ಕಮತಗಿಯಲ್ಲಿ ಗಣವೇಷಧಾರಿಗಳ ಸಂಚಲನ

ಕಮತಗಿ: ವಿಜಯ ದಶಮಿ ಹಬ್ಬ ಹಾಗೂ ಆರ್​ಎಸ್​ಎಸ್ ಸಂಸ್ಥಾಪನೆ ಅಂಗವಾಗಿ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಶನಿವಾರ ಆರ್​ಎಸ್​ಎಸ್ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.

ಶಹರ ಗಜಾನನ ಮಂಡಳಿ ಸ್ಥಳದಿಂದ ಆರಂಭಗೊಂಡ ಪಥಸಂಚಲನ ಕಮತಗಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಪಾರ್ವತಿ ಪರಮೇಶ್ವರ ಮಂಗಲ ಭವನಕ್ಕೆ ತಲುಪಿ ಮುಕ್ತಾಯಗೊಂಡಿತು. ನಂತರ ನಡೆದ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ಸಂಘದ ಬೌದ್ಧಿಕ ವಕ್ತಾರ ರವಿ ಸೇಬನಕಟ್ಟಿ ಮಾತನಾಡಿ, ಆರ್​ಎಸ್​ಎಸ್ ಸಮಾಜಮುಖಿಯಾಗಿ ದೇಶದಲ್ಲಿ ಸೇವೆ ಮಾಡುತ್ತಿದ್ದು, ಪ್ರಕೃತಿ ವಿಕೋಪ ಸೇರಿ ಇತರೆ ತುರ್ತು ಸಂದರ್ಭಗಳಲ್ಲಿ ಸ್ವಯಂ ಸೇವಕರು ಸೇವಾಭಾವನೆಯಿಂದ ಕೆಲಸ ಮಾಡುತ್ತಾರೆ. ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಯುವ ಜನರು ತಮ್ಮ ಕರ್ತವ್ಯ ಅರಿತು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಸಂಸ್ಕೃತ ಶಿಕ್ಷಕ ಪ್ರಕಾಶ ಅಚನೂರ ಮಾತನಾಡಿದರು. ದಿಗಂಬ್ರೆಪ್ಪ ಭಾಪ್ರಿ, ಮುತ್ತು ಕುಂಬಾರ, ರವಿ ಇಂಡಿ, ವಿನೋದ ವಡವಡಗಿ, ಶ್ರೀನಿವಾಸ ಸಂದರಕಿ, ಪ್ರಜ್ವಲ ಲಮಾಣಿ, ಮಹೇಶ ಅಚನೂರ, ಗುರುನಾಥ ಅಚನೂರ, ಶಿವಾನಂದ ಹೊಸಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.