ಠೇವಣಿದಾರರ ನಂಬಿಕೆ ಗಳಿಸಿ

ಬಾಗಲಕೋಟೆ: ಒಂದು ಕಾಲದಲ್ಲಿ ಸಾಲ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಇಂದು ಸರಳವಾಗಿದೆ. ನೋಟ್‌ಬ್ಯಾನ್ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಪ್ರಮಾಣವು ಹೆಚ್ಚಳವಾಗಿದೆ. ಬ್ಯಾಂಕ್‌ಗಳನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗುವುದು ಬಹು ಮುಖ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಹಳೇ ಬಸ್ ನಿಲ್ದಾಣ ಸಮೀಪದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ನೂತನವಾಗಿ ಆರಂಭವಾದ ಬಾಗಲಕೋಟೆ ಬಸವಶ್ರೀ ಸೌಹಾರ್ದ ಸಹಕಾರಿ ನಿ. ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್ ವ್ಯವಹಾರ ಮಾಡುವಾಗ ಠೇವಣಿದಾರರ ನಂಬಿಕೆ ಗಳಿಸಬೇಕು. ಅವರ ಹಿತ ಕಾಯಲು ಸದಾ ಬದ್ಧವಾಗಿರಬೇಕು. ಬ್ಯಾಂಕಿನಲ್ಲಿ ಉದ್ಯೋಗ ನೀಡುವಾಗ ಮೆರಿಟ್ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಬೇಕು. ಪ್ರಮಾಣಿಕ, ಪಾರದರ್ಶಕತೆಗೆ ಒತ್ತು ನೀಡಿದಾಗ ಮಾತ್ರ ಯಶಸ್ಸಿನಿಂದ ಸಾಗುತ್ತದೆ ಎಂದರು.

ವಿಧಾನ ಪರಿಷತ್ತ ಎಸ್.ಆರ್.ಪಾಟೀಲ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಹೋಲಿಕೆ ಮಾಡಿದಲ್ಲಿ ಸಹಕಾರಿ ಬ್ಯಾಂಕ್ ಉತ್ತಮ ಎನಿಸುತ್ತವೆ. ಸಹಕಾರಿ ರಂಗವು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಬ್ಯಾಂಕ್ ತಮ್ಮ ತಪ್ಪಿನಿಂದ ಮುಚ್ಚಿ ಹೋಗಿವೆ. ಇದರಿಂದ ಸಹಕಾರಿ ಬ್ಯಾಂಕ್‌ಗಳ ಮೇಲೆ ಜನರ ನಂಬಿಕೆ ಕುಂದುವಂತೆ ಮಾಡಿತು. ಭಯದ ವಾತಾವರಣ ಮೂಡಿಸಿತು. ಇದನ್ನು ಹೋಗಲಾಡಿಸಿ ಸಹಕಾರಿ ಬ್ಯಾಂಕ್‌ಗಳ ಜನರ ವಿಶ್ವಾಸಾರ್ಹತೆ ಗಟ್ಟಿಸುವ ನಿಟ್ಟಿನಲ್ಲಿ ನಾವೆಲ್ಲ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಿದೆ ಎಂದು ತಿಳಿಸಿದರು.

ಬ್ಯಾಂಕ್‌ನಲ್ಲಿ ಒಂದು ಅವ್ಯವಹಾರ ನಡೆಯದಂತೆ ಜಾಗೃತಿ ವಹಿಸಬೇಕು. ರಾಷ್ಟ್ರೀಯ ಬ್ಯಾಂಕ್‌ಗಳ ಮಾದರಿಯಲ್ಲಿ ಸೇವೆ ಒದಗಿಸಬೇಕು. ಸಾಲಗಾರರು, ಠೇವಣಿದಾರರ ಜತೆ ಉತ್ತಮ ಸಂಬಂಧ ಹೊಂದಬೇಕು. ಸಕಾಲಕ್ಕೆ ಸಾಲಗಾರರು ಸಾಲ ಮರುಪಾವತಿಗೆ ಉತ್ತೇಜನ ನೀಡಬೇಕು. ಬ್ಯಾಂಕ್ ಕೂಡಾ ಬೆಳವಣಿಗೆಯಾಗಬೇಕು. ದುರ್ಬಲ ವರ್ಗದವರ ಆರ್ಥಿಕ ಪ್ರಗತಿಗೆ ಸಹಕಾರಿ ರಂಗ ಅನನ್ಯ ಕೊಡುಗೆ ನೀಡಿದೆ ಎಂದರು.

Leave a Reply

Your email address will not be published. Required fields are marked *