ಶಾರ್ಟ್ ಸರ್ಕ್ಯೂಟ್, 2 ಕಾರು ಭಸ್ಮ

ಬಾಗಲಕೋಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ತಗುಲಿದ ಬೆಂಕಿಗೆ ಎರಡು ಕಾರುಗಳು ಸೋಮವಾರ ಭಸ್ಮವಾಗಿವೆ.

ನವನಗರದ ಸೆಕ್ಟರ್ 38ರ ನಿವಾಸಿ ಇಸಾಕ್ ದಾಂಡಿಯಾ ಅವರಿಗೆ ಸೇರಿದ ಇಲೆಕ್ಟ್ರಾನಿಕ್ ಕಾರಿನ ಬ್ಯಾಟರಿಯನ್ನು ಚಾರ್ಜ್​ಗೆ ಹಾಕಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಾರಿಗೆ ಬೆಂಕಿ ತಗುಲಿದೆ. ನಂತರ ವ್ಯಾಪಿಸಿದ ಜ್ವಾಲೆಗೆ ಪಕ್ಕದಲ್ಲಿದ್ದ ಇಂಡಿಗೋ ಕಾರಿಗೂ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಎರಡು ಕಾರುಗಳು ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.