More

    21ರಂದು ಮೇದಾರ ಜನಾಂಗದ ಸಮಾವೇಶ

    ಬಾಗಲಕೋಟೆ: ಅಖಿಲ ಕರ್ನಾಟಕ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಹಾಗೂ ಮೇದಾರ ಸಮಾಜದ ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲಾ ಮೇದಾರ(ಎಸ್.ಟಿ)ಜನಾಂಗದ ಸಮಾವೇಶ ಜ.21ರಂದು ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಜಿಲ್ಲಾ ಅಧ್ಯಕ್ಷ ಅಯ್ಯಪ್ಪ ಮೇದಾರ ತಿಳಿಸಿದ್ದಾರೆ.

    ಜ.10 ರಂದು ಜಿಲ್ಲೆಯ ಚಿದ್ರಿ ಗ್ರಾಮದಲ್ಲಿರುವ ಐಕ್ಯಮಂಟಪದಿಂದ ಮೇದಾರ ಕೇತೇಶ್ವರ ಜ್ಯೋತಿ ಯಾತ್ರೆ ಆರಂಭಗೊಂಡಿದ್ದು, ರಾಜ್ಯದಲ್ಲಿ ನಿರಂತರ 50 ದಿನ ಸಂಚರಿಸಿ ಜ.25ರಂದು ಚಿತ್ರದುರ್ಗದಲ್ಲಿರುವ ಮೇದಾರ ಗುರುಪೀಠದ ಸೀಬಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜ.21ರಂದು ಬೆಳಗ್ಗೆ 9 ಗಂಟೆಗೆ ನಗರಕ್ಕೆ ಆಗಮಿಸುವ ಮೇದಾರ ಕೇತೇಶ್ವರ ಜ್ಯೋತಿ ಯಾತ್ರೆಯನ್ನು ಸ್ವಾಗತಿಸಿಕೊಳ್ಳಲಾಗುವುದು. ಸುಮಂಗಲೆಯರು ಪೂರ್ಣ ಕುಂಭದೊಂದಿಗೆ ಝಾಂಜ್ ಪಥಕ್, ಕರಡಿ ಮಜಲು ಸೇರಿ ವಿವಿಧ ವಾದ್ಯಗಳೊಂದಿಗೆ ಮಾರವಾಡಿ ಗಲ್ಲಿ, ಅಡತ ಬಜಾರ್, ಮಾಬುಸುಬಾನಿ ದರ್ಗಾ ಸರ್ಕಲ್, ಪಂಕಾ ಮಸೀದಿ, ವಲ್ಲಭಭಾಯಿ ಚೌಕ್ ಮಾರ್ಗವಾಗಿ ಸಂಚರಿಸಲಿರುವ ಜ್ಯೋತಿ ಯಾತ್ರೆ ಮರಳಿ ಸ್ಟೇಷನ್ ರಸ್ತೆ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪಕ್ಕೆ ತೆರಳಲಿದೆ.

    ಕಾರ್ಯಕ್ರಮದ ಸಾನ್ನಿಧ್ಯವನ್ನು ಇಳಕಲ್ಲ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ.ಗದ್ದಿಗೌಡರ, ಗುರು ಮೇದಾರ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಪಾಟೀಲ, ರಮೇಶ ಬುರಡ, ಅಯ್ಯಪ್ಪ ಮೇದಾರ ಆಗಮಿಸಲಿದ್ದಾರೆ ಎಂದು ಹೇಳಿದರು.

    ಚಂದ್ರಶೇಖರ ಬುಡ್ಡರ, ಹನುಮಂತ ಬುಡ್ಡರ, ಚನ್ನಬಸು ಬುಡ್ಡರ, ಮಲ್ಲಿಕಾರ್ಜುನ ಜೈನಾಪೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts