ಭಾರಿ ವಾಹನಗಳನ್ನು ನಿರ್ಬಂಧಿಸಲು ಆಗ್ರಹ

ಬಾಗಲಕೋಟೆ: ಬಾಗಲಕೋಟೆ ನಗರ ಮೂಲಕ ಹಾಯ್ದು ಹೋಗುವ ಭಾರಿ ವಾಹನಗಳನ್ನು ಗದ್ದನಕೇರಿ ಕ್ರಾಸ್‌ನಿಂದ, ಸಂಗಮ ಕ್ರಾಸ್‌ವರೆಗೆ ನಿರ್ಬಂಧಿಸಬೇಕು ಎಂದು ನಾಗರಿಕ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.

ವೇದಿಕೆ ಮುಖಂಡ ನಾಗರಾಜ ಹದ್ಲಿ ನೇತೃತ್ವದಲ್ಲಿ ನಗರದ ಸಾರ್ವಜನಿಕರು, ಕಾರ್ಯಕರ್ತರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ವಾಹನಗಳ ಪ್ರವೇಶ ನಗರದಲ್ಲಿ ನಿರ್ಬಂಧಿಸಬೇಕು ಎಂದು ಮನವಿ ಸಲ್ಲಿಸಿದರು.

ನಗರದ ಎರಡು ಬದಿಗಳಲ್ಲಿ ಬೀದಿ ವ್ಯಾಪಾರಸ್ಥರು, ಅಂಗಡಿಕಾರರು ಹಾಗೂ ಬಿವಿವಿ ಸಂಘದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಭಾರಿ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುವುದರಿಂದ ಪ್ರತಿವರ್ಷ ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿಗಳಾಗುತ್ತಿವೆ. ವ್ಯಾಪಾರ ವಹಿವಾಟಕ್ಕೂ ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ಈ ಹಿಂದೆ ಅನೇಕ ಸಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಾರಿ ಗಂಭೀರವಾಗಿ ಪರಿಗಣಿಸಿ ಬಾಗಲಕೋಟೆ ನಗರದ ಮೂಲಕ ಹಾಯ್ದು ಹೋಗುವ ಗದ್ದನಕೇರಿ ಕ್ರಾಸ್-ಸಂಗಮ ಕ್ರಾಸ್ ನಡುವೆ ಭಾರಿ ವಾಹನಗಳನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು.

ಚನ್ನವೀರ ಅಂಗಡಿ, ಕೇಶವ ಕುಲಕರ್ಣಿ, ಪ್ರಶಾಂತ ಹೂಗಾರ, ಗೋಪಾಲಕಷ್ಣ ಹಳಪೇಟಿ, ಮಂಜುನಾಥ .ಎಸ್.ಪಿ, ಸಂದೀಪ ಬೆಳಗಲ್ಲ, ಎಲ್.ಪಿ. ಚಿನಿವಾಲ ಇತರರು ಇದ್ದರು.

Leave a Reply

Your email address will not be published. Required fields are marked *