More

    ಶೇ.50 ರಷ್ಟು ಕರ ವಸೂಲಿ ಮಾಡದಿದ್ದರೆ ಶಿಸ್ತು ಕ್ರಮ

    ಬಾಗಲಕೋಟೆ: ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ಶೇ.50 ರಷ್ಟು ಕರ ವಸೂಲಿ ಮಾಡದಿದ್ದಲ್ಲಿ ಬಿಲ್ ಕಲೆಕ್ಟರ್‌ಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

    ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಗುರುವಾರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್‌ಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 198 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಪಂಗೆ ಒಬ್ಬರಂತೆ ಬಿಲ್ ಕಲೆಕ್ಟರ್‌ಗಳು ಇದ್ದು, ಪ್ರತಿ ವರ್ಷ ಕನಿಷ್ಠ ಶೇ.50 ರಷ್ಟಾದರೂ ಕರ ವಸೂಲಿ ಮಾಡಬೇಕು. ಆಗದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

    ಕರ ವಸೂಲಿಗೆ ಸ್ಥಳೀಯ ಎನ್‌ಜಿಒ ಹಾಗೂ ಮಹಿಳಾ ಸಂಘಗಳನ್ನು ತೊಡಗಿಸಿಕೊಳ್ಳಬೇಕು. ಅಲ್ಲದೆ, ಕರ ವಸೂಲಿಗೆ ತಾವು ಸೇರಿ ಉಪಕಾರ್ಯದರ್ಶಿಗಳು, ಮುಖ್ಯ ಯೋಜನಾಧಿಕಾರಿಗಳು, ಸಹಾಯಕ ಕಾರ್ಯದರ್ಶಿಗಳು ಬರಲು ಸಿದ್ಧರಿದ್ದೇವೆ. ಹೆಚ್ಚಿಗೆ ಕರ ವಸೂಲಿ ಮಾಡಿದವರಿಗೆ ಬಹುಮಾನ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಜಿಪಂ ಉಪ ಕಾರ್ಯದರ್ಶಿ ಎ.ಜಿ. ತೋಟದ, ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ, ಸಹಾಯಕ ಕಾರ್ಯದರ್ಶಿ ಜೆ.ಎಸ್.ಪಟ್ಟಣದ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts