ಬೀದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ

ಬಾಗಲಕೋಟೆ: ರಾಜ್ಯದ ಎಲ್ಲ ಬಡವರು ಆರ್ಥಿಕವಾಗಿ ಸದೃಢವಾಗ ಬೇಕು. ಎಲ್ಲರಿಗೂ ಬ್ಯಾಂಕ್​ನಿಂದ ಸಾಲ ಸೌಲಭ್ಯ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆ ಬ್ಯಾಂಕ್​ಗಳಿಂದ ಪಡೆಯುವ ಸಾಲವನ್ನು ಅದೇ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳುವಂತೆ ಬಸವೇಶ್ವರ ಬ್ಯಾಂಕ್ ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ಬಾಗಲಕೋಟೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ ಹಾಗೂ ಬ್ಯಾಂಕ್ ಸಹಯೋಗದಲ್ಲಿ ಬಡವರ ಬಂಧು ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.

ಯೋಜನೆ ಅಡಿಯಲ್ಲಿ ಆಯ್ಕೆಯಾದ 22 ಫಲಾನುಭವಿಗಳಿಗೆ ಬಡ್ಡಿರಹಿತ ಸಾಲ ನೀಡಲಾಗಿದ್ದು, ಈ ಹಣವನ್ನು ತಮ್ಮ ವ್ಯಾಪಾರಕ್ಕೆ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ತಾವು ಆರ್ಥಿಕ ಸದೃಢರಾಗಿ, ಸರ್ಕಾರದ ಯೋಜನೆ ಯಶಸ್ವಿ ಗೊಳಿಸಬೇಕು ಎಂದರು.

ಆರ್ಥಿಕವಾಗಿ ಸ್ವಾವಲಂಬನೆ ಆಗಲು, ವ್ಯಾಪಾರ ವಹಿವಾಟು ನಡೆಸಲು ಸಾಲದ ಅಗತ್ಯ ಇದ್ದಲ್ಲಿ ಅಂತ ಬೀದಿ ವ್ಯಾಪಾರಸ್ಥರಿಗೆ ಬಸವೇಶ್ವರ ಬ್ಯಾಂಕ್ ನಿಂದ ಬಡ್ಡಿರಹಿತ ಸಾಲ ನೀಡಲಾಗುವುದು.

ಈ ಬಗ್ಗೆ ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರು, ಪಿಗ್ಮಿ ಸಂಗ್ರಹಗಾರನ್ನು ಸಂರ್ಪಸುವಂತೆ ಸಲಹೆ ನೀಡಿದರು. ಬಸವೇಶ್ವರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಣಗಾರ, ಬ್ಯಾಂಕಿನ ಸಲಹೆಗಾರರಾದ ಬಸವರಾಜ ನಾವಲಗಿ, ಪರಶುರಾಮ ಹಳ್ಳಿಕೇರಿ, ಬಸವರಾಜ ಯರನಾಳ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.