ಆರೋಗ್ಯ, ವೈದ್ಯಕೀಯ ಶಿಕ್ಷಣ ವಿಲೀನ ಅಗತ್ಯ

ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು ಅಗತ್ಯವಾಗಿದೆ. ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ವಿಲೀನಗೊಳಿಸಬೇಕು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಹೇಳಿದರು.

ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಶುಕ್ರವಾರ ಸಂಜೆ ಕಾಲೇಜಿನ ಶತಾಬ್ಧಿ ಭವನದಲ್ಲಿ ಹಮ್ಮಿಕೊಂಡಿದ್ದ ರೋಗಶಾಸಜ್ಞರು ಮತ್ತು ಸೂಕ್ಷ್ಮಜೀವಶಾಸಜ್ಞರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷೃಣ ಒಂದೇ ಸಚಿವಾಲಯದ ಅಡಿಯಲ್ಲಿ ಬಂದಾಗ ಸಮಸ್ಯೆಗಳಿಗೆ ಪರಿಹಾರ ದೊರಕಿಸಬಹುದು. ಎರಡೂ ಬೇರೆ ಬೇರೆ ಸಚಿವಾಲಯದಲ್ಲಿರುವುದರಿಂದ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆಗೆ ವೈದ್ಯರ ಅಗತ್ಯವಿದ್ದು, ವೈದ್ಯಕೀಯ ಶಿಕ್ಷೃಣದಲ್ಲಿ ಸಂಶೋಧನೆಗೆ ಒತ್ತು ನೀಡಬೇಕಿದೆ. ಎರಡೂ ಇಲಾಖೆಗಳ ವಿಲೀನದಿಂದ ವೈದ್ಯಕೀಯ ಶಿಕ್ಷಣ, ಆರೋಗ್ಯ ಕ್ಷೇತ್ರದ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಪ್ರಧಾನಿ ಬಳಿಗೆ ನಿಯೋಗ
ರಾಜ್ಯದಲ್ಲಿ ಆರೋಗ್ಯ ಸೌಲಭ್ಯ ಮೇಲ್ದರ್ಜೆಗೇರಿಸಲು ಶೀಘ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವರ ಬಳಿ ನಿಯೋಗ ಕೊಂಡೊಯ್ಯಲಾಗುವುದು. ವಿದೇಶದಲ್ಲಿ ದೊರೆಯುವ ಗುಣಮಟ್ಟದ ಆರೋಗ್ಯ ಸೇವೆ ಇಲ್ಲಯೂ ದೊರೆಯಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ಕೇಂದ್ರ ಸರ್ಕಾರದ ನೆರವು ಅಗತ್ಯವಾಗಿದೆ. ಎಲ್ಲ ದೃಷ್ಟಿಕೋನ ಇಟ್ಟುಕೊಂಡು ಪ್ರಧಾನಿಯನ್ನು ಭೇಟಿ ಮಾಡಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ನಗರ ಪ್ರದೇಶದಲ್ಲಿ ಜಾಗೃತಿ
ಡೆಂೆ, ಚಿಕೂನ್ ಗುನ್ಯಾ, ನಿಾ ಸೇರಿ ಹಲವು ಸಾಂಕ್ರಾಮಿಕ ರೋಗಗಳು ನಿರಂತರವಾಗಿ ಕಾಡತೊಡಗಿವೆ. ಮಂಗನ ಕಾಯಿಲೆಗೆ ಈವರೆಗೆ ಸೂಕ್ತ ಔಷಧ ದೊರೆತಿಲ್ಲ. ಇಂಥ ವಿಚಾರಗಳಲ್ಲಿ ಸಂಶೋಧನೆ ನಡೆಯಬೇಕಿದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರದ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಜಾಗೃತಿ ಕೊರತೆ, ಸ್ವಚ್ಛತೆ ಬಗ್ಗೆ ನಿರ್ಲಕ್ಷೃವೇ ಇದಕ್ಕೆ ಕಾರಣ. ಈ ಬಗ್ಗೆ ಬೃಹತ್ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಕರ್ನಾಟಕವೇ ಅಚ್ಚುಮೆಚ್ಚು
ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉಳಿದ ರಾಜ್ಯಗಳಿಗಿಂತ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹೀಗಾಗಿ ಹೊರರಾಜ್ಯದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕವೇ ಅಚ್ಚುಮೆಚ್ಚಾಗಿದೆ ಎಂದ ಅವರು, ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ಮೂಲಕ 5 ಲಕ್ಷೃ ರೂ.ವರೆಗಿನ ವೈದ್ಯಕೀಯ ಸೇವೆ ಉಚಿತವಾಗಿ ಕಲ್ಪಿಸುತ್ತಿದೆ. ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯೂ ಜನರಿಗೆ ಅನುಕೂಲವಾಗಿದೆ. ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವರು ಹೇಳಿದರು.

ಬಾಗಲಕೋಟೆ ಜಿಲ್ಲೆಗೂ ಹಿಂದುಳಿದ ಪಟ್ಟಿ ಅಂಟಿಸಲಾಗಿತ್ತು. ಬಿವಿವಿ ಸಂಘದಂತಹ ವಿವಿಧ ಶಿಕ್ಷಣ ಸಂಸ್ಥೆಗಳು ಶ್ರಮದಿಂದಾಗಿ ಅಭಿವೃದ್ಧಿ ಹೊಂದಿದೆ. ಶಾಸಕ ಡಾ.ವೀರಣ್ಣ ಚರಂತಿಮಠ ಸಾರಥ್ಯದಲ್ಲಿ ಬಿವಿವಿ ಸಂಘ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಸಿದರು.

ನವದೆಹಲಿ ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಾ.ಚಂದ್ರಶೇಖರ ಮಾತನಾಡಿ, ಪೆಥಾಲಜಿ ಹಾಗೂ ಮೈಕ್ರೋಬಯಾಲಜಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಲ್ಲಿ ನೆರವು ನೀಡಲಾಗುವುದು ಎಂದು ಘೋಷಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದಕೀಯ ಕಾಲೇಜು ಮಂಡಳಿ ಕಾರ್ಯಾಧ್ಯಕ್ಷೃ ಸಿದ್ದಣ್ಣ ಶೆಟ್ಟರ, ಕಾಲೇಜು ಡೀನ್ ಡಾ.ಅಶೋಕ ಮಲ್ಲಾಪುರ, ಕೆಸಿಐಎಪಿಎಂ ಅಧ್ಯಕ್ಷೃ ಡಾ.ಎಚ್.ಎನ್. ರವಿಕುಮಾರ್, ಕಾರ್ಯಕ್ರಮದ ಸಂಘಟಕರಾದ ಡಾ.ಎಸ್.ಎಸ್. ಇನಾಮದಾರ, ಡಾ.ಎಂ.ಎಚ್. ಪ್ರಭು ಇತರರು ಇದ್ದರು.

ನೋಡಲ್ ಕೇಂದ್ರಕ್ಕೆ ಮನವಿ
ಬಾಗಲಕೋಟೆ ಸೇರಿ ಸುತ್ತ್ತಲಿನ ಭಾಗದಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ಥೆಲಿಸೇಮಿಯಾ ಮತ್ತು ಹೆಮೋೆಲಿಯಾ ರೋಗಕ್ಕೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೇಂದ್ರ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ನೋಡಲ್ ಕೇಂದ್ರವನ್ನಾಗಿ ಪರಿಗಣಿಸಿ ಸರ್ಕಾರದಿಂದ ನೆರವು ದೊರೆಯುವಂತೆ ಮಾಡಬೇಕು. ಸದ್ಯ ದಾನಿಗಳ ನೆರವಿನಿಂದ ಕೇಂದ್ರ ಮುನ್ನಡೆಯುತ್ತಿದೆ. ಈ ರೋಗಪೀಡಿತ ಮಕ್ಕಳಿಗೆ ನೆರವಾಗಲು ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘದ ಮೂಲಕ ವಾರ್ಷಿಕ 25 ಲಕ್ಷೃ ರೂ. ವ್ಯಯ ಮಾಡಲಾಗುತ್ತಿದೆ. ಇದರ ಚಿಕಿತ್ಸೆಗಾಗಿ ದಾವಣಗೆರೆ, ಬೆಂಗಳೂರು ನಗರ ಅವಲಂಬಿಸಬೇಕಿದೆ. ನೋಡಲ್ ಕೇಂದ್ರವೆಂದು ಪರಿಗಣಿಸಿ ಸರ್ಕಾರದಿಂದ ಸಹಾಯ ದೊರೆತಲ್ಲಿ ಮತ್ತಷ್ಟು ಶಕ್ತಿ ಬರಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮಲು ಅವರಲ್ಲಿ ಶಾಸಕ ಡಾ. ವೀರಣ್ಣ ಚರಂತಿಮಠ ಮನವಿ ಮಾಡಿದರು.

ವೈದ್ಯಕೀಯ ಶಿಕ್ಷೃಣ ಮತ್ತು ಆರೋಗ್ಯ ಇಲಾಖೆ ವಿಲೀನಗೊಳ್ಳಬೇಕೆಂಬ ಸಚಿವ ಶ್ರೀರಾಮುಲು ಅವರ ಪ್ರಸ್ತಾಪಕ್ಕೆ ನನ್ನ ಬೆಂಬಲವಿದೆ. ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ವಿಲೀನಗೊಂಡಲ್ಲಿ ಸಾಕಷ್ಟು ಪ್ರಯೋಜನವಾಗಲಿದೆ.
– ಡಾ.ವೀರಣ್ಣ ಚರಂತಿಮಠ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಬಾಗಲಕೋಟೆ

Leave a Reply

Your email address will not be published. Required fields are marked *