ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಬಾಗಲಕೋಟೆ: ಬೀಳಗಿ ತಾಲೂಕಿನ ಟಕ್ಕಳಕಿ ಚಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೆ ಕಾರಿನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ 3 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ನೀಲಕಂಠರಾವ್ ದೇಶಮುಖ ಅವರಿಗೆ ಸೇರಿದ 2,11,000 ರೂ. ಹಾಗೂ ವಿಜಯಪುರ ನಗರದ ಗುಲಾಮರಸೂಲ್ ಹತ್ತಿವಾಲೆ ಅವರಿಗೆ ಸೇರಿದ 97,500 ರೂ. ಈ ಇಬ್ಬರು ತಮ್ಮ ವಾಹನದಲ್ಲಿ ದಾಖಲೆ ಇಲ್ಲದೆ ನಗದು ತೆಗೆದುಕೊಂಡು ಹೋಗುತ್ತಿದ್ದರು. ಟಕ್ಕಳಕಿ ಚಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಸರಿಯಾದ ದಾಖಲೆ ಇಲ್ಲದ ಕಾರಣ 3,08,500 ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಖಲೆ ಸಲ್ಲಿಸಿ ಹಣ ಪಡೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.

ಇಳಕಲ್ಲ ತಾಲೂಕಿನ ಗುಗ್ಗಲಮರಿ ಚಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 1 ಲಕ್ಷ ರೂ. ತಪಾಸಣೆ ವೇಳೆ ಸಿಕ್ಕಿದೆ. ರೈತನಿಗೆ ಸೇರಿ ಹಣ ಎಂದು ಹೇಳಲಾಗುತ್ತಿದೆ, ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *