ ಚವಾಣ್ (1994ನೇ ಬ್ಯಾಚ್ ಸಿಬ್ಬಂದಿ)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...