ಬಾಗಲಕೋಟೆ: ನವನಗರದಲ್ಲಿ ಮಾಜಿ ಶಾಸಕ ಪಿ.ಎಚ್. ಪೂಜಾರ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು.
ಮಾಜಿ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗುವ ಅವಶ್ಯವಿದೆ. ಭಾರತವನ್ನು ಆರ್ಥಿಕತೆಯಲ್ಲಿ 6ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಅದನ್ನು ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸಲು ಯೋಗ್ಯತೆ ನರೇಂದ್ರ ಮೋದಿ ಅವರಿಗೆ ಮಾತ್ರವಿದೆ. ಸ್ವಾಭಿಮಾನಿ ಭಾರತಕ್ಕಾಗಿ ಮೋದಿಯವರು ಅನೇಕ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಹ್ಯಾಟ್ರಿಕ್ ಸಾಧನೆ ಮಾಡಿದ ಸಂಸದ ಪಿ.ಸಿ. ಗದ್ದಿಗೌಡರ ಜನಪರ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಬಾಗಲಕೋಟೆ- ಶಿರೂರ ರಸ್ತೆಗೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ, ಬಾಗಲಕೋಟೆ ರೈಲ್ವೆ ನಿಲ್ದಾಣಕ್ಕೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಹಾಗೂ ಬಾಗಲಕೋಟೆ ಮಾರ್ಗವಾಗಿ ವಾರಾಣಸಿ, ಮುಂಬೈ, ಬಿಕಾನೇರ್ಗೆ ರೈಲು ಆರಂಭಿಸಲಾಗಿದೆ, ಹೊಸ ರೈಲು ಆರಂಭಿಸಲು ಶಿಾರಸು ಮಾಡಿದ್ದಾರೆ ಎಂದರು.
ಬಿಜೆಪಿ ಮುಖಂಡ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಅಶೋಕ ಲಾಗಲೋಟಿ, ನಗರ ಪ್ರಧಾನ ಕಾರ್ಯದರ್ಶಿ ಬಸವರಾಜ ಅವರಾದಿ, ಶಂಕರಗೌಡ ಪಾಟೀಲ, ಪ್ರಕಾಶ ಹಂಡಿ, ಸಂತೋಷ ಜೋಶಿ, ಅನಿತಾ ಸರೋದೆ, ರಾಜು ಗೌಳಿ, ಶೈಲು ಅಂಗಡಿ, ಶಿವು ಜಾಲಗಾರ ಸೇರಿದಂತೆ ಇತರರು ಇದ್ದರು.
ರಾಜೇಶ್ವರಿ ಚರಂತಿಮಠ ಪ್ರಚಾರ
ನವನಗರದ ಕೆಲ ಪ್ರದೇಶಗಳಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಪತ್ನಿ ರಾಜೇಶ್ವರಿ ಚರಂತಿಮಠ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಪ್ರಚಾರ ನಡೆಸಿದರು. ನಗರಸಭೆ ಸದಸ್ಯ ಅಂಬಾಜಿ ಜೋಶಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅನಿತಾ ಸರೋದೆ, ಮಹಿಳಾ ಮೋರ್ಚಾ ನಗರ ಅಧ್ಯಕ್ಷ ಸವಿತಾ ಲೆಂಕೆನ್ನವರ, ಭಾಗ್ಯಶ್ರೀ ಹಂಡಿ, ಸರಸ್ವತಿ ತಳವಾರ, ನಾಗರತ್ನಾ ಹೆಬ್ಬಳ್ಳಿ, ರೇವತಿ ಅಳಗವಾಡಿ, ಸಂತೋಷ ಜೋಶಿ ಇತರರು ಇದ್ದರು.