ರೈತ ಸಂಘದಿಂದ ಬರ ಅಧ್ಯಯನ

ಬಾಗಲಕೋಟೆ: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರ ಆವರಿಸಿದೆ. ಆದರೆ, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಲವಾಗಿದೆ. ವಿಪಕ್ಷಗಳು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ, ಕರ್ನಾಟಕದ ಎಲ್ಲ ಭಾಗಗಳಲ್ಲಿ ಬರ ಅಧ್ಯಯನ ನಡೆಸಿ ರಾಜ್ಯಪಾಲರಿಗೆ ವರದಿ ಸಲ್ಲಿಸಲು ಮುಂದಾಗಿದೆ.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಈ ವಿಷಯ ತಿಳಿಸಿದರು.

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ತನ್ನ ಖುರ್ಚಿ ಉಳಿಸಿಕೊಳ್ಳಲು ಹಾಗೂ ಸರ್ಕಾರ ಬಿದ್ದರೆ ತಾವು ಅಕಾರಕ್ಕೆ ಬರಬೇಕು ಎಂದು ವಿಪಕ್ಷ ಬಿಜೆಪಿ ಕೆಲಸ ಮಾಡುತ್ತಿವೆ. ಬರದ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರಿಗೆ ಬರದ ವಾಸ್ತವ ಸ್ಥಿತಿಯ ವರದಿಯನ್ನು ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸರ್ಕಾರ ಜಿಂದಾಲ್ಗೆ ಭೂಮಿಯನ್ನು ಲೀಸ್ ಕೊಡಲಿ. ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಇದಕ್ಕೆ ರಾಜ್ಯ ರೈತ ಸಂಘ ಸುಮ್ಮನೆ ಕೂಡಲ್ಲ. ಹೋರಾಟ ರೂಪಿಸುತ್ತಿದ್ದೇವೆ. ವಿವಿಧ ಸಂಘಟನೆಗಳ ಜತೆಗೂಡಿ ಚಳವಳಿ ನಡೆಸಲಿದ್ದೇವೆ. ಜಿಂದಾಲ್ಗೆ ಭೂಮಿ ಕೊಡಲು ಸುಮ್ಮನಾದರೆ ನಾಳೆ ಇವರೆಲ್ಲ ಸೇರಿಕೊಂಡು ವಿಧಾನಸೌಧವನ್ನು ಪರಭಾರೆ ಮಾಡಲು ಹಿಂದೇಟು ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಜೆ.ಟಿ.ರಾಮಸ್ವಾಮಿ, ರವಿಕಿರಣ ಪೂಂಚಾ, ಶಿವನಗೌಡ ಪಾಟೀಲ, ಪರಶುರಾಮ ಮಂಟೂರ, ಎಂ.ರಾಮು, ಶ್ರೀಶೈಲ ನಾಯಕ, ರುದ್ರಗೌಡ ಪಾಟೀಲ ಮತ್ತಿತರರು ಇದ್ದರು.

ಜುಲೈ 21ರಂದು ಬರಮುಕ್ತ ಕರ್ನಾಟಕಕ್ಕೆ ಸಂಕಲ್ಪ
ರೈತ ಹುತಾತ್ಮ ದಿನವಾದ ಜುಲೈ 21 ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದೇ ದಿನ ರಾಜ್ಯ ರೈತ ಸಂಘ ಬರಮುಕ್ತ ಕರ್ನಾಟಕ ಸಂಕಲ್ಪ ಮಾಡಲಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಜುಲೈ 16ಕ್ಕೆ ಯರಗಟ್ಟಿ ಬಂದ್
ಮಹದಾಯಿ ಹೋರಾಟ ಆರಂಭಗೊಂಡು ನಾಲ್ಕು ವರ್ಷಗಳಾಗಿವೆ. ಈವರೆಗೂ ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಇದೇ ಕಾರಣಕ್ಕೆ ಅಂದು ರೈತ ಸಂಘ ಸೇರಿ ವಿವಿಧ ಸಂಘಟನೆಗಳು, ಹೋರಾಟಗಾರರು ಬೆಳಗಾವಿ ಜಿಲ್ಲೆ ಯರಗಟ್ಟಿ ಬಂದ್‌ಗೆ ಕರೆ ಕೊಟ್ಟಿದ್ದಾಗಿ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಜಿ.ಶಾಂತಸ್ವಾಮಿಮಠ ತಿಳಿಸಿದರು.

Leave a Reply

Your email address will not be published. Required fields are marked *