ಕುಡಿಯವ ನೀರಿನ ಸಮಸ್ಯೆ ಪರಿಹರಿಸಿ

ಬಾಗಲಕೋಟೆ: ತೀವ್ರ ಬರದಿಂದ ಹಳ್ಳಕೊಳ್ಳ, ನದಿಗಳಲ್ಲಿ ನೀರಿಲ್ಲ. ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನ,ಜಾನುವಾರುಗಳಿಗೆ ಟ್ಯಾಂಕರ್ ಅಥವಾ ಬೋರ್‌ವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಆದೇಶಿಸಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಅಕಾರಿಗಳು, ಸಿಬ್ಬಂದಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೀಳಗಿ ಶಾಸಕ ಮುರುಗೇಶ ನಿರಾಣಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಬೀಳಗಿ ತಾಲೂಕು ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಸಾರ್ವಜನಿಕರು ನಿತ್ಯವೂ ಕರೆ ಮಾಡಿ ವಾಸ್ತವ ಸ್ಥಿತಿ ಬಿಚ್ಚಿಟ್ಟು ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಪಿಡಿಒಗಳು ಯಾವುದೇ ಸಮಸ್ಯೆ ಇಲ್ಲ ಎಂದು ಸಬೂಬು ಹೇಳುತ್ತಿರುವುದು ಸರಿಯಲ್ಲ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೂಚನೆ ನೀಡಿದರು.

ಬೋರ್‌ವೆಲ್ ಕೆಟ್ಟು ಹೋದಲ್ಲಿ, ಟ್ಯಾಂಕರ್ ಮೂಲಕ ನೀರು ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ನನ್ನ ಗಮನಕ್ಕೆ ತರಬೇಕು. ವೈಯಕ್ತಿಕವಾಗಿ ಟ್ಯಾಂಕರ್ ಕಳುಹಿಸಿ ನೀರು ಕೊಡುವ ಪ್ರಯತ್ನ ಮಾಡೋಣ. ಜನರು ಕಷ್ಟದಲ್ಲಿದ್ದಾಗ ಸ್ಪಂದಿಸುವುದು ನಮ್ಮ ಕರ್ತವ್ಯ. ಇದರ ಜತೆಗೆ ಜಿಪಂ ಇಂಜಿನಿಯರಿಂಗ್ ವಿಭಾಗದ ಅಕಾರಿಗಳು ಸದಾ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ಮಾಡಿ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ಕಾರ್ಯವೈಖರಿಗೆ ಅಸಮಾಧಾನ
ಜಿಲ್ಲಾ ಪಂಚಾಯಿತಿ ಸದಸ್ಯ ಹೂವಪ್ಪ ರಾಠೋಡ ಮಾತನಾಡಿ, ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಾದಾಮಿ ತಾಲೂಕಿನ 37 ಗ್ರಾಮಗಳು ಬರುತ್ತವೆ. ಇದರಲ್ಲಿ 30ಕ್ಕೂ ಅಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನರೇನೂರ ಎಲ್.ಟಿ 1 ಮತ್ತು 2, ಇನಾಂ ಹುಲ್ಲಿಕೇರಿ, ಚಿಂಚನಕಟ್ಟಿ ತಾಂಡಾಗಳ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಟ್ಯಾಂಕರ್ ಮೂಲಕವೂ ನೀರು ಪೂರೈಸುತ್ತಿಲ್ಲ. ಅಕಾರಿಗಳು, ಪಿಡಿಒ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಗಲಕೋಟೆ ತಾಪಂ ಕಾರ್ಯನಿರ್ವಾಹಕ ಅಕಾರಿ ಎನ್.ವೈ. ಬಸರಿಗಿಡದ, ಬಾದಾಮಿ ತಾಪಂನ ಎಂ.ಕೆ. ತೊದಲಬಾಗಿ, ಬೀಳಗಿಯ ಭೀಮಪ್ಪ ತಾಳಿ, ಜಿಪಂ ಇಂಜಿನಿಯರಿಂಗ್ ವಿಭಾಗದ ಮಹೇಶ ಕಕರಡ್ಡಿ ಸಭೆಯಲ್ಲಿದ್ದರು.

ಮೇವು ಬ್ಯಾಂಕ್ ಆರಂಭಿಸಿ
ಮೂರು, ನಾಲ್ಕು ಗ್ರಾಮಗಳಿಗೆ ಒಂದರಂತೆ ಮೇವು ಬ್ಯಾಂಕ್ ಆರಂಭಿಸಬೇಕು. ಮೇವು ಯಾವ ಆಧಾರ ಮೇಲೆ ಎಷ್ಟು ಕೆ.ಜಿ ನೀಡುತ್ತೀರಿ. ಸಮಯ, ಸ್ಥಳದ ಬಗ್ಗೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು. ಮೇವು ಬ್ಯಾಂಕ್ ಆರಂಭಿಸಲಾಗಿದೆ ಎಂದು ಹೇಳಿದರೆ ಸಾಲದು ಎಂದು ಪಶು ಸಂಗೋಪನಾ ಇಲಾಖೆ ಅಕಾರಿಗಳಿಗೆ ಶಾಸಕ ಮುರುಗೇಶ ನಿರಾಣಿ ತರಾಟೆ ತೆಗೆದುಕೊಂಡರು. ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಸಲಾಗುವುದು ಅಕಾರಿ ಡಾ.ಪದಾರ ಸಭೆಗೆ ತಿಳಿಸಿದರು .

ಸಮಯ ನಿಗದಿ ಮಾಡಿ
ಬೀಳಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪುನರ್ ವಸತಿ ಕೇಂದ್ರಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಜನರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಕೂಡಲೇ ಕಲಾದಗಿ, ಬೀಳಗಿ ಪಟ್ಟಣದಲ್ಲಿ ಎರಡು ಪ್ರತ್ಯೇಕ ಸಭೆ ನಡೆಸಬೇಕು. ಸಾರ್ವಜನಿಕರನ್ನು ಸಭೆಗೆ ಆಹ್ವಾನಿಸುತ್ತೇನೆ. ಆರ್ ಆ್ಯಂಡ್ ಆರ್ ಆಯುಕ್ತ ಪಿ.ಎ. ಮೇಘಣ್ಣವರ ಅವರು ಸಮಯ ನಿಗದಿ ಮಾಡಲು ತಿಳಿಸಬೇಕು ಎಂದು ಅಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಕೆಲ ವರ್ಷಗಳ ಹಿಂದೆ ಉತ್ತಮ ಸ್ಥಿತಿಯಲ್ಲಿತ್ತು. ಜಿಲ್ಲೆಯಲ್ಲಿಯೇ ಬೀಳಗಿ ತಾಲೂಕು ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ, ಈಗಿನ ಲಿತಾಂಶ ಗಮನಿಸಿದಾಗ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಬೀಳಗಿ ಕೊನೆಯ ಸ್ಥಾನದಲ್ಲಿರುವುದು ನೋವು ತಂದಿದೆ. ಈ ಬಗ್ಗೆ ಆತ್ಮಾವಲೋಕನ ನಡೆಯಬೇಕು. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶ ಎಂದು ಸರ್ಕಾರ ಅನೇಕ ಸೌಲಭ್ಯ ಕಲ್ಪಿಸಿದರೂ ಅಕಾರಿಗಳ ಬೇಜವಾಬ್ದಾರಿಯಿಂದ ಶಿಕ್ಷಣ ಕ್ಷೇತ್ರ ಕುಂಠಿತಗೊಂಡಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು.
– ಮುರುಗೇಶ ನಿರಾಣಿ ಶಾಸಕ
Leave a Reply

Your email address will not be published. Required fields are marked *