ಕೋಟೆ ಗದ್ದುಗೆಗೆ ಯಾರಾಗ್ತಾರೆ ಅಧಿಪತಿ ?

Latest News

ವಿರಾಟ್​ ಕೊಹ್ಲಿ ನಾಯಕತ್ವಕ್ಕೆ ಮನಸೋತ ಇಂಗ್ಲೆಂಡ್​ ಮಾಜಿ ನಾಯಕ ಹೇಳಿದ್ದು ಹೀಗೆ…

ನವದೆಹಲಿ: ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ನಾಯಕರಾಗಿ ಸತತ 10 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ನಾಯಕರಾಗಿ 9 ಇನ್ನಿಂಗ್ಸ್​...

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆರೋಗ್ಯಕರ ಹಾಗೂ ಶಕ್ತಿಯುತವಾಗಿದ್ದಾರೆ: ಶ್ವೇತಭವನದ ಮಿಲಿಟರಿ ಆಸ್ಪತ್ರೆ

ವಾಷಿಂಗ್ಟನ್​: ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆರೋಗ್ಯಕರ ಹಾಗೂ ಶಕ್ತಿಯುತವಾಗಿದ್ದಾರೆ ಎಂದು ಶ್ವೇತಭವನದ ಮಿಲಿಟರಿ ಆಸ್ಪತ್ರೆ ತಿಳಿಸಿದೆ. ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ ಅವರನ್ನು ವಾಸಿಂಗ್ಟನ್​...

ಎಚ್​ಎಎಲ್ ನ ಎಚ್​ಟಿಟಿ 40ನಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥರ ಹಾರಾಟ

ಬೆಂಗಳೂರು: ಎಚ್​ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎಚ್​ಟಿಟಿ 40 ಪ್ರಾಥಮಿಕ ತರಬೇತಿ ವಿಮಾನದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ (ಎಸಿಎಂ) ಆರ್​ಕೆಎಸ್ ಬದುರಿಯಾ ಮೊದಲ ಬಾರಿಗೆ ಹಾರಾಟ...

ಬ್ಯಾಂಕ್ ಕಟ್ಟಿದ ಹಣದಲ್ಲೇ ನಕಲಿ ನೋಟುಗಳು!

ಬೆಂಗಳೂರು: ನಕಲಿ ನೋಟು ತಡೆಗೆ ಅಮಾನೀಕರಣ ಮತ್ತು ಆಧುನಿಕ ಮಿಷನ್​ಗಳನ್ನು ಬ್ಯಾಂಕ್​ಗಳಿಗೆ ಪೂರೈಕೆ ಮಾಡಲಾಗಿದೆ. ಆದರೂ ಬ್ಯಾಂಕ್ ಅಧಿಕಾರಿಗಳ ಕಣ್ತಪ್ಪಿ ನಕಲಿ ನೋಟುಗಳು ಆರ್​ಬಿಐ...

ದಾಳಿ ಮಾಡಿದ ಮೊಸಳೆಯ ಬಿಗಿಹಿಡಿತದಿಂದ ಪಾರಾಗಲು ಅರಣ್ಯ ಅಧಿಕಾರಿ ಕಂಡುಕೊಂಡ ದಾರಿ ಬಲು ರೋಚಕ!

ಕೈರ್ನ್ಸ್: ಆಸ್ಟ್ರೇಲಿಯಾದ ಅರಣ್ಯ ಅಧಿಕಾರಿಯೊಬ್ಬರು ಮೊಸಳೆ ದಾಳಿಯಿಂದ ಪಾರಾಗಿರುವ ಘಟನೆ ಭಾನುವಾರ ವರದಿಯಾಗಿದೆ. ಅವರು ಹೇಗೆ ಪಾರಾದರು ಎಂಬುದನ್ನು ತಿಳಿಯುವ ಹಂಬಲವಿದ್ದರೆ ಮುಂದೆ...

ಅಶೋಕ ಶೆಟ್ಟರ
ಬಾಗಲಕೋಟೆ: ಲೋಕ ಸಮರದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹದಿನಾಲ್ಕು ಅಭ್ಯರ್ಥಿಗಳ ಹಣೆಬರಹ ಇಂದೇ ನಿರ್ಧಾರ ಆಗಲಿದ್ದು, ಕಣದಲ್ಲಿ ಇರುವವರ ಎದೆಯಲ್ಲಿ ಢವಢವ ಶುರುವಾಗಿದೆ.

ಹೌದು, ಬಾಗಲಕೋಟೆ ಲೋಕಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ಶಾಸಕರಾಗಿರುವುದರಿಂದ ಶತಾಯಗತಾಯ ಈ ಸಲ ಕಾಂಗ್ರೆಸ್ ಪಕ್ಷವನ್ನು ಸೋಲಿನ ಸರಪಣಿಯಿಂದ ಹೊರ ತರುವ ಹೊಣೆ ಅವರ ಹೆಗಲಿಗಿದೆ. ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡಲು ಲಿಂಗಾಯಿತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು.

ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರಲ್ಲದೆ, ಬಳಿಕ ಎರಡು ಸಲ ಪ್ರಚಾರದ ಅಖಾಡಕ್ಕೆ ಇಳಿದಿದ್ದರು. ಮತ್ತೊಂದು ಕಡೆಗೆ ಬಿಜೆಪಿಯ ಸಾಂಪ್ರದಾಯಿಕ ಮತಗಳೆಂದೇ ಗುರುತಿಸಲಾಗಿದ್ದ ಲಿಂಗಾಯತ ಮತಗಳು ಈ ಸಲ ವಿಭಜನೆ ಆಗಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೈ ಪಡೆ ಇದೆ.

ಆದರೆ, ಕೋಟೆ ಗದ್ದುಗೆಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿಯ ಪಿ.ಸಿ. ಗದ್ದಿಗೌಡರ ಅವರನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಒಂದು ಕಡೆಗೆ ಪಕ್ಷದ ಬೆಂಬಲ ಮತ್ತೊಂದು ಕಡೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ, ತಮ್ಮದೇ ಆದ ಜಾತಿ ಸಮೀಕರಣ, ಎಲ್ಲವೂ ಒಗ್ಗೂಡಿರುವುದರಿಂದ ಅವರನ್ನು ಮಣಿಸುವುದು ಅಂದುಕೊಂಡಷ್ಟು ಸರಳವಲ್ಲ ಎನ್ನುವುದು ರಾಜಕೀಯ ಲೆಕ್ಕಾಚಾರ.

ಪಿ.ಸಿ. ಗದ್ದಿಗೌಡರ ವಿಷಯಕ್ಕೆ ಬಂದರೆ ಅದೃಷ್ಟವಂತ ರಾಜಕಾರಣಿ ಎಂದೇ ಊಭಯ ಪಕ್ಷಗಳ ಮುಖಂಡರು ಒಪ್ಪಿಕೊಳ್ಳುತ್ತಾರೆ. ಅವರು ಪ್ರತಿ ಚುನಾವಣೆ ಎದುರಿಸುವಾಗಲೂ ಹಿಂದಿನ ಅವಧಿಯಲ್ಲಿ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಲೆಕ್ಕಕ್ಕೆ ಇರಲ್ಲ. ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸದೇ ಅವರಿಗೆ ಮತಹಾಕುವ ಸಂಪ್ರದಾಯ ಕ್ಷೇತ್ರದಲ್ಲಿ ಬೆಳೆದು ಬಂದಿದೆ. ಇದಕ್ಕೆ ಅವರು ವೈಯಕ್ತಿಕವಾಗಿ ನಡೆದುಕೊಂಡು ಬಂದಿರುವ ನಡವಳಿಕೆ ಕಾರಣ ಎನ್ನುವುದು ಕ್ಷೇತ್ರದಾದ್ಯಂತ ಜನಜನಿತವಾಗಿದೆ. ಇದುವೇ ಅವರ ಗೆಲುವಿನ ಗುಟ್ಟು ಎಂದು ಹೇಳಲಾಗುತ್ತಿದೆ.

ಕ್ಷೇತ್ರದ ಚುನಾವಣೆ ಇತಿಹಾಸ
ಬಾಗಲಕೋಟೆ ಕ್ಷೇತ್ರದಲ್ಲಿ ಈವರೆಗೂ ನಡೆದಿರುವ ಚುನಾವಣೆಗಳಲ್ಲಿ ಅತಿ ಹೆಚ್ಚು ಸಲ ಗೆದ್ದಿರುವುದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಭದ್ರಕೋಟೆಯನ್ನು ಮೊದಲ ಸಲ ಛಿದ್ರ ಮಾಡಿದ್ದು ಜನತಾದಳದ ಎಚ್.ವೈ. ಮೇಟಿ. ಆ ಬಳಿಕ ಕಾಂಗ್ರೆಸ್ಸೇತರ ಸಂಸದರಾಗಿದ್ದು ಮಾಜಿ ಸಚಿವ ಅಜಯಕುಮಾರ ಸರನಾಯಕ. ನಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಿಂದ ಹಿಮ್ಮೆಟ್ಟಿಸಿದ್ದು ಬಿಜೆಪಿಯ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ. ಈಗಾಗಲೇ ಮೂರು ಸಲ ಗೆದ್ದಿರುವ ಗೌಡರು ಇದೀಗ ನಾಲ್ಕನೇ ಬಾರಿಯೂ ಗೆಲುವು ದಾಖಲಿಸಲು ಮುಂದಾಗಿದ್ದಾರೆ. ಹಿಂದಿನ ಸಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕಡೆಗೆ ಮಾತ್ರ ಬಿಜೆಪಿ ಶಾಸಕರಿದ್ದರೂ, ಕಾಂಗ್ರೆಸ್ ಪಕ್ಷದ ಅಜಯಕುಮಾರ ಸರನಾಯಕ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಕ್ಷೇತ್ರದಲ್ಲಿ ಆರು ಕಡೆಗೆ ಬಿಜೆಪಿ ಶಾಸಕರು ಇದ್ದರೆ, ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬೆನ್ನಿಗೆ ಇರುವುದರಿಂದ ಗೌಡರ ಗೆಲುವು ಶತಃಸಿದ್ಧ ಎನ್ನುವ ವಿಶ್ವಾಸವನ್ನು ಬಿಜೆಪಿಯವರು ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಇತಿಹಾಸ ಬರೆಯುತ್ತಾರಾ ವೀಣಾ ?
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯೊಬ್ಬರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಆಗಿದ್ದಾರೆ. ಕ್ಷೇತ್ರದಲ್ಲಿ ಇರುವ ಅರ್ಧದಷ್ಟು ಮಹಿಳಾ ಮತದಾರರನ್ನು ನೆಚ್ಚಿಕೊಂಡಿದ್ದಾರೆ. ಜತೆಗೆ ಜಿಪಂ ಅಧ್ಯಕ್ಷರಾಗಿದ್ದಾಗ ಮಾಡಿದ್ದ ಗ್ರಾಮ ವಾಸ್ತವ್ಯ ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯಬಹುದು ಎನ್ನುವ ಅಪಾರ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಮತದಾನೋತ್ತರ ಸಮೀಕ್ಷೆಯಲ್ಲಿ ಕೈ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂಬ ಸಮೀಕ್ಷೆ ಬಂದಿದ್ದರೂ ಅದನ್ನು ಮೀರಿ ಗೆಲುವು ಸಾಧಿಸುವ ನಂಬಿಕೆಯಲ್ಲಿದ್ದಾರೆ.

ಇತರರು ಪಡೆಯುವ ಮತಗಳು ಯಾರಿಗೆ ಮುಳುವು ?
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಡುಗೆ ತೀವ್ರ ಪೈಪೋಟಿ ಇದ್ದು, ಯಾರೇ ಗೆದ್ದರೂ ಅಂತರ ಐವತ್ತು ಸಾವಿರ ಒಳಗಡೆ ಇರುಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಹೀಗಾಗಿ ಕಣದಲ್ಲಿರುವ ಇತರೆ ಅಭ್ಯರ್ಥಿಗಳು ಪಡೆಯುವ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ದುಬಾರಿ ಆಗುವ ಲಕ್ಷಣಗಳಿವೆ ಎಂದು ಹೇಳಲಾಗುತ್ತಿದೆ. ಇತರರು ಪಡೆಯುವ ಹಾಗೂ ನೋಟಾ ಮತಗಳು ಕನಿಷ್ಠ 50 ಸಾವಿರ ದಾಟಲಿದ್ದು, ಇವರು ಯಾವ ಸಮುದಾಯದ ಮತಗಳನ್ನು ದೋಚಲಿದ್ದಾರೆ ? ಅದು ಯಾರನ್ನು ಮುಳುಗಿಸುತ್ತದೆ ? ಯಾರನ್ನು ತೇಲಿಸುತ್ತದೆ ಎನ್ನುವ ಚರ್ಚೆಗಳು ಜೋರಾಗಿದೆ. ಈ ಎಲ್ಲ ಅಂತೆ, ಕಂತೆಗಳು, ಲೆಕ್ಕಾಚಾರಗಳು ಮತ್ತು ರಾಜಕೀಯ ವಲಯದ ವಿಶ್ಲೇಷಣೆಗಳಿಗೆ ಇಂದು ಮಧ್ಯಾಹ್ನ ತೆರೆಬೀಳಲಿದೆ. ಬಿಜೆಪಿಯ ಗದ್ದಿಗೌಡರ ನಾಲ್ಕನೇ ಸಲ ಗೆದ್ದು ಬೀಗುತ್ತಾರಾ? ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಗೆದ್ದು ಕೈ ಪಡೆಯ ಸೋಲಿನ ಸರಪಳಿಗೆ ಅಂತ್ಯ ಹಾಡುತ್ತಾರಾ? ಈ ಪ್ರಶ್ನೆಗಳಿಗೆ ಇಂದು ಮಧ್ಯಾಹ್ನದ ಹೊತ್ತಿಗೆ ಉತ್ತರ ಸಿಗಲಿದೆ.

- Advertisement -

Stay connected

278,503FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....