ಜೀ ಕುಟುಂಬ ಆವಾರ್ಡ್‌ಗೆ ಮತದಾನ

ಬಾಗಲಕೋಟೆ: ಬೆಂಗಳೂರಿನಲ್ಲಿ ಅ.19, 20 ರಂದು ನಡೆಯಲಿರುವ ಜೀ ಕುಟುಂಬ ಆವಾರ್ಡ್ ಹಿನ್ನೆಲೆ ಗುರುವಾರ ಬಾಗಲಕೋಟೆ ನಗರದಲ್ಲಿ ವೀಕ್ಷಕರಿಂದ ವಿವಿಧ ವಿಭಾಗಗಳಿಗೆ ಗೌಪ್ಯ ಮತದಾನ ನಡೆಯಿತು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವಿವಿಧ ಧಾರಾವಾಹಿ, ನೆಚ್ಚಿನ ಜೋಡಿ, ರಿಯಾಲಿಟಿ ಶೋ, ಬೆಸ್ಟ್ ಆ್ಯಂಕರ್ ಹೀಗೆ ವಿವಿಧ ವಿಭಾಗಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ನಗರದ ಬಿವಿವಿ ಸಂಘದ ಬಸವೇಶ್ವರ ಮಹಿಳಾ ಕಾಲೇಜು ಆವರಣ, ವಿದ್ಯಾಗಿರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಸಂಖ್ಯೆಯ ಜನರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ನೆಚ್ಚಿನ ತಾರೆಯರಿಗೆ ಮತದಾನ ಮಾಡಿದರು.

ಅನೇಕ ಯುವತಿಯರು, ಮಹಿಳೆಯರು, ವೃದ್ಧರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೆ ಕೆಲವರು ಧಾರಾವಾಹಿ ಟೈಟಲ್ ಸಾಂಗ್, ಚಲನಚಿತ್ರ ಗೀತೆಗಳನ್ನು ಹಾಡಿದರು. ಕೆಲ ಹಾಡುಗಳಿಗೆ ಹೆಜ್ಜೆ ಹಾಕಿದರು. ಧಾರಾವಾಹಿಯಲ್ಲಿ ಬರುವ ಡೈಲಾಗ್ ಹೇಳಿ ಖುಷಿಪಟ್ಟರು.

ಜೀ ಕುಟುಂಬ ಆವಾರ್ಡ್ ಕಾರ್ಯಕ್ರಮಕ್ಕೆ ದಿಗ್ವಿಜಯ ನ್ಯೂಸ್ ಹಾಗೂ ರಾಜ್ಯದ ನಂಬರ್ ಒನ್ ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವ ಹೊಂದಿರುವುದು ವಿಶೇಷ.

Leave a Reply

Your email address will not be published. Required fields are marked *