ಪ್ರಧಾನಿ ವಿರುದ್ಧ ನಾಲಿಗೆ ಹರಿಬಿಟ್ಟ ಇಬ್ರಾಹಿಂ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಜಮಖಂಡಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಸರ್ವಜ್ಞನ ವಚನದ ಮೂಲಕ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಅವಮಾನಕರ ರೀತಿಯಲ್ಲಿ ಹೋಲಿಕೆ ಮಾಡಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಯಾಕ್ ಹೋಗಿದ್ರು ಎಂದು ಪ್ರಶ್ರಿಸಿದ ಇಬ್ರಾಹಿಂ, ಪಾಕಿಸ್ತಾನದ ನವಾಜ್ ಷರೀಫ್ ಇವರನ್ನ ಕರೆದಿದ್ರಾ? ಆದ್ರೂ ಇವರು ಹೋದ್ರು. ಹಾಗಾದರೆ ಕರೆಯದೇ ಬರುವವನ, ಬರಿಗಾಲಿನಲ್ಲಿ ನಡೆಯುವವನ….? ಹೊಡೆ ಎಂದ ಸರ್ವಜ್ಞ ಎಂದು ವಾಗ್ದಾಳಿ ನಡೆಸಿದರು.

ತಿಂಗಳಿಗೆ ಒಂದು ಸಲ ಮನ್ ಕೀ ಬಾತ್ ಅಂತಾನ. ಮನ್ ಕೀ ಬಾತ್ ಹುಡುಗ, ಹುಡುಗಿ ಮಾತಾಡಬೇಕು. ಅಲಾ ಇವನ, ಜನ್ ಕೀ ಬಾತ್ ಮಾತಾಡು. ಮೋದಿಗೆ ಪ್ರಜ್ಞೆ ಇದೆಯಾ? ಆಡಳಿತ ನಡೆಸೋದು ಗೊತ್ತಿದೆಯಾ? ಎಂದು ಟೀಕಾ ಪ್ರಹಾರ ನಡೆಸಿದರು.