ಮಹೇಶ ಕಕರಡ್ಡಿಗೆ ತಾಂತ್ರಿಕ ರತ್ನ ಪ್ರಶಸ್ತಿ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಹೇಶ ಕಕರಡ್ಡಿ ಅವರಿಗೆ 2019ನೇ ಸಾಲಿನ ಕರ್ನಾಟಕ ತಾಂತ್ರಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಯೋಜನೆ ಅನುಷ್ಠಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ಬೆಂಗಳೂರಿನ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಭಾ ಪುರಸ್ಕಾರ ಪ್ರತಿಷ್ಠಾನ ಟ್ರಸ್ಟ್ ಪದಾಧಿಕಾರಿಗಳು ಮಹೇಶ ಕಕರಡ್ಡಿ ಅವರಿಗೆ ತಾಂತ್ರಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಸಂತೋಷ ಶಿರಗುಪ್ಪಿ, ಮಹಾಂತೇಶ ಸಾತಿಹಾಳ, ಶೋಭಾ ಮೈಮನಿ, ಕವಿತಾ ಬಿಜಾಪುರ, ಹೀನಾ ವರ್ತರ್ ಇತರರು ಇದ್ದರು.

Leave a Reply

Your email address will not be published. Required fields are marked *