More

  ಜಾನಪದ ಲೋಕ ನಿರ್ಮಾಣ ಅಗತ್ಯ

  ಕಲಬುರಗಿ: ರಾಮನಗರ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ಜಾನಪದ ಲೋಕ ಮಾದರಿಯಲ್ಲಿ ಕಲಬುರಗಿಯಲ್ಲೂ ಮೂರು ಎಕರೆ ಪ್ರದೇಶದಲ್ಲಿ ಜಾನಪದ ಲೋಕ ನಿರ್ಮಾಣವಾಗಬೇಕು ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

  ಡಾ.ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ೨ನೇ ದಿನದ ಕಾರ‍್ಯಕ್ರಮದಲ್ಲಿ ಸರ್ವಾಧ್ಯಕ್ಷ ಡಾ.ಟಿ.ಎಂ.ಭಾಸ್ಕರ್ ಅವರ ಬದುಕು-ಬರಹ ಕುರಿತ ಕೃತಿ ಲೋಕಾರ್ಪಣೆ ಮಾಡಿದ ಅವರು, ಹಾವೇರಿಯ ಜಾನಪದ ವಿಶ್ವವಿದ್ಯಾಲಯ ಮಾರ್ಗದರ್ಶನದಲ್ಲಿ ಕಲಬುರಗಿಯಲ್ಲಿ ಜಾನಪದ ಲೋಕ ನಿರ್ಮಿಸುವ ಮೂಲಕ ಈ ಭಾಗದ ಜಾನಪದ ಕಲಾ ಶ್ರೀಮಂತಿಕೆ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ಸ್ಥಳ ಗುರುತಿಸಲು ಸರ್ಕಾರದ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

  ಸಮ್ಮೇಳನದಲ್ಲಿ ಮೂಡಿಬಂದ ಕನ್ನಡಕ್ಕಿರುವ ಆತಂಕ-ಸವಾಲು ಮೆಟ್ಟಿ ನಿಲ್ಲಲು, ನಿರುದ್ಯೋಗ ಮತ್ತು ವಲಸೆ ತಡೆಗೆ ಚಿಂತನೆ ಮಾಡಬೇಕಿದೆ. ೧೦ ಸಾವಿರ ಕೋಟಿ ರೂ. ವೆಚ್ಚದ ಕಲಬುರಗಿ ಮೆಗಾ ಜವಳಿ ಪಾರ್ಕ್​ನಿಂದ ಒಂದು ಲಕ್ಷ ನೇರ ಉದ್ಯೋಗ ಸೃಷ್ಟಿ ಜತೆಗೆ ಪರೋಕ್ಷವಾಗಿ ಮೂರು ಲಕ್ಷ ಜನರಿಗೆ ಕೆಲಸ ಸಿಗಲಿದೆ. ಆರು ತಿಂಗಳಲ್ಲಿ ಪಾರ್ಕ್ ಕಾರ್ಯಾರಂಭ ಮಾಡಲಿದೆ. ಕನ್ನಡಿಗರೆಲ್ಲರೂ ಸದುಪಯೋಗಕ್ಕೆ ಸಜ್ಜಾಗಬೇಕು. ನಮ್ಮ ಭಾಗ ಕನ್ನಡ ಸಾರಸ್ವತ ಲೋಕದ ಕಣ್ಣು ತೆರೆಸಿದ ಮೊಟ್ಟ ಮೊದಲ ಕೃತಿ ಕವಿರಾಜ ಮಾರ್ಗ ನೀಡಿದ ರಾಷ್ಟ್ರಕೂಟರ ನೆಲ. ವಿಶ್ವ ಸಾಹಿತ್ಯಕ್ಕೆ ದಾಸ ಮತ್ತು ವಚನ ಸಾಹಿತ್ಯ ನೀಡಿದ ಪ್ರದೇಶ ಇದಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.


  ಸರ್ವಾಧ್ಯಕ್ಷ ಡಾ.ಟಿ.ಎಂ. ಭಾಸ್ಕರ್, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ.ಬಾಬುರಾವ ಶೇರಿಕಾರ, ಲಕ್ಷ್ಮಣ ದಸ್ತಿ, ಆದಿನಾಥ ಹೀರಾ, ಸೋಮನಾಥ ರೆಡ್ಡಿ ಪುರ್ಮಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts