21.8 C
Bangalore
Saturday, December 14, 2019

ನಾಳೆ ಸಂಜೆ ಹೊತ್ತಿಗೆ ಫಲಿತಾಂಶ ಪ್ರಕಟ

Latest News

FACT CHECK| ಅಸ್ಸಾಂ ಪ್ರತಿಭಟನೆ ಹೆಸರಿನಲ್ಲಿ ವೈರಲ್​ ಆದ ಮಹಿಳಾ ದೌರ್ಜನ್ಯ ಫೋಟೋಗಳು ಎಷ್ಟು ಸತ್ಯ? ಫ್ಯಾಕ್ಟ್​ಚೆಕ್​ ಹೇಳಿದ್ದೇನು?

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಅಂಕಿತವಾಗುವ ಮೂಲಕ ಮಸೂದೆ ಅಧಿಕೃತವಾಗಿ...

ಪಾರ್ಟಿ ಕಿಕ್​ನಿಂದ ಪ್ರಜ್ಞೆತಪ್ಪಿದ ಯುವತಿ

ಮಂಗಳೂರು: ಅತಿಯಾಗಿ ಅಮಲು ಪದಾರ್ಥ ಸೇವಿಸಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪಾಲಕರ ಸಮ್ಮುಖದಲ್ಲೇ ಪೊಲೀಸರು ಬುದ್ಧಿ ಹೇಳಿ ಮನೆಗೆ ಕಳಿಸಿದ್ದಾರೆ. ನಗರದ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರು ಗುರುವಾರ...

ಕಮಿಷನ್ ದಂಧೆಕೋರರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು:  ಸರ್ಕಾರಿ ಆಸ್ಪತ್ರೆಗಳ ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವ ಏಜೆಂಟರು ಹಾಗೂ ವೈದ್ಯರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ...

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದ ಪಾರಂಪರಿಕ ಕಟ್ಟಡ ತೆರವಿಗೆ ಜನಸಾಮಾನ್ಯರ ವಿರೋಧ

ಬೆಂಗಳೂರು:  ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡ ನಿರ್ವಣಕ್ಕಾಗಿ 120 ವರ್ಷದಷ್ಟು ಹಳೆಯದಾದ ಪಾರಂಪರಿಕ ಕಟ್ಟಡದ ಅರ್ಧ ಭಾಗವನ್ನು ಕೆಡವಲಾಗಿದ್ದು, ಇತಿಹಾಸ ತಜ್ಞರು ಹಾಗೂ ಸಾರ್ವಜನಿಕರಿಂದ ತೀವ್ರ...

ಗುರಿ ತಲುಪುವ ಬಗೆ ಹೇಗೆ?

ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಮೃತ ಸಂಜೀವಿನಿ ವಿದ್ಯೆ ತಿಳಿದಿರುವುದು ದೇವತೆಗಳಿಗೆಲ್ಲ ದೊಡ್ಡ ತಲೆನೋವಾಗಿತ್ತು. ಯಾಕೆಂದರೆ ಅವರು ಕೊಂದ ರಾಕ್ಷಸರನ್ನು ಶುಕ್ರಾಚಾರ್ಯರು ತಮ್ಮ ವಿದ್ಯೆ...

ಬಾಗಲಕೋಟೆ: ಏ.23 ರಂದು ನಡೆದಿದ್ದ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಮತ ಎಣಿಕೆ ಕಾರ್ಯ ನವನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮೇ 23 ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಸಂಜೆ ವರೆಗೂ ಅಂತಿಮ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಮತ ಎಣಿಕೆಗೆ ಅಗತ್ಯವಿರುವ ಸಿಬ್ಬಂದಿ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಯಾವ ರೀತಿಯಾಗಿ ಎಣಿಕೆ ಮಾಡಬೇಕು. ಪ್ರತಿ ವಿಧಾನಸಭೆ ಮತಕ್ಷೇತ್ರದ 5 ವಿವಿಪ್ಯಾಟ್‌ಗಳ ಮತ ಎಣಿಕೆ ನಡೆಸುವುದು ಸೇರಿದಂತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ತಮ್ಮ ಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮತ ಎಣಿಕೆ ಕುರಿತು ವಿವರಿಸಿದರು.

ವಿಧಾನಸಭಾ ಮತಕ್ಷೇತ್ರವಾರು ಅಳವಡಿಸಲಾದ 14 ಟೇಬಲ್‌ಗಳಲ್ಲಿ ಪ್ರತಿ ಟೇಬಲ್‌ಗೆ ಓರ್ವ ಎಣಿಕೆ ಮೇಲ್ವಿಚಾರಕ, ಓರ್ವ ಎಣಿಕೆ ಸಹಾಯಕ ಹಾಗೂ ಓರ್ವ ಮೈಕ್ರೋ-ಅಬ್ಸರರ್ವರ್ ಸೇರಿ ಒಟ್ಟು ಮೂರು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇನ್ನು ಅಂಚೆ ಮತಪತ್ರಗಳ ಟೇಬಲ್‌ಗೆ ಓರ್ವ ಸಹಾಯಕ ಚುನಾವಣೆ ಅಧಿಕಾರಿ, ಓರ್ವ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರು, ಓರ್ವ ಮೈಕ್ರೋ ಅಬ್ಸರವರ್ ಸೇರಿ ಒಟ್ಟು 5 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮತ ಎಣಿಕೆಗೆ ಬರುವ ಸಿಬ್ಬಂದಿಗಳಿಗೆ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಮುಗಿದ ನಂತರ ಕೊನೆಯ ಎರಡು ಸುತ್ತಿನ ಮತಯಂತ್ರಗಳ ಎಣಿಕೆಯನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಅಂಚೆ ಪತ್ರಗಳ ಎಣಿಕೆ ಮುಗಿಯುವವರೆಗೆ ಮತಯಂತ್ರಗಳ ಎಣಿಕೆಯನ್ನು ಸ್ಥಗಿತಗೊಳಿಸದೇ ಪೂರ್ಣಗೊಳಿಸಲಾಗು ವುದು ಎಂದರು.

ತೋವಿವಿಯಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಎಜೆಂಟರ್, ಎಣಿಕೆ ಎಜೆಂಟರುಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲು ವಿವಿಧ ದ್ವಾರಗಳನ್ನು ನಿಗದಿ ಪಡಿಸಲಾಗಿದೆ. ಆ ಮೂಲಕವೇ ಅವರನ್ನು ಒಳಗೆ ಬಿಡಲಾಗುವುದು. ಬಾದಾಮಿ,ಹುನಗುಂದ,ಮುಧೋಳ ಮತಕ್ಷೇತ್ರದವರು ಎಣಿಕೆ ಕೇಂದ್ರದ ಉತ್ತರ ದಿಕ್ಕಿನಿಂದ ಬರಬೇಕು, ಬಾಗಲಕೋಟೆ ತೇರದಾಳದವರು ಪೂರ್ವ ದಿಕ್ಕು, ಬೀಳಗಿ,ನರಗುಂದ ಮತ್ತು ಜಮಖಂಡಿಯವರು ದಕ್ಷಿಣ ದಿಕ್ಕಿನಿಂದ ಬರಬೇಕು. ಅಭ್ಯರ್ಥಿಗಳು, ಚುನಾವಣಾ ಏಜೆಂಟ್, ಎಣಿಕೆ ಏಜೆಂಟೆರುಗಳಿಗೆ ಮತ ಎಣಿಕೆ ಕೇಂದ್ರದ ಹೊರಗಡೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಉಪಹಾರಕ್ಕೆ ತಗಲುವ ವೆಚ್ಚವನ್ನು ಭರಿಸಿ ಉಪಹಾರ ಪಡೆಯಬಹುದು ಎಂದು ತಿಳಿಸಿದರು.

ಮೊಬೈಲ್, ಚಾಕು, ಗುಟುಕಾ, ಉಪಹಾರ ನಿಷೇಧ
ಮತ ಎಣಿಕೆ ಕೇಂದ್ರದ ಒಳಗಡೆ ಯಾವುದೇ ಮೊಬೈಲ್ ಪೋನ್,ಗುಟಕಾ, ಚಾಕು,ಹಾಗೂ ಲಘು ಉಪಹಾರವನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಚುನಾವಣಾ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಮೊಬೈಲ್ ಪೋನ್‌ಗಳನ್ನು ಸಂಗ್ರಹಿಸಲು ಕೌಂಟರನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕೇಂದ್ರದಲ್ಲಿ ರಾಜಕೀಯ ಮುಖಂಡರು,ಶಾಸಕರಿಗೆ ಮತ್ತು ಸಚಿವರಿಗೆ ಮತ ಎಣಿಕೆ ಕೆಂದ್ರದ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ ಎಂದರು.

ವೀಕ್ಷಕರ ನೇಮಕಾತಿ
ಮುಧೋಳ, ತೇರದಾಳ, ಜಮಖಂಡಿ ಮತ ಕ್ಷೇತ್ರಗಳಿಗೆ ನರಸಿಂಹಗಾರಿ ರೆಡ್ಡಿ ಟಿಎಲ್‌ರಡ್ಡಿ, ಬೀಳಗಿ,ಬಾದಾಮಿ,ಬಾಗಲಕೋಟೆ ಮತ್ತು ಹುನಗುಂದ ಮತಕ್ಷೇತ್ರಕ್ಕೆ ಬಲಿರಾಮ ಪವಾರ, ನರಗುಂದ ಮತಕ್ಷೇತ್ರಕ್ಕೆ ಎಚ್.ಅರುಣ್‌ಕುಮಾರ ಅವರನ್ನು ಮತ ಎಣಿಕೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು. ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಎಷ್ಟು ಸುತ್ತುಗಳಲ್ಲಿ ಮತ ಎಣಿಕೆ
ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಅನುಸಾರ ಮತ ಎಣಿಕೆ ನಡೆಸಲಾಗುವುದು. ಅದರಂತೆ ಪ್ರತಿವಿಧಾನಸಭಾ ಕ್ಷೇತ್ರಗಳಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮುಧೋಳ 16 ಸುತ್ತಿನಲ್ಲಿ ಮತ ಎಣಿಕೆ ನಡೆದರೇ, ತೇರದಾಳ 17 ಸುತ್ತು, ಜಮಖಂಡಿ 17, ಬೀಳಗಿ 19, ಬಾದಾಮಿ 19, ಬಾಗಲಕೋಟೆ 19, ಹುನಗುಂದ 19,ನರಗುಂದ, ಹುನಗುಂದ 19, ನರಗುಂದ 16 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಇನ್ನು 8 ಟೇಬಲ್‌ಗಳಲ್ಲಿ ಅಂಚೆ ಮತಪತ್ರಗಳ ಎಣಿಕೆ ಎರಡು ಸುತ್ತಿನಲ್ಲಿ ನಡೆಯಲಿದೆ ಎಂದು ಡಿಸಿ ರಾಮಚಂದ್ರನ್ ತಿಳಿಸಿದರು.

ಮತ ಎಣಿಕೆ ಸಮಯ
ಮತ ಎಣಿಕೆ ಪ್ರಾರಂಭವಾಗುವ ಮುನ್ನ ಬೆಳಗ್ಗೆ 6 ಗಂಟೆ ಒಳಗೆ ಅಭ್ಯರ್ಥಿ,ಏಜೆಂಟ್,ಎಣಿಕೆ ಏಜೆಂಟ್‌ರು ಒಳಗಡೆ ಪ್ರವೇಶ ಮಾಡಬೇಕು. ಬೆಳಗ್ಗೆ 7.30 ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುತ್ತದೆ. ಎಣಿಕೆ ಕಾರ್ಯ ಬೆಳಗ್ಗೆ 8.30ಕ್ಕೆ ಆರಂಭಗೊಳ್ಳಲಿದೆ. ಒಟ್ಟು 1938 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. ಸೈನಿಕರಿಗೆ ಆನ್‌ಲೈನ್ ಮೂಲಕ ಈಗಾಗಲೇ ಮತ ಪತ್ರಗಳನ್ನು ಕಳುಹಿಸಲಾಗಿತ್ತು. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಣಿಕೆ ಮಾಡಲಾಗುವುದು. ಇನ್ನೂ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವ ನಮ್ಮ ಮತಕ್ಷೇತ್ರದ ಮತದಾನ ಹಕ್ಕು ಹೊಂದಿರುವ ನೌಕರರಿಗೆ 3463 ಅಂಚೆ ಪತ್ರಗಳನ್ನು ಕಳುಹಿಸಲಾಗಿತ್ತು. 2000 ಅಂಚೆ ಮತಪತ್ರಗಳು ಬಂದು ತಲುಪಿವೆ. ಇನ್ನು ಕೆಲವು ಬುಧವಾರ ಸಂಜೆ ವರೆಗೂ ಬರುವ ನಿರೀಕ್ಷೆ ಇದೆ.
ಆರ್.ರಾಮಚಂದ್ರನ್, ಬಾಗಲಕೋಟೆ ಜಿಲ್ಲಾಧಿಕಾರಿ,

ತೋವಿವಿಯಲ್ಲಿರುವ ಮತಪೆಟ್ಟಿಗೆಗಳಿಗೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರ ಸುತ್ತಲೂ ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ 144 ಕಲಂ ನಿಷೇಧಾಜ್ಞೆ ಜಾರಿಗೆ ಮಾಡಲಾಗಿದ್ದು, ಈ ಆದೇಶ ಮೇ 23ರ ಬೆಳಗ್ಗೆ 6 ಗಂಟೆಯಿಂದ ಮೇ 25 ರ ಬೆಳಗ್ಗೆ 6 ಗಂಟೆವರೆಗೆ ಇರುತ್ತದೆ. 5ಕ್ಕಿಂತ ಹೆಚ್ಚು ಜನ ಸೇರುವುದಾಗಲಿ, ಮೆರವಣಿಗೆ, ವಿಜಯೋತ್ಸವ, ಸಾರ್ವಜನಿಕ ಸಭೆ, ಪಟಾಕಿ ಹಚ್ಚುವದನ್ನು ಹಾಗೂ ಘೋಷಣೆಗಳನ್ನು ಕೂಗುವದನ್ನು ನಿಷೇಧಿಸಲಾಗಿದೆ. ಮೇ 22ರ ಸಂಜೆ 6 ರಿಂದ 24ರ ಸಂಜೆ 6 ಗಂಟೆವರೆಗೆ ಮದ್ಯ ಮಾರಾಟ ಹಾಗೂ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

FACT CHECK| ಅಸ್ಸಾಂ ಪ್ರತಿಭಟನೆ ಹೆಸರಿನಲ್ಲಿ ವೈರಲ್​ ಆದ ಮಹಿಳಾ...

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಅಂಕಿತವಾಗುವ ಮೂಲಕ ಮಸೂದೆ ಅಧಿಕೃತವಾಗಿ ಜಾರಿಯಾಗಿದೆ. ಆದರೆ, ಇದನ್ನು ವಿರೋಧಿಸಿ ಅಸ್ಸಾಂನಲ್ಲಿ...

VIDEO| ಅತ್ಯದ್ಭುತ ಕ್ಯಾಚ್​ ಹಿಡಿದ ಸ್ಟೀವ್ ಸ್ಮಿತ್​: ಈ ವೈರಲ್​...

ಪರ್ತ್​: ಆಸ್ಟ್ರೇಲಿಯಾ ತಂಡದ ಸ್ಟಾರ್​ ಆಟಗಾರ ಸ್ಟೀವ್​ ಸ್ಮಿತ್​ ಕೇವಲ ಬ್ಯಾಟಿಂಗ್​ ಮಾತ್ರವಲ್ಲದೆ ಅದ್ಭುತ ಕ್ಷೇತ್ರರಕ್ಷಕ ಎಂಬುದನ್ನು ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ನಿರೂಪಿಸಿದ್ದಾರೆ. ಪರ್ತ್​ನ ಲಿಲ್​ ಆಪ್ಟಸ್​...

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...