ಪ್ರವಾಹ ನಿಯಂತ್ರಣಕ್ಕೆ ಪ್ರತ್ಯೇಕ ಇಲಾಖೆ ಆರಂಭಿಸಿ

ಬಾಗಲಕೋಟೆ: ಪ್ರವಾಹದ ಸಂತ್ರಸ್ತರು ಭಿಕ್ಷುರಲ್ಲ. ಅವರು ಕೊಡುಗೈದಾನಿಗಳು. ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟ ಎದುರಿಸುಂತಾಗಿದೆ. ಜನರು ಉದಾರ ಮನಸ್ಸಿನಿಂದ ಅವರಿಗೆ ಸೌಲಭ್ಯ ಒದಗಿಸಬೇಕು. ಪ್ರವಾಹ ನಿಯಂತ್ರಣಕ್ಕಾಗಿ ಸರ್ಕಾರಗಳು ವಿಶೇಷ ಇಲಾಖೆ ಆರಂಭಿಸಬೇಕು ಎಂದು ಪಾವಗಡದ ರಾಮಕೃಷ್ಣ ವಿವೇಕಾನಂದ ಆಶ್ರಯಮದ ಜಪಾನಾನಂದ ಮಹಾರಾಜರು ತಿಳಿಸಿದರು.

ಬೆಂಗಳೂರಿನ ಇನ್‌ೆಸಿಸ್ ೌಂಡೇಷನ್ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದೊಂದಿಗೆ ಜಿಲ್ಲೆಯ ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳ ್ಯಾಮಿಲಿ ಪ್ಯಾಕ್ ಕಿಟ್ ವಿತರಿಸಲು ಆಗಮಿಸಿದ್ದ ವೇಳೆ ಶನಿವಾರ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರವಾಹ ವಿಷಯದಲ್ಲಿ ಬೆಂಕಿ ಬಿದ್ದಾಗ ಬಾವಿ ತೋಡುವ ಪರಿಸ್ಥಿತಿ ನಮ್ಮಲ್ಲಿದೆ.ವಿಪತ್ತು ಎದುರಿಸಲು ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆ ಆರಂಭಿಸಬೇಕು.ಪ್ರತ್ಯೇಕ ಇಲಾಖೆ ಇದ್ದರೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪದೇ ಪದೆ ಪ್ರವಾಹಕ್ಕೆ ಸಿಲುಕುವ ಕುಟುಂಬಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದ ಹಲವು ಭಾಗದಲ್ಲಿ ಪ್ರವಾಹ ಉಂಟಾಗಿದೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ದಾನ ಜತೆಗೆ ಅವರೊಂದಿಗೆ ಪ್ರೀತಿಯಿಂದ ಬೆರೆಯಬೇಕು. ಅಂದಾಗ ಅವರಲ್ಲಿ ಹೊಸ ಭರವಸೆ ಮೂಡುತ್ತದೆ. ಸಂತ್ರಸ್ತರು ಧೃತಿಗೆಡಬಾರದು. ಮುಂದಿನ ಜೀವನನ್ನು ಹಂತ ಹಂತವಾಗಿ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂತ್ರಸ್ತರಿಗಾಗಿ ಸುಧಾಮೂರ್ತಿ ಅವರ ಇನ್ಫೋಸಿಸ್ ೌಂಡೇಷನ್ ಸಾಕಷ್ಟು ಸಹಾಯ ಹಸ್ತ ಚಾಚುತ್ತಿದೆ. ಇದಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮ ಕೈಜೋಡಿಸಿದೆ. ಪ್ರವಾಹ ಸಂತ್ರಸ್ತ 10 ಸಾವಿರ ಕುಟುಂಬಗಳಿಗೆ ್ಯಾಮಿಲಿ ಪ್ಯಾಕ್ ವಿಶೇಷ ಕಿಟ್ ವಿತರಿಸಲಾಗುವುದು. ಒಂದು ಪ್ಯಾಕ್‌ನಲ್ಲಿ 2 ಕೆಜಿ ತೊಗರಿ ಬೇಳೆ, ಸಾಂಬಾರು ಪುಡಿ, ತಟ್ಟೆಗಳು, ಸೀರೆ, ಕಡ್ಡಿ ಪೊಟ್ಟಣ, ಕ್ಯಾಂಡಲ್, ಬಕೇಟ್, ಸ್ಪೂನ್, 10 ಕೆಜಿ ಅಕ್ಕಿ, ಮಹಿಳೆಯರಿಗೆ ಪ್ಯಾಡ್ ಸೇರಿ ಅಗತ್ಯ ವಸ್ತುಗಳು ಇವೆ ಎಂದ ಅವರು, ಸಂತ್ರಸ್ತರಿಗೆ ಸರ್ಕಾರ ಗುರುತಿಸಿದ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಸಂಸ್ಥೆ ಸಿದ್ಧವಿದೆ ಎಂದು ಹೇಳಿದರು.

ಇನ್ಫೋಸಿಸ್ ೌಂಡೇಷನ್, ಸಮರ್ಪಣ ತಂಡ ಹಾಗೂ ಪಾವಗಡ ರಾಮಕೃಷ್ಣ ಆಶ್ರಮದಿಂದ ಆಗಮಿಸಿದ್ದ ಜಯಶ್ರೀ ಕೆ., ಮಹೇಶ .ಟಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ಆನಂದ ಜಿಗಜಿನ್ನಿ, ಸದಸ್ಯ ರವಿ ಕುಮಟಗಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *