ಬಣ್ಣದೋಕುಳಿಯಲ್ಲಿ ಮಿಂದೆದ್ದ ‘ಕೋಟೆ’

ಬಾಗಲಕೋಟೆ: ಅತ್ಯಂತ ವಿಜೃಂಬಣೆಯಿಂದ ಆರಂಭವಾಗಿದ್ದ ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬವು ಎರಡನೇ ದಿನವಾದ ಬುಧವಾರ ಸಂಭ್ರಮ ಸಡಗರದಿಂದ ಜರುಗಿತು. ಬಣ್ಣದೋಕುಳಿಯಲ್ಲಿ ಕೋಟೆನಗರಿ ಮಿಂದೆದ್ದಿತು. ಹಳೇ ನಗರ, ನವನಗರ, ವಿದ್ಯಾಗಿರಿಯ ಗಲ್ಲಿಗಲ್ಲಿಗಳಲ್ಲಿ ಬೆಳಗ್ಗೆಯಿಂದಲೆ ಬಣ್ಣದಾಟ ಅಬ್ಬರದಿಂದ ಆರಂಭಗೊಂಡಿತು. ಮಕ್ಕಳು, ಮಹಿಳೆಯರು, ವೃದ್ದರು ಸೇರಿದಂತೆ ಎಲ್ಲರು ರಂಗೀನಾಟವಾಡಿ ಸಂಭ್ರಮಿಸಿದರು. ಎರಡನೇ ದಿನ ಬುಧವಾರ ವೆಂಕಟಪೇಟ, ಹಳಪೇಟ, ಜೈನ್‌ಪೇಟ ಮೂರು ಕಡೆಗಳಲ್ಲಿ ಬಣ್ಣದೋಕುಳಿ ನಡೆಯಿತು. ಚಿಣ್ಣರು, ಯುವಕರು ಹಲಗೆ ಭಾರಿಸುತ್ತಾ ನಗರದ ಪ್ರಮುಖ ಬೀದಿ ಸಂಚರಿಸಿದರು. ಕ್ಷಣ ಕ್ಷಣಕ್ಕೂ ಹೊರ ಹೊಮ್ಮುತ್ತಿದ್ದ … Continue reading ಬಣ್ಣದೋಕುಳಿಯಲ್ಲಿ ಮಿಂದೆದ್ದ ‘ಕೋಟೆ’