ಅನುದಾನ ಬಳಕೆಯಾಗದಿದ್ದಲ್ಲಿ ಕ್ರಮ

ಬಾಗಲಕೋಟೆ: ವಿವಿಧ ಇಲಾಖೆಯ ಅನುದಾನದಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಲಾದ ಹಣವನ್ನು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಕಾರಿ ಆರ್. ರಾಮಚಂದ್ರನ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನೆ, ಜಿಲ್ಲಾ ಮಟ್ಟದ ಜಾಗೃತ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡಬೇಕು. ಸಂಪೂರ್ಣವಾಗಿ ಖರ್ಚಾಗದೆ ಹೋದಲ್ಲಿ ಅಂತಹ ಅಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿರುವ ಪ. ಜಾತಿ ಮತ್ತು ಪಂ.ವರ್ಗದವರ ಅಂಗವಿಕಲರ ಸರ್ವೇ ಮಾಡಿ ಮಾಹಿತಿ ನೀಡುವಂತೆ ಆಯಾ ತಾಲೂಕಿನ ತಾಪಂ ಕಾರ್ಯನಿರ್ವಾಹಕ ಅಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಬಾಗಲಕೋಟೆ ಮತ್ತು ಹುನಗುಂದ ತಾಲೂಕು ಹೊರತುಪಡಿಸಿ ಉಳಿದ ತಾಲೂಕಿನ ಮಾಹಿತಿ ನೀಡದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಅಕಾರಿಗಳ ವಿರುದ್ಧ ಗರಂ ಆದರು. ಶೀಘ್ರ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಈಗಾಗಲೇ 6 ರಿಂದ 18 ವರ್ಷದೊಳಗಿನ 844 ಮಕ್ಕಳ ಪೈಕಿ 84 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿರುವ ವಿಷಯವನ್ನು ಸಭೆಗೆ ತಿಳಿಸಿದಾಗ ಶಾಲೆ ಬಿಟ್ಟ ಪ್ರತಿಯೊಂದು ಮಗು ಮರಳಿ ಶಾಲೆಗೆ ದಾಖಲಾಗಬೇಕು. ಪ್ರತಿಯೊಬ್ಬ ಬಿಇಒ ಪ್ರತಿದಿನ ಒಂದು ಮಗುವನ್ನಾದರೂ ಶಾಲೆಗೆ ದಾಖಲಿಸುವ ಕೆಲಸವಾಗಬೇಕು ಎಂದು ಜಿಲ್ಲಾಕಾರಿ ನಿರ್ದೇಶನ ನೀಡಿದರು.

ವಿವಿಧ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಹಣದಲ್ಲಿ ಪ. ಜಾತಿ ಮತ್ತು ಪಂ.ವರ್ಗಕ್ಕೆ ಮೀಸಲಿರಿಸಲಾದ ಹಣವನ್ನು ಸಂಪೂರ್ಣ ಖರ್ಚು ಆಗಬೇಕು. ವಿನಾಕಾರಣ ಸಬೂಬು ಹೇಳಬಾರದು. ಕೆಲಸದಲ್ಲಿ ಬೇಜವಾಬ್ದಾರಿ ಕಂಡುಬಂದಲ್ಲಿ ಕ್ರಮದ ಜತೆಗೆ ಪ್ರಕರಣ ದಾಖಲಿಸಲು ಸಹ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಬಿಜಿಎನ್‌ಎಲ್‌ನವರು ಮೀಸಲಿರಿಸಿದ ಅನುದಾನದಲ್ಲಿ ಬೋರ್‌ವೆಲ್ ಕೊರೆಯಲು ಅವಕಾಶವಿದೆ ಎಂದು ನಾಮನಿರ್ದೇಶಿತ ಸದಸ್ಯ ಶಂಭುಗೌಡ ಪಾಟೀಲ ಸಭೆಗೆ ತಿಳಿಸಿದಾಗ ಬೋರ್‌ವೆಲ್ ಕೊರೆದ ಬಗ್ಗೆ ಕೆಬಿಜಿಎನ್‌ಎಲ್ ಅವರಿಂದ ಸಂಪೂರ್ಣ ಮಾಹಿತಿ ಪಡೆಯುವಂತೆ ಜಿಲ್ಲಾಕಾರಿಗಳು ಸೂಚಿಸಿದರು.

ಬಾದಾಮಿ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2 ವರ್ಷದ ಹಿಂದೆಯೇ ಅನುದಾನ ಬಿಡುಗಡೆ ಆಗಿದ್ದರೂ ಕೆಆರ್‌ಐಡಿಎಲ್‌ನವರು ಕಾಮಗಾರಿ ಆರಂಭಿಸದ್ದಕ್ಕೆ ಸಿಡಿಮಿಡಿಕೊಂಡ ಜಿಲ್ಲಾಕಾರಿ, ಸಂಬಂಸಿದ ಕಾರ್ಯನಿರ್ವಾಹಕ ಅಕಾರಿಗಳ ಮೇಲೆ ನೋಟಿಸ್ ಜಾರಿ ಮಾಡಿ ಬಿಡುಗಡೆ ಮಾಡಿದ ಹಣ ವಾಪಸ್ ಪಡೆದು ಇನ್ನು ಮುಂದೆ ಕೆಆರ್‌ಐಡಿಎಲ್‌ನವರಿಗೆ ಯಾವುದೇ ಕಾಮಗಾರಿ ನೀಡದಂತೆ ಸೂಚಿಸಿದರು.

ನಿರ್ಮಿತಿ ಕೇಂದ್ರದಿಂದ 40 ವಿವಿಧ ಭವನ ಹಾಗೂ ಸಮುದಾಯಗಳ ಭವನಗಳ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದರೂ ಇಲಾಖೆಯಿಂದ 2.13 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಾಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಸಭೆಗೆ ತಿಳಿಸಿದಾಗ, ಬಾಕಿ ಹಣ ನೀಡಬೇಕು ಎಂದು ಆರ್. ರಾಮಚಂದ್ರನ್ ಸೂಚನೆ ನೀಡಿದರು.

ಕಳೆದ ಸಾಲಿನಲ್ಲಿ ಮೀನುಗಾರಿಕೆ, ಅರಣ್ಯ, ಸಹಕಾರ, ಸಣ್ಣ ನೀರಾವರಿ, ಲೋಕೋಪಯೋಗಿ, ಭಾರಿ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆಗಳು ನೂರಕ್ಕೆ ನೂರರಷ್ಟು ಪ್ರಗತಿ ಸಾಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾಕಾರಿಗಳು ಕಡಿಮೆ ಪ್ರಗತಿ ಸಾಸಿದ ಆರೋಗ್ಯ, ನಗರಾಭಿವೃದ್ಧಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಅಕಾರಿಗಳ ಕಾರ್ಯವೈಖರಿಯಿಂದ ಅಸಮಾಧಾನ ವ್ಯಕ್ತಪಡಿಸಿದರು. ಅಕಾರಿಗಳು ಮುತುವರ್ಜಿ ವಹಿಸಿ ಕಾಳಜಿ ವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಭಿನವ ಖರೆ, ಅಪರ ಜಿಲ್ಲಾಕಾರಿ ದುರ್ಗೇಶ ರುದ್ರಾಕ್ಷಿ, ಜಿಪಂ ಉಪಕಾರ್ಯದರ್ಶಿ ಎಸ್.ಎಸ್. ಹಿರೇಮಠ, ಉಪವಿಭಾಗಾಕಾರಿ ಎಚ್. ಜಯಾ ವಿವಿಧ ಇಲಾಖೆ ಅಕಾರಿಗಳು, ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ನಾಮನಿರ್ದೇಶಿತ ಸಂಸ್ಥೆಗಳ ಪ್ರತಿನಿಗಳು ಉಪಸ್ಥಿತರಿದ್ದರು.

ಮೇಲಾಧಿಕಾರಿಗಳಿಗೆ ಪತ್ರ
ನಗರಾಭಿವೃದ್ಧಿ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಸಂಪೂರ್ಣ ಖರ್ಚು ಮಾಡಿ ಉಳಿದ ಹಣದಲ್ಲಿ ಇತರ ಕಾರ್ಯ ಕೈಗೊಳ್ಳಲು ಜಿಲ್ಲಾಕಾರಿಗಳಿಗೆ ಅಕಾರ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಮೇಲಕಾರಿಗಳಿಗೆ ಪತ್ರ ಬರೆಯುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಎಸ್‌ಸಿಪಿ ಯೋಜನೆಯಡಿ 97.12 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಶೇ.95.23ರಷ್ಟು ಪ್ರಗತಿ ಸಾಸಿದರೆ, ಟಿಎಸ್‌ಪಿ ಯೋಜನೆಯಡಿ 37.13 ಕೋಟಿ ರೂ.ವೆಚ್ಚ ಮಾಡಿ ಶೇ.94.50 ರಷ್ಟು ಪ್ರಗತಿ ಸಾಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

Leave a Reply

Your email address will not be published. Required fields are marked *