20.4 C
Bangalore
Monday, December 9, 2019

ಬಸವೇಶ್ವರ ಬ್ಯಾಂಕ್‌ಗೆ 4 ಕೋಟಿ ರೂ. ಲಾಭ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, 2018-19ನೇ ಸಾಲಿನಲ್ಲಿ 4.01 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

1984ರಲ್ಲಿ ಹಾಲಿ ನಿರ್ದೇಶಕ ಮಂಡಳಿ ಅಧಿಕಾರ ಸ್ವೀಕರಿಸಿದ್ದಾಗ 3349 ಸದಸ್ಯರ ಸಂಖ್ಯೆ ಹೊಂದಿತ್ತು. ಇಂದು 41139 ರವರೆಗೆ ಏರಿಕೆಯಾಗಿದೆ. 7 ಲಕ್ಷ ರೂ. ಇದ್ದ ಷೇರು ಬಂಡವಾಳ, 22 ಕೋಟಿ ರೂ.ಗೆ ಏರಿಕೆಯಾಗಿದೆ. 3.48 ಲಕ್ಷ ರೂ. ಇದ್ದ ನಿಧಿಗಳು 58 ಕೋಟಿ ರೂ.ಗೆ ಏರಿಕೆಯಾಗಿದೆ. 5.62 ಲಕ್ಷ ರೂ. ಇದ್ದ ದುಡಿಯುವ ಬಂಡವಾಳ 692 ಕೋಟಿ ರೂ.ಗೆ ಏರಿದೆ. 2.07 ಲಕ್ಷ ರೂ. ಇದ್ದ ಠೇವು, 597 ಕೋಟಿ ರೂ.ಗೆ ತಲುಪಿದೆ. 92 ಲಕ್ಷ ರೂ. ಇದ್ದ ಸಾಲ ಬಟವಡೆ 427 ಕೋಟಿ ರೂ.ಗೆ ಏರಿದೆ. ಶೇ.26.46 ಇದ್ದ ಎನ್‌ಪಿಎ ಈಗ ಶೇ. 0.14 ಇಳಿದಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾಂತಪ್ಪ ತಪಶೆಟ್ಟಿ ಅಧ್ಯಕ್ಷತೆಯಲ್ಲಿ 1917ರ ಮಾರ್ಚ್ 2ರಂದು 1925 ರೂ. ಷೇರು ಬಂಡವಾಳದೊಂದಿಗೆ ಬಸವೇಶ್ವರ ಬ್ಯಾಂಕ್ ಆರಂಭವಾಯಿತು. ಕೇವಲ ಆರ್ಥಿಕ ಅಭಿವೃದ್ಧಿಗೆ ಮಾತ್ರ ಸೀಮಿತಗೊಳ್ಳದೆ ಶೈಕ್ಷಣಿಕ, ಧಾರ್ಮಿಕವಾಗಿಯೂ ಸಮಾಜ ಸೇವೆ ಮಾಡುತ್ತಿದೆ ಎಂದರು.

ಬಾಗಲಕೋಟೆ ನಗರದಲ್ಲಿ ಪ್ರಧಾನ ಕಚೇರಿ ಸೇರಿ 6 ಶಾಖೆ, ವಿಜಯಪುರ, ಗೋಕಾಕ, ಗಜೇಂದ್ರಗಡ, ಗದಗ, ಧಾರವಾಡ, ಬೆಳಗಾವಿ ಸೇರಿ 27 ಶಾಖೆಗಳೊಂದಿಗೆ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 15 ಜಿಲ್ಲೆಗಳಲ್ಲಿ ಕಾರ್ಯ ಕ್ಷೇತ್ರ ವಿಸ್ತರಿಸಿಕೊಂಡಿದೆ. ತನ್ನ ಕಾರ್ಯಕ್ಷಮತೆ ಮೂಲಕ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಎಂದು ತಿಳಿಸಿದರು.

ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಬ್ಯಾಂಕ್ ಶ್ರಮಿಸುತ್ತಿದೆ. ವ್ಯವಹಾರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಎಲ್ಲ ಶಾಖೆಗಳಲ್ಲಿ ಕೋರ್ ಹಾಗೂ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ, ಎಟಿಎಂ ಸೌಲಭ್ಯ ಕಲ್ಪಿಸಲಾಗಿದೆ. ಆಧಾರ್ ರಹಿತ ಹಣ ವರ್ಗಾವಣೆ, ಸಿಟಿಎಸ್,ಕ್ಲೀಯರಿಂಗ್ ಸಿಸ್ಟ್‌ಂ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದರು.

ವಿಶ್ವದರ್ಜೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಸ್ವಯಂಚಾಲಿತ ಹಣ ಸ್ವೀಕೃತಿ ಮಷಿನ್, ಪಾಸ್‌ಬುಕ್ ಪ್ರಿಂಟರ್, ಸ್ವೆೃಪಿಂಗ್ ಮಷಿನ್, ವೆಬ್‌ಸೈಟ್, ಮೊಬೈಲ್ ಆ್ಯಪ್ ಸೌಲಭ್ಯ ಹೊಂದಿದೆ. ಐಎಸ್‌ಒ ಪ್ರಮಾಣೀಕರಣ ಹೊಂದಿದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ಇ ಸ್ಟೇಟ್‌ಮೆಂಟ್, ಎನ್‌ಇಎಫ್‌ಟಿ, ಐಎಂಪಿಎಸ್, ಆರ್‌ಟಿಜಿಎಸ್, ಬ್ಯಾಲೆನ್ಸ್ ಎನ್‌ಕ್ವಯರಿ, ಚೆಕ್‌ಬುಕ್ ರಿಕ್ವೆಸ್ಟ್ ಸೇರಿ ಅನೇಕ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕರಾದ ಮುತ್ತು ಜೋಳದ, ಮನೋಹರ ಏಳಮ್ಮಿ, ರವಿಕುಮಾರ ಪಟ್ಟಣದ, ಎಚ್.ಎಸ್. ರಾಠೋಡ, ರಂಗನಗೌಡ ದಂಡನ್ನವರ, ಶಿವುಕುಮಾರ ನಂದಿಕೋಲಮಠ, ಸುಮಿತ್ರಾ ಶಿರೂರ, ಪ್ರಧಾನ ವ್ಯವಸ್ಥಾಪಕ ಎಂ.ಎಚ್. ಕಳ್ಳಿಗುಡ್ಡ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಬ್ಯಾಂಕ್ ಕಾರ್ಯಕ್ಷೇತ್ರ ವಿಸ್ತರಣೆಗೆ ನಿರ್ಧಾರ
2019-20ನೇ ಸಾಲಿನಲ್ಲಿ ಸದಸ್ಯರ ಸಂಖ್ಯೆ ಶೇ.5, ಠೇವು ಶೇ.10 ಹಾಗೂ ಸಾಲ ಶೇ.15ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ವಿವಿಧ ಸಾಲಗಳ ಮಿತಿಯನ್ನು ಅವಶ್ಯಕತೆಗಳ ಅನುಗುಣವಾಗಿ ಹೆಚ್ಚಳ ಮಾಡುವುದು, ಕೈಗಾರಿಕೆಗಳಿಗೆ, ಆಸ್ಪತ್ರೆ ನಿರ್ಮಾಣ, ಇನ್ನಿತರ ಯಂತ್ರೋಪಕರಣ ಖರೀದಿ ಮತ್ತು ವಾಹನಗಳಿಗೆ ಹೆಚ್ಚಿನ ಸಾಲ ಸಾಲಭ್ಯ ನೀಡುವುದು, ಮುದ್ದತ ಮೀರಿದ ಸಾಲವನ್ನು ಶೇ.10ಕ್ಕೆ ಮೀರದಂತೆ ವಸೂಲಿ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳುವುದು, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮೀಣ ಹಾಗೂ ನಗರ ಜಿಲ್ಲೆಗಳಿಗೆ ಬ್ಯಾಂಕ್ ಕಾರ್ಯಕ್ಷೇತ್ರ ವಿಸ್ತರಿಸುವುದು ಸೇರಿ ನಾನಾ ಚಟುವಟಿಕೆಯನ್ನು ಪ್ರಸಕ್ತ ವರ್ಷ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸದಸ್ಯರಿಗೆ ಶೇ. 10 ಲಾಭಾಂಶ ನೀಡಲು ಉದ್ದೇಶಿಸಲಾಗಿದೆ.ವಿದ್ಯಾಚೇತನ ಯೋಜನೆಯಡಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸರ್ವ ಸಾಧಾರಣ ಸಭೆಯಲ್ಲಿ ಸನ್ಮಾನಿಸಲಾಗುತ್ತದೆ ಎಂದು ತಪಶೆಟ್ಟಿ ಹೇಳಿದರು.

ಹೊಸ ಕಾರ್ಡ್ ವಿತರಣೆ
10 ವರ್ಷ ಅವಧಿಗೂ ಮೀರಿ ಚಲಾವಣೆಯಾಗದೆ ಉಳಿದಿರುವ ಉಳಿತಾಯ ಖಾತೆ, ಚಾಲ್ತಿ ಖಾತೆ, ಜಮಾ ಬಾಕಿ ಹೊಂದಿರುವ ಯಾವುದೇ ಖಾತೆಗಳಲ್ಲಿ ಜಮಾ ಇರುವ ಮೊತ್ತವನ್ನು ಮತ್ತು ಅವಧಿ ಮುಗಿದ ಹತ್ತು ವರ್ಷಗಳಿಗೂ ಮೀರಿ ಸಂದಾಯವಾಗದ ಮುದ್ದತ ಠೇವುಗಳು ಭಾರತೀಯ ರಿಜರ್ವ್ ಬ್ಯಾಂಕ್‌ನಲ್ಲಿಯ ಡಿಇಎಎಫ್ ಖಾತೆಗೆ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಸಹಕಾರಿ ಸಂಘಗಳ ಕಾನೂನು ಪ್ರಕಾರ 5 ಸಾಮಾನ್ಯ ಸಭೆಗಳ ಪೈಕಿ ಕನಿಷ್ಠ 3 ಸಾಮಾನ್ಯ ಸಭೆಗಳಿಗೆ ಸದಸ್ಯರು ಹಾಜರಾಗಬೇಕು. ಚಾಲ್ತಿ ಹಾಗೂ ಉಳಿತಾಯ ಖಾತೆಯಲ್ಲಿ ವ್ಯವಹಾರ ಮಾಡಬೇಕು. ತಪ್ಪಿದಲ್ಲಿ ಮತದಾನ ಮಾಡಲು, ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ. ಬ್ಯಾಂಕ್ ಸದಸ್ಯತ್ವ ಪಡೆಯುವ ವೇಳೆ ಈಗಾಗಲೇ ಸದಸ್ಯತ್ವ ಗುರುತಿನ ಚೀಟಿ ಕೊಡಲಾಗಿದೆ. ಇದೀಗ ಕಾರ್ಡ್ ಮಾದರಿಯಲ್ಲಿ ಹೊಸದಾಗಿ ಮುದ್ರಿಸಲಾಗಿದೆ. ಸದಸ್ಯರು ತಾವು ಖಾತೆ ತೆರೆದ ಶಾಖೆಯಲ್ಲಿ ಸದಸ್ಯತ್ವದ ಹೊಸ ಮಾದರಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದರು.

ಪ್ರಸಕ್ತ ವರ್ಷ ರಾಜ್ಯಕ್ಕೆ ಕರಾಳ ವರ್ಷವೆಂದೇ ಹೇಳಬಹುದು. ನೆರೆ ಹಾವಳಿಗೆ ತುತ್ತಾಗಿ ಸಂತ್ರಸ್ತರಾದ ಜನರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ 2 ಸಾವಿರ ಸಂತ್ರಸ್ತರಿಗೆ ಬ್ಯಾಂಕ್‌ನಿಂದ ಅಗತ್ಯ ವಸ್ತುಗಳ ಕಿಟ್ ನೀಡಲಾಗಿದೆ. ನಿರ್ದೇಶಕ ಮಂಡಳಿ ವತಿಯಿಂದ 2.75 ಲಕ್ಷ ರೂ. ಚೆಕ್‌ನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಬ್ಯಾಂಕ್ ಪ್ರಗತಿಯಲ್ಲಿ ಠೇವಣಿದಾರರು, ವ್ಯಾಪಾರಸ್ಥರು, ಸಂಘ, ಸಂಸ್ಥೆಗಳು, ವರ್ತಕರು, ಸದಸ್ಯರು, ಹಿತೈಷಿಗಳು, ಅಭಿಮಾನಿಗಳು, ಸರ್ಕಾರ, ಅರೇ ಸರ್ಕಾರಿ ಸಿಬ್ಬಂದಿ ವರ್ಗದವರ ಸಹಕಾರ ದೊಡ್ಡದಿದೆ.
– ಪ್ರಕಾಶ ತಪಶೆಟ್ಟಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...