ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ

ಬಾಗಲಕೋಟೆ: ಉನ್ನತ ಸ್ಥಾನದಲ್ಲಿರುವ ಅನೇಕರು ಎಷ್ಟೇ ಖರ್ಚಾದರೂ ಸರಿ ಎಲ್ಲವೂ ಹೈಟೆಕ್​ ಆಗಿರಬೇಕೆಂದೇ ಬಯಸುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸದಲ್ಲಿರೋ ಉನ್ನತ ಅಧಿಕಾರಿಗಳು ಶಿಕ್ಷಣ ಹಾಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೊಗುವುದೇ ಹೆಚ್ಚು. ಇಂತವರ ಮಧ್ಯೆ ಕೆಲವರು ತಮ್ಮ ಸರಳತೆಯಿಂದ ಗುರುತಿಸಿಕೊಂಡು ಬಿಡುತ್ತಾರೆ. ಅಂತವರಲ್ಲಿ ಬಾಗಲಕೋಟೆಯ ಜಿಲ್ಲಾಧಿಕಾರಿಯು ಒಬ್ಬರಾಗಿದ್ದಾರೆ.

ಜಿಲ್ಲಾಧಿಕಾರಿ ಆರ್​. ರಾಮಚಂದ್ರನ್​ ಅವರ ತಂಚದೆ ಕಿವಿ, ಎದೆ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದರು. ಇವರಿಗೆ ಚಿಕಿತ್ಸೆಕೊಡಿಸಲು ಜಿಲ್ಲಾಧಿಕಾರಿಗಳು ಸಾಮಾನ್ಯರಂತೆ ಜಿಲ್ಲಾಸ್ಪತ್ರೆಗೆ ಕರೆತಂದು ಸರಳತೆ ಮೆರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಚಂದ್ರನ್​ ಇದನ್ನು ಸರಳತೆ ಎನ್ನುವುದಕ್ಕಿಂತ ಹೀಗೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು. ಹಿರಿಯ ಅಧಿಕಾರಿಗಳು ಬಂದು ಹೋಗುವುದರಿಂದ ಜನರಿಗೆ ನಂಬಿಕೆ ಬರುತ್ತದೆ. ಆಸ್ಪತ್ರೆಗಳ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ. ಬೇರೆ ಏನೇ ಸಮಸ್ಯೆಯಿದ್ದರೂ ಕೂಡ ಸಾರ್ವಜನಿಕರು ನಮ್ಮ ಗಮನಕ್ಕೆ ತರಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿರುವ ಫೀಡ್​ಬ್ಯಾಕ್​ ವ್ಯವಸ್ಥೆ ರೀತಿ ನಮ್ಮ ಆಸ್ಪತ್ರೆಗಳಿಂದಲೂ ನಮಗೆ ಫೀಡ್​ಬ್ಯಾಕ್​ ಬಂದರೆ ವ್ಯವಸ್ಥೆಯನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಜಿಲ್ಲಾಧಿಕಾರಿ ಅವರ ತಂದೆಗೆ ವೈದ್ಯರಾದ ಡಾ. ಸಂಗಮ ಹಾಗೂ ಡಾ. ಪಾಟೀಲ ಅವರು ಚಿಕಿತ್ಸೆ ನೀಡಿದರು. (ದಿಗ್ವಿಜಯ ನ್ಯೂಸ್​)

One Reply to “ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ”

Comments are closed.