ಪೂರ್ವಿ ಬಿಜ್ಜಲ್‌ಗೆ ಸನ್ಮಾನ

ಇಳಕಲ್ಲ: ಹಾಂಗ್‌ಕಾಂಗ್‌ನಲ್ಲಿ ಇತ್ತೀಚೆಗೆ ನಡೆದ 3ನೇ ಅಂತಾರಾಷ್ಟ್ರೀಯ ಶಾಲಾ ರೋಪ್ ಸ್ಕಿಪ್ಪಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಜಯಿಸಿದ ನಗರದ ಮಾರ್ಗದರ್ಶನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಪೂರ್ವಿ ರಾಘು ಬಿಜ್ಜಲ್ ಅವರನ್ನು ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಸನ್ಮಾನಿಸಿದರು.

ಸ್ಥಳೀಯ ಜೋಷಿ ಗಲ್ಲಿಯಲ್ಲಿ ರೋಟರಿ ಕ್ಲಬ್ ಹಾಗೂ ರಾಘು ಬಿಜ್ಜಲ್ ಗೆಳೆಯರ ಬಳಗ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪೂರ್ವಿ ಬಿಜ್ಜಲ್ ಮಾತನಾಡಿ, ದೇಶ ಪ್ರತಿನಿಧಿಸಿ ಆಡುವುದು ನನಗೆ ಹೆಮ್ಮೆ ತಂದಿದೆ. ಹಾಂಗ್‌ಕಾಂಗ್‌ನಲ್ಲಿ ರೋಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ತ್ರಿವಣ ಧ್ವಜ ಸ್ವೀಕರಿಸಿದಾಗ ಸಂತೋಷದಿಂದ ಭಾವುಕಳಾದೆ. ಈ ಪದಕ ಗೆಲ್ಲಲು ನನ್ನ ಅಪ್ಪ ಹಾಗೂ ಅವ್ವನ ಪ್ರೋತ್ಸಾಹ, ಪ್ರೇರಣೆ ಕಾರಣ ಎಂದು ಹೇಳಿದರು. ಮುನಿಸ್ವಾಮಿ ದೇವಾಂಗಮಠ ಸಾನಿಧ್ಯ ವಹಿಸಿ ಮಾತನಾಡಿ, ಈ ವಿದ್ಯಾರ್ಥಿನಿಯ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಸಿದರು. ವಿ.ಎಸ್. ಶೆಟ್ಟರ, ಗೋವಿಂದಪ್ಪ ಬಿಜ್ಜಲ್, ನಿವತ್ತ ದೈಹಿಕ ಸಹಾಯಕ ನಿರ್ದೇಶಕ ಮುಚಖಂಡಿ ಇದ್ದರು.