ಬಾಗಲಕೋಟೆಯಲ್ಲಿ 1050 ವರ್ಷಗಳಷ್ಟು ಹಳೆಯ, ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ!

ಬಾಗಲಕೋಟೆ: ಜಮಖಂಡಿ ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ 1050 ವರ್ಷಗಳಷ್ಟು ಹಳೆಯದಾದ ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರು ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಹಳೆಗನ್ನಡದಲ್ಲಿರುವ ಶಾಸನದ ತುಂಡು ಮಾತ್ರ ಪತ್ತೆಯಾಗಿದೆ. ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರಾದ ರಟ್ಟರ ಕಾಲದ ಶಾಸನ ಎಂದು ಊಹಿಸಲಾಗಿದೆ. ಲೋಕೋಪಯೋಗಿ ಇಲಾಖೆ ಆವರಣದ ನಿರುಪಯುಕ್ತ ಸ್ಥಳದಲ್ಲಿ ಬಿದ್ದದ್ದ ಕಲ್ಲಿನ ಶಾಸನವು ಶಿವನ ದೇವಾಲಯಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ ಎಂದು ಸಂಶೋಧಕ … Continue reading ಬಾಗಲಕೋಟೆಯಲ್ಲಿ 1050 ವರ್ಷಗಳಷ್ಟು ಹಳೆಯ, ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ!