ದುಷ್ಕರ್ಮಿಯ ಕೃತ್ಯಕ್ಕೆ ಆಕ್ರೋಶ

ಬಾಗಲಕೋಟೆ: ನಗರದ ವಲ್ಲಭಬಾಯಿ ವೃತ್ತದಲ್ಲಿ ಶುಕ್ರವಾರ ಸಂಜೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಿಂದು ಪರ ಸಂಘಟನೆ ಕಾರ್ಯಕರ್ತರು ಹಮ್ಮಿಕೊಂಡು ಉಗ್ರರ ವಿರುದ್ಧ ಸಹಿ ಸಂಗ್ರಹ ನಾಮಫಲಕದ ಮೇಲೆ ದುಷ್ಕರ್ಮಿಯೊಬ್ಬ ‘ಅಲ್ತಾಫ್’ ಎಂದು ದಪ್ಪಕ್ಷರಗಳಲ್ಲಿ ಬರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ದುಷ್ಕರ್ಮಿಯು ಶ್ರದ್ಧಾಂಜಲಿ ಸಲ್ಲಿಸಿ ಸಹಿ ಸಂಗ್ರಹಕ್ಕೆ ಹಾಕಿದ್ದ ಫಲದಲ್ಲಿರುವ ಸಹಿಗಳನ್ನು ಅಳಿಸುವ ಪ್ರಯತ್ನ ಮಾಡಿದ್ದು, ಅದರಲ್ಲಿ ದಪ್ಪ ಅಕ್ಷರದಲ್ಲಿ ‘ಅಲ್ತಾಫ್’ ಎಂದು ಬರೆದಿದ್ದು ಹಿಂದೂ ಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿ ತಪ್ಪಿತಸ್ಥನನ್ನು ಬಂಧಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಸಂಘಟನಾ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆದು ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Leave a Reply

Your email address will not be published. Required fields are marked *