ಯಾಂತ್ರಿಕ ಸಂಸ್ಕೃತಿ ಪ್ರಕೃತಿಯಿಂದ ದೂರ

>

ಬಾಗಲಕೋಟೆ: ಕೇವಲ ಶುಷ್ಕ ಬುದ್ಧಿವಂತಿಕೆ ದುಡಿಮೆಗಿಂತ ದೈಹಿಕ ದುಡಿಮೆ ಹೆಚ್ಚು ಆರೋಗ್ಯ ನೀಡುತ್ತದೆ. ಆದ್ದರಿಂದ ಕೈಮಗ್ಗ ಮತ್ತು ಕೃಷಿ ಮಹಾತ್ಮ ಗಾಂಧೀಜಿಗೆ ಆಪ್ತವಾಗಿದ್ದವು ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಗಾಂಧಿ- 150 ಸ್ತಬ್ಧ ಚಿತ್ರದಲ್ಲಿರುವ ಗಾಂಧಿ ಪ್ರತಿಮೆಗೆ ಹೂ ಸರ್ಮಪಿಸಿ ನಂತರ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ ಮಾತನಾಡಿ, ಗಾಂಧೀಜಿಯವರು ಸತ್ಯಾಗ್ರಹ ಎಂಬ ಅಸವನ್ನು ಜಗತ್ತಿಗೆ ತೋರಿಕೊಟ್ಟವರು. ಬೆಳಗಾವಿ ಅಧಿವೇಶನದ ಸಮಯದಲ್ಲಿ ಗಾಂಧಿಜೀಯವರು ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದರು ಎಂದು ತಿಳಿಸಿದರು.

ಸ್ತಬ್ಧ್ದಚಿತ್ರವು ಕಾಳಿದಾಸ ಕಾಲೇಜು ಮಾರ್ಗವಾಗಿ ವಿದ್ಯಾಗಿರಿ ಸರ್ಕಲ್ ಮೂಲಕ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ನಗರಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಗಾಂಧಿ ಪ್ರತಿಮೆಗೆ ಪುಷ್ಪ ಅರ್ಪಿಸಿದರು. ನಂತರ ಸ್ತಬ್ಧ್ದ ಚಿತ್ರ ಹುನಗುಂದಕ್ಕೆ ಸಂಚರಿಸಿತು.