ಬಾಗಲಕೋಟೆ: ಬಾಗಲಕೋಟೆ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಮೊಲಗಳನ್ನು ಬೇಟೆಯಾಡುತ್ತಿದ್ದ ನಾಲ್ವರನ್ನು ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಎ.ಎಸ್.ನೇಗಿನಾಳ ನೇತೃತ್ವದ ತಂಡ ಬಂಧಿಸಿದೆ.
ಗ್ಯಾನಪ್ಪ ಗುಳಬಾಳ, ಯಲ್ಲಪ್ಪ ವಾಲಿಕಾರ, ಮುತ್ತಪ್ಪ ಚಲವಾದಿ, ಹನುಮಂತ ಯಳ್ಳಿಗುತ್ತಿ ಬಂಧಿತ ಆರೋಪಿಗಳು. ಅರಣ್ಯ ಪ್ರದೇಶಗಳಲ್ಲಿ ಮೊಲಗಳನ್ನು ಬೇಟೆಯಾಡುವ ಬಗ್ಗೆ ದೊರೆತ ಖಚಿತ ಮಾಹಿತಿಯೊಂದಿಗೆ ಬಾಗಲಕೋಟೆ ತಾಲೂಕಿನ ಸಂಗಾಪುರ ಕ್ರಾಸ್ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಹೊಲದಲ್ಲಿ 6 ಮೊಲಗಳನ್ನು ಬೇಟೆಯಾಡಿ ಕೂಡಿಟ್ಟಿದ್ದ ನಾಲ್ಕು ಜನರನ್ನು ಮಾಲು ಸಮೇತ ಬಂಧಿಸಲಾಗಿದೆ. ದಾಳಿ ತಂಡದಲ್ಲಿ ವಲಯ ಅರಣ್ಯ ಅಧಿಕಾರಿ ರೂಪ ವಿ.ಕೆ., ಉಪ ವಲಯ ಅರಣ್ಯ ಅಧಿಕಾರಿಗಳಾದ ಎ.ಎಂ.ಅಲಿಯಾರ, ಅನಿಲಕುಮಾರ ರಾಠೋಡ, ಪ್ರಶಾಂತ ಹಾಗೂ ಸಿಬ್ಬಂದಿ ಇದ್ದರು.