ತರಕಾರಿ ಬೆಳೆಯಲು ಆದ್ಯತೆ ನೀಡಿ

ಬಾಗಲಕೋಟೆ: ಕೇಂದ್ರ ಸರ್ಕಾರದ ಆಶಯದಂತೆ ತರಕಾರಿ ಉತ್ಪಾ ದನೆಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ, ಅವುಗಳ ಮೌಲ್ಯವರ್ಧನೆಗೆ ಒತ್ತು ನೀಡುವುದು ಅವಶ್ಯಕವಾಗಿದೆ ಎಂದು ತೋವಿವಿ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ. ಕೋಟಿಕಲ್ಲ ವಿವರಿಸಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಮೆಣಸಿನಕಾಯಿ, ಟೊಮ್ಯಾಟೊ ಹಾಗೂ ಬದನೆ ಬೆಳೆಯ ನೂತನ ತಾಂತ್ರಿಕತೆಗಳ ಕುರಿತು ಮೂರು ದಿನಗಳ ಕಾಲ ದಿನಗಳ ತರಬೇತಿ ಕಾರ್ಯಕ್ರಮದ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿವಿಧ ಹಂತಗಳಲ್ಲಿ ಒಂದೇ ತರಕಾರಿ ಬಿತ್ತನೆ ಮಾಡಿದಲ್ಲಿ ಬೆಲೆಯ ವ್ಯತ್ಯಾಸದಿಂದ ಆಗುವ ನಷ್ಟ ಕಡಿಮೆಗೊಳಿಸಬಹುದು ಎಂದರು.

ತೋವಿವಿ ವಿಶೇಷ ಅಧಿಕಾರಿ ಡಾ.ಟಿ.ಬಿ. ಅಳ್ಳೊಳ್ಳಿ ಟೊಮ್ಯಾಟೊ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ, ಡಾ.ಅರುಣಕುಮಾರ ಟಿ.ಡಿ. ತರಕಾರಿ ಬೆಳೆಗಳಲ್ಲಿ ರಫ್ತು ಅವಕಾಶಗಳು, ಶ್ರೀಪಾದ ವಿಶ್ವೇಶ್ವರ ರೈತರ ಆದಾಯ ವೃದ್ಧಿಸುವಲ್ಲಿ ತರಕಾರಿ ಬೆಳೆಗಳ ಉತ್ಪಾದಕರ ಸಂಘದ ಪಾತ್ರ ಕುರಿತು ಉಪನ್ಯಾಸ ನೀಡಿದರು. ತರಬೇತಿಯಲ್ಲಿ 46 ರೈತರು

ಪಾಲ್ಗೊಂಡಿದ್ದರು.

ಕೃಷಿ ಸಂಪನ್ಮೂಲ ಕೇಂದ್ರದ ನಿರ್ದೇಶಕ ಬಸಣ್ಣ ರಾಜಾಪುರೆ, ಕಾರ್ಯನಿರ್ವಾಹಕ ನಿರ್ದೇಶಕ ಎಫ್.ಬಿ. ಬಾಳಿಕಾಯಿ, ಡಾ. ಶಶಿಕಾಂತ ಏವೂರ, ಡಾ. ಅಂಬರೀಶ, ಡಾ. ಪ್ರಸನ್ನ, ಡಾ. ಬಾಪುರಾಯನಗೌಡ ಪಾಟೀಲ ಸೇರಿದಂತೆ ಮತ್ತಿತರಿದ್ದರು.

ತೋವಿವಿಯು ರೈತರ ಸೇವೆಗೆ ಸದಾ ಸಿದ್ಧವಿದ್ದು, ರೈತರು ನಿರಂತರ ವಿಜ್ಞಾನಿ ಗಳೊಂದಿಗೆ ಸಂಪರ್ಕದಲ್ಲಿರಬೇಕು. ರೈತರ ಅನುಕೂಲತೆಗೆ ಆಯೋಜಿಸುವ ಇಂತಹ ತರಬೇತಿಗಳ ಸದುಪಯೋಗ ಪಡೆಯಲು ಉತ್ಸುಕರಾಗಿರಬೇಕು. ರೈತ ಉತ್ಪಾದಕ ಸಂಘಗಳ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಳ್ಳಬೇಕು.

| ಡಾ.ವೈ.ಕೆ. ಕೋಟಿಕಲ್ಲ ತೋವಿವಿ ವಿಸ್ತರಣಾ ನಿರ್ದೇಶಕ