ಎಸಿಬಿ ಬಲೆಗೆ ವೈದ್ಯ

ಬಾಗಲಕೋಟೆ: ರೋಗಿಯೊಬ್ಬರಿಗೆ ಪ್ರಮಾಣ ಪತ್ರ ನೀಡುವುದಕ್ಕೆ ಲಂಚ ಸ್ವೀಕರಿಸಿದ ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಮೋದ ಬೀಸೆ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೀಳಗಿ ತಾಲೂಕಿನ ಹೆರಕಲ್ಲ ಗ್ರಾಮದ ಪುಂಡಲೀಕ ತುಪ್ಪದ ಅವರಿಗೆ ದೃಷ್ಟಿ ದೋಷಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರ ನೀಡುವುದಕ್ಕೆ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಜಿಲ್ಲಾಸ್ಪತ್ರೆ ಎದುರು ವೈದ್ಯರು ತಮ್ಮ ಸಹೋದರನ ಔಷಧ ಅಂಗಡಿಯಲ್ಲಿ ಲಂಚ ಕೊಡಲು ತಿಳಿಸಿದ್ದರು. ಈ ಬಗ್ಗೆ ಪುಂಡಲೀಕ ಎಸಿಬಿಗೆ ದೂರು ನೀಡಿದ್ದರು. ವೈದ್ಯರ ಸಹೋದರ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಎಸಿಬಿ ಎಸಿಪಿ ಮಲ್ಲೇಶಪ್ಪ ಮೇಲ್ನಾಡ ನೇತೃತ್ವದ ತಂಡ ದಾಳಿ ಮಾಡಿ ವೈದ್ಯನ ಲಂಚಾವತಾರವನ್ನು ಬಹಿರಂಗಗೊಳಿಸಿದೆ.