ಹಳಿ ಮಧ್ಯೆ ಮಲಗಿ ಜೀವ ಉಳಿಸಿಕೊಂಡ ವೃದ್ಧ!

ಬಾಗಲಕೋಟೆ: ರೈಲು ಚಲಿಸುವ ವೇಳೆ ವೃದ್ಧನೊಬ್ಬ ಹಳಿ ಮಧ್ಯೆ ಮಲಗಿ ಅದೃಷ್ಟವಶಾತ್ ಜೀವ ಉಳಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಬುಧವಾರ ಬೆಳಗ್ಗೆಯಿಂದ ಈ ವಿಡಿಯೋ ಜಿಲ್ಲಾದ್ಯಂತ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಮೂರು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.

ವೃದ್ಧನೊಬ್ಬ ಬಹಿರ್ದೆಸೆಗೆ ಹೋಗಿದ್ದ ವೇಳೆ ರೈಲು ಬಂದಿದೆ. ಆಗ ಜೀವ ಉಳಿಸಿಕೊಳ್ಳಲು ಹಳಿ ಮಧ್ಯೆ ಮಲಗಿದ್ದಾನೆ. ಅಲ್ಲಿಯೇ ಇದ್ದ ಕೆಲವರು ಆತನಿಗೆ ಧೈರ್ಯ ತುಂಬಿದ್ದಾರೆ. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಜೀವ ಉಳಿಸಿಕೊಂಡ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ.

 

Leave a Reply

Your email address will not be published. Required fields are marked *