ಹಾಲಿ-ಮಾಜಿ ಸಚಿವರು ಸೇರಿ ಹೋರಾಟಗಾರರು ದೋಷಮುಕ್ತ

ಬಾಗಲಕೋಟೆ: ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ 2010ರಲ್ಲಿ ನಡೆದ ಹೋರಾಟದ ವೇಳೆ ರೈಲ್ವೆ ತಡೆದ ಪ್ರಕರಣ ಎದುರಿಸುತ್ತಿದ್ದ ರಾಜ್ಯದ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವೆ ಉಮಾಶ್ರೀ, ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ರೈಲ್ವೆ ರೋಕೋ ಹೋರಾಟ ನಡೆಸಿದ್ದ 20 ಜನರ ವಿರುದ್ಧ ಪ್ರಕರಣ ದಾಖಲಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ನ್ಯಾಯಾಲಯದಲ್ಲಿ 7 ವರ್ಷ ಹಾಗೂ 2 ವರ್ಷಗಳಿಂದ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಕುರಿತು ವಿಚಾರಣೆ ನಡೆದಿತ್ತು. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ. ಪಾಟೀಲ ಅವರ ಪೀಠ ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡು ಸೂಕ್ತ ದಾಖಲೆ ಒದಗಿಸುವಲ್ಲಿ ಮತ್ತು ಆರೋಪ ಸಾಬೀತುಪಡಿಸುವಲ್ಲಿ ರೈಲ್ವೆ ಇಲಾಖೆ ವಿಲವಾಗಿದ್ದು, ಹೀಗಾಗಿ ಪ್ರಕರಣದಲ್ಲಿದ್ದ 20 ಜನರನ್ನೂ ದೋಷಮುಕ್ತ ಮಾಡಲಾಗಿದೆ ಎಂದು ತೀರ್ಪು ನೀಡಿದ್ದಾರೆ.