ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ

ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಕಡಲೆಯನ್ನು ಪ್ರತಿ ಕ್ವಿಂಟಾಲ್‌ಗೆ 4650 ರೂಪಾಯಿ ದರದಲ್ಲಿ ಒಬ್ಬ ರೈತನಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಗರಿಷ್ಠ 10 ಕ್ವಿಂಟಾಲ್ ಖರೀದಿಸಲಾಗುತ್ತಿದ್ದು, ನೋಂದಣಿಗೆ ಮೇ 28 ಕೊನೇ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಟಾಸ್‌‌ಕೆೆಸ್‌ರ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಗಲಕೋಟೆ ಎಪಿಎಂಸಿ ಪ್ರಾಂಗಣ, ಹುನಗುಂದ ಎಪಿಎಂಸಿ ಆವರಣ, ಸೂಳೇಬಾವಿ ಎ್ಪಿಒ ಆವರಣ, ಸಾವಳಗಿ ಪಿಕೆಪಿಎಸ್ ಆವರಣ ಹಾಗೂ ತೊದಲಬಾಗಿ ಎ್ಎಚ್‌ಸಿಎಲ್ ಆವರಣದಲ್ಲಿ ಖರೀದಿಗೆ ರೈತರಿಂದ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೈತರು ನೋಂದಣಿ ಸಮಯದಲ್ಲಿ ಕಂದಾಯ ಇಲಾಖೆಯಿಂದ ಪಹಣಿ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿ, ಬೆಳೆ ಪ್ರಮಾಣ ಪತ್ರ ಹಾಗೂ ಮೊಬೈಲ್ ನಂಬರ್ ದಾಖಲೆಗಳನ್ನು ತಪ್ಪದೇ ತರಬೇಕು. ಜೂನ್ 7ರವರೆಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬಾಗಲಕೋಟೆ ಶಾಖೆ ಖರೀದಿಸಲಿದೆ ಎಂದು ಮಾಹಿತಿ ನೀಡಿದರು.

ಕಡಲೆಕಾಳನ್ನು ಚೆನ್ನಾಗಿ ಒಣಗಿಸಿ ತರಬೇಕು. ಖಂಡಕಾಳು, ಕ್ರಿಮಿಕೀಟಗಳಿಂದ ಕೂಡಿರಬಾರದು. ಕಸಕಡ್ಡಿಯನ್ನು ಸಾಣಿಗೆಯಿಂದ ಸ್ವಚ್ಛಗೊಳಿಸಬೇಕು. ಎ್ಎಕ್ಯೂ ಗುಣಮಟ್ಟದ ಕಡಲೆಕಾಳನ್ನು ಮಾತ್ರ ಖರೀದಿಸಲಾಗುತ್ತದೆ. ಖರೀದಿ ಕೇಂದ್ರದಲ್ಲಿ ಹುಟ್ಟುವಳಿ ಹಸ್ತಾಂತರವನ್ನು ಸಾಗಣೆ ಗುತ್ತಿಗೆದಾರರು ನಿರ್ವಹಿಸುವುದು, ತೂಕದಲ್ಲಿ ಅನಧಿಕೃತವಾಗಿ ಹಮಾಲರ ಶುಲ್ಕ, ತೂಕದ ಶುಲ್ಕ, ಸೂಟು, ಕಾಳು ಕೊಡುವುದು ಮತ್ತು ಪಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಹಕಾರ ಇಲಾಖೆ ಉಪನಿಬಂಧಕ ಎಚ್.ಎಂ. ಕಳಸನ್ನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಇತರರು ಉಪಸ್ಥಿತರಿದ್ದರು.

15 ದಿನದೊಳಗೆ ರೈತರ ಖಾತೆಗೆ ಹಣ ಜಮಾ
ಎ್ಎಕ್ಯೂ ಗುಣಮಟ್ಟದ ಕಡಲೆ ಕಾಳು ಪರೀಕ್ಷಿಸಲು ಅನುಭವಿ ಗ್ರೇಡರ್‌ಗಳನ್ನು ಕೃಷಿ ಇಲಾಖೆಯಿಂದ ನೇಮಿಸಿಕೊಳ್ಳಬೇಕು. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆಯನ್ನು ಖರೀದಿಸದಂತೆ ಹಾಗೂ ದುರುಪಯೋಗವಾಗದಂತೆ ಕ್ರಮ ವಹಿಸಲು ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂಬಂಧಿಸಿದ ರೈತರಿಗೆ 15 ದಿನಗಳೊಳಗಾಗಿ ಆರ್‌ಟಿಜಿಎಸ್ ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದರು. ಖರೀದಿಸಿದ ಕಾಳನ್ನು ದಾಸ್ತಾನು ಮಾಡಲು ಅಗತ್ಯ ಗೋದಾಮುಗಳ ವ್ಯವಸ್ಥೆ ಇರುವುದಾಗಿ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು ಸಭೆಯಲ್ಲಿ ತಿಳಿಸಿದರು.

ರೈತರಿಂದ ಹಮಾಲರು, ಖರೀದಿ ಕೇಂದ್ರಗಳ ಸಿಬ್ಬಂದಿ ಅನಧಿಕೃತವಾಗಿ ಹಣ ಪಡೆದರೆ ಕ್ರಮ ಜರುಗಿಸಲಾಗುತ್ತದೆ. ಇಂತಹ ಆರೋಪ ಬಂದಲ್ಲಿ ಸಮಿತಿ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು. ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಸಮಸ್ಯೆಗಳಿದ್ದಲ್ಲಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಎಪಿಎಂಸಿ ಕಚೇರಿಗಳಲ್ಲಿ ಮಾರ್ಕ್‌ೆಡ್ ಅಧಿಕಾರಿಗಳ ಮೊಬೈಲ್ ನಂಬರಿಗೆ ಕರೆ ಮಾಡಬಹುದು.
– ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ, ಬಾಗಲಕೋಟೆ
Leave a Reply

Your email address will not be published. Required fields are marked *