ಅಮರೇಶ್ವರ ಶ್ರೀಗಳ 30ರಿಂದ ಪುಣ್ಯಾರಾಧನೆ ಸುವರ್ಣ ಮಹೋತ್ಸವ

ಬಾಗಲಕೋಟೆ: ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ ಗ್ರಾಮದ ಅಮರೇಶ್ವರ ಮಠದಲ್ಲಿ ಲಿಂ. ಅಮರೇಶ್ವರ ಶಿವಾಚಾರ್ಯ ಶ್ರೀಗಳ 50ನೇ ಪುಣ್ಯಾರಾಧನೆ ಸುವರ್ಣ ಮಹೋತ್ಸವ ಮೇ 30 ರಿಂದ ಜೂನ್ 1 ರವರೆಗೆ ಜರುಗಲಿದೆ ಎಂದು ಶ್ರೀಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ 50 ಜೋಡಿ ಆದರ್ಶ ದಂಪತಿಗೆ ಸತ್ಕಾರ, 50 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಅಮರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ವಿಶ್ವಶಾಂತಿಗಾಗಿ ಮಹಾಮೃತ್ಯುಂಜಯ ಹೋಮ ಜರುಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

30ರಂದು ಸಂಜೆ ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಗಮಿಸಲಿದ್ದು, ಅದ್ದೂರಿ ಸ್ವಾಗತ ಕೋರಲಾಗುವುದು. ಅವರ ಸಾನ್ನಿಧ್ಯದಲ್ಲಿ ಸಂಜೆ 7 ಗಂಟೆಗೆ ಸಿದ್ಧಾಂತ ಶಿಖಾಮಣಿ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ವಿಭೂತಿಪೂರಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷೃತೆ ವಹಿಸುವರು. ಮಸ್ಕಿ ಗಚ್ಚಿನಮಠದ ವರದರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗವಹಿಸುವರು.

ಮೇ 31ರಂದು ಬೆಳಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ನಂತರ ಸಂಜೆ 7 ಗಂಟೆಗೆ ಸಿದ್ಧಾಂತ ಶಿಖಾಮಣಿ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ. ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಇತರರು ಪಾಲ್ಗೊಳ್ಳುವರು. ಹೊಳೆಹುಚ್ಚೇಶ್ವರ ಶಿಕ್ಷೃಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೃ ಹೊಳಬಸು ಶೆಟ್ಟರ, ತೋಗುಣಸಿ ಪಿಕೆಪಿಎಸ್ ಅಧ್ಯಕ್ಷೃ ಬಸನಗೌಡ ಪಾಟೀಲ ಇತರರು ಅತಿಥಿಗಳಾಗಿ ಆಗಮಿಸುವರು.

ಜೂನ್ 1ರಂದು ಬೆಳಗ್ಗೆ 6 ಗಂಟೆಗೆ ಅಮರೇಶ್ವರ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಮಹಾಮಂಗಳಾರತಿ ಅನೇಕ ಪುರೋಹಿತರ ಸಮ್ಮುಖದಲ್ಲಿ ಜರುಗಲಿದೆ. ವಿಶ್ವಶಾಂತಿಗಾಗಿ ಮಹಾಮೃತ್ಯುಂಜಯ ಹೋಮ, ಬೆಳಗ್ಗೆ 10.05ಕ್ಕೆ ಪುಣ್ಯಾರಾಧನೆಯ ಸುವರ್ಣ ಮಹೋತ್ಸವ, ಆದರ್ಶ ದಂಪತಿಗಳಿಗೆ ಸತ್ಕಾರ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಅಮರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಂಭಾಪುರಿ ಪೀಠದ ಜಗದ್ಗುರು ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ. ವೀರಣ್ಣ ಚರಂತಿಮಠ, ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಉದ್ಯಮಿ ಜಗದೀಶ ಗುಡಗುಂಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಚುನಾಯಿತ ಪ್ರತಿನಿಧಿಗಳು ಆಗಮಿಸುವರು. ಕಾರ್ಯಕ್ರಮದಲ್ಲಿ ಉದ್ಯಮಿ, ಪ್ರಭುಲಿಂಗೇಶ್ವರ ಶುಗರ್ಸ್ ಹಾಗೂ ಕೆಮಿಕಲ್ಸ್‌ನ ಅಧ್ಯಕ್ಷೃ ಜಗದೀಶ ಗುಡಗುಂಟಿ ಅವರಿಗೆ ಒಂದು ತೊಲ ಬಂಗಾರ ಹಾಗೂ ಲಕವನ್ನೊಳಗೊಂಡ ‘ಅಮರಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *