ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ

ಬಾಗಲಕೋಟೆ: ಆಡಿಯೋ ಡೀಲ್ ವಿಚಾರದ ಧ್ವನಿ ನಂದೇ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಅವರೇ ಹೇಳಿದಂತೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಆಡಿಯೋದಲ್ಲಿರುವ ಧ್ವನಿ ನಂದೇ ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಇದೀಗ ಧ್ವನಿ ನಂದೇ ಎಂದು ಅವರೇ ಹೇಳಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡು ಬಿಎಸ್‌ವೈ ರಾಜೀನಾಮೆ ಕೊಡಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರೊಟೋಕಾಲ್ ಏನು ಗೊತ್ತಿಲ್ಲ. ಹುಬ್ಬಳ್ಳಿಗೆ ರಾಜಕೀಯ ಭಾಷಣಕ್ಕೆ ಬಂದಿದ್ದಾರೆ. ನಾವು ಮೋದಿ ಅವರನ್ನು ರಾಜಕೀಯವಾಗಿ ಎದುರಿಸುತ್ತೇವೆ ಎಂದು ತಿಳಿಸಿದರು.