ಇಂದು ಉಪ ಚುನಾವಣೆ ಮತದಾನ

ಬಾಗಲಕೋಟೆ: ಅಕಾಲಿಕ ನಿಧನದಿಂದ ತೆರವಾಗಿದ್ದ ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯ ಮತದಾನ ಬುಧವಾರ ನಡೆಯಲಿದೆ.

ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮ ಪಂಚಾಯಿತಿ ಚೌಡಾಪುರ ಒಂದು ಸ್ಥಾನ (ಸಾಮಾನ್ಯ), ಹುನಗುಂದ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿಯ ವಡಗೇರಿ ಒಂದು ಸ್ಥಾನ (ಸಾ.ಮಹಿಳೆ), ಬೀಳಗಿ ತಾಲೂಕಿನ ಬಾಡಗಿ ಗ್ರಾಮ ಪಂಚಾಯಿತಿ ಬಾಡಗಿ (ಸಾಮಾನ್ಯ) ಒಂದು ಸ್ಥಾನಕ್ಕೆ ಸ್ಥಾನಕ್ಕೆ ಬುಧವಾರ ಮತದಾನ ನಡೆಯಲಿದೆ. ಮತದಾನ ಹಿನ್ನಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.

ಚೌಡಾಪುರ 322 ಪುರುಷ, 296 ಮಹಿಳೆ ಸೇರಿ 618 ಮತದಾರರು ಇದ್ದಾರೆ. ವಡಗೇರಿಯಲ್ಲಿ 42 ಪುರುಷ, 409 ಮಹಿಳೆ ಸೇರಿ ಇಟ್ಟು 901 ಹಾಗೂ ಬಾಡಗಿ 599 ಪುರುಷ, 565 ಮಹಿಳೆ ಸೇರಿ ಒಟ್ಟು 1164 ಮತದಾರರು ಇದ್ದಾರೆ.

ಇನ್ನು ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಪಂ ಒಂದು ಸ್ಥಾನಕ್ಕೆ ಉಪ ಚುನಾವಣೆ ನಿಗದಿ ಮಾಡಲಾಗಿತ್ತು. ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಮತದಾನ ನಡೆಯುತ್ತಿಲ್ಲ. ಉಳಿದ ಪಂಚಾಯಿತಿಗಳಿಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆ ಅಧಿಕಾರಿ ಸಕಲ ರೀತಿಯಿಂದ ಸಿದ್ಧತೆ ಮಾಡಿದ್ದಾರೆ.

Leave a Reply

Your email address will not be published. Required fields are marked *