ಉಡುಪಿ ವಿ.ಬಿ.ಕಾಲೇಜು ಉಪಾಂತ್ಯಕ್ಕೆ

ಜಮಖಂಡಿ: ಸ್ಥಳೀಯ ಬಿಎಲ್​ಡಿಇ ಸಂಸ್ಥೆಯ ಕಾನೂನು ಮಹಾವಿದ್ಯಾ ಲಯ ಆಶ್ರಯದಲ್ಲಿ ಬಿಎಲ್​ಡಿಇ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಉಡುಪಿ ವಿ.ಬಿ ಕಾಲೇಜು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್​ಷಿಪ್ ಪಡೆದಿದ್ದ ಮಂಗಳೂರಿನ ಎಸ್​ಡಿಎಂ ಕಾಲೇಜು ತಂಡವನ್ನು ಎರಡನೇ ಸುತ್ತಿನ ಪಂದ್ಯದಲ್ಲಿ 2-0 ಸೆಟ್​ಗಳಿಂದ ಮಣಿಸಿ ಉಡುಪಿಯ ವಿ.ಬಿ. ಕಾಲೇಜು ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಜೆಎಸ್​ಎಸ್, ಬೆಂಗಳೂರಿನ ರಾಮಯ್ಯ, ಹುಬ್ಬಳ್ಳಿಯ ಕೆಎಸ್​ಎಲ್​ಯುು ತಂಡಗಳು ಸೆಮಿಫೈನಲ್ ಪ್ರವೇಶಿಸಿದ ಇತರ ತಂಡಗಳಾಗಿವೆ.

ಪುರುಷರ ವಿಭಾಗದಲ್ಲಿ ಭಾಗವಹಿಸಿರುವ 26 ಕಾಲೇಜು ತಂಡಗಳನ್ನು ತಲಾ 13ರಂತೆ ಎ ಮತ್ತು ಬಿ ಗುಂಪಿನಲ್ಲಿ ವಿಂಗಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಸೆಣೆಸುತ್ತಿವೆ. ನಾಕೌಟ್ ಪದ್ಧತಿಯಂತೆ ಟೂರ್ನಿ ಜರಗುತ್ತಿದೆ.

ಪುರುಷರ ವಿಭಾಗ: ಮಂಗಳೂರು ಎಸ್​ಡಿಎಂ ತಂಡ 4-1ಸೆಟ್​ಗಳಿಂದ ತುಮಕೂರು ವಿದ್ಯಾದಯಾ ತಂಡದ ವಿರುದ್ಧ , ಬೆಂಗಳೂರು ಬಿಎಂಎಸ್ ತಂಡ 3-0 ಸೆಟ್​ಗಳಿಂದ ಮೈಸೂರು ಎಸ್​ಸಿಎಬಿ ತಂಡದ ವಿರುದ್ಧ , ಬೆಂಗಳೂರು ರಾಮಯ್ಯ ಕಾಲೇಜು ತಂಡ 3-0 ಸೆಟ್​ಗಳಿಂದ ರಾಮನಗರ ಸರ್ಕಾರಿ ಕಾಲೇಜು ತಂಡದ ವಿರುದ್ಧ, ಕಲಬುರಗಿ ಸಿದ್ಧಾರ್ಥ ತಂಡ 2-0 ಸೆಟ್​ಗಳಿಂದ ಧಾರವಾಡ ಹುರಕಡ್ಲಿ ಅಜ್ಜ ತಂಡದ ವಿರುದ್ಧ, ಬೆಂಗಳೂರು ಶೇಷಾದ್ರಿಪುರಂ ತಂಡ 3-2 ಸೆಟ್​ಗಳಿಂದ ಬೀದರ್ ಆರ್.ವಿ. ಬಿಡಪ ತಂಡದ ವಿರುದ್ಧ, ಹಾಸನ ಸರ್ಕಾರಿ ಕಾಲೇಜು ತಂಡ 3-1 ಸೆಟ್​ಗಳಿಂದ ಗದಗ ಎಸ್.ಎ ಮಾನ್ವಿ ತಂಡದ ವಿರುದ್ಧ, ಮೈಸೂರು ಜೆಎಸ್​ಎಸ್ ತಂಡ 5-2 ಸೆಟ್​ಗಳಿಂದ ತುಮಕೂರು ಕೃಷ್ಣಾ ತಂಡದ ವಿರುದ್ಧ, ಹೊಳೇನರಸಿಪುರ ಸರ್ಕಾರಿ ಕಾಲೇಜು ತಂಡ 5-2 ಸೆಟ್​ಗಳಿಂದ ಕೆಎಲ್​ಇ ಚಿಕ್ಕೋಡಿ ತಂಡದ ವಿರುದ್ಧ, ದಾವಣಗೆರೆ ಆರ್​ಎಲ್ ತಂಡ 3-2 ಸೆಟ್​ಗಳಿಂದ ಹುಬ್ಬಳ್ಳಿ ಕೆಎಸ್​ಎಲ್​ಯುು ತಂಡದ ವಿರುದ್ಧ, ಮೈಸೂರು ವಿದ್ಯಾವರ್ಧಕ ತಂಡ 5-2 ಸೆಟ್​ಗಳಿಂದ ಧಾರವಾಡ ಕೆಪಿಎಸ್ ತಂಡದ ವಿರುದ್ಧ ಗೆಲುವು ಸಾಧಿಸಿವೆ.

ಮಹಿಳೆಯರ ವಿಭಾಗ: ಮೈಸೂರು ಜೆಎಸ್​ಎಸ್ ತಂಡ 2-0 ಸೆಟ್​ಗಳಿಂದ ರಾಯಚೂರು ಎಸ್​ಸಿಎಬಿ ತಂಡದ ವಿರುದ್ಧ, ಮಂಗಳೂರು ಎಸ್​ಡಿಎಂ ತಂಡ 3-1 ಸೆಟ್​ಗಳಿಂದ ಬೆಂಗಳೂರು ಕೆಎಲ್​ಇ ತಂಡದ ವಿರುದ್ಧ, ಬೆಂಗಳೂರು ರಾಮಯ್ಯ ತಂಡ 2-0 ಸೆಟ್​ಗಳಿಂದ ಬೆಂಗಳೂರು ಕ್ರೖೆಸ್ತ್ ತಂಡದ ವಿರುದ್ಧ, ಹುಬ್ಬಳ್ಳಿ ಕೆಎಸ್​ಎಲ್​ಯುು ತಂಡ 2-0 ಸೆಟ್​ಗಳಿಂದ ಚಿಕ್ಕೋಡಿ ಕೆಎಲ್​ಇ ತಂಡದ ವಿರುದ್ಧ, ದಾವಣಗೆರೆ ಆರ್​ಎಲ್ ತಂಡ 2-0 ಸೆಟ್​ಗಳಿಂದ ಜಮಖಂಡಿ ಬಿಎಲ್​ಡಿಇ ತಂಡದ ವಿರುದ್ಧ, ಉಡುಪಿ ವಿ.ಬಿ ತಂಡ 3-1ಸೆಟ್​ಗಳಿಂದ ಮೈಸೂರು ವಿದ್ಯಾವರ್ಧಕ ತಂಡದ ವಿರುದ್ಧ, ಬೆಳಗಾವಿ ಆರ್​ಎಲ್ ತಂಡ 3-1 ಸೆಟ್​ಗಳಿಂದ ಹಾಸನ ಸರ್ಕಾರಿ ಕಾಲೇಜು ತಂಡದ ವಿರುದ್ಧ, ಬೆಂಗಳೂರು ಶೇಷಾದ್ರಿಪುರಂ ತಂಡ 3-1 ಸೆಟ್​ಗಳಿಂದ ಕಲಬುರಗಿ ಸಿದ್ಧಾರ್ಥ ತಂಡದ ವಿರುದ್ಧ, ಮೈಸೂರು ಜೆಎಸ್​ಎಸ್ ತಂಡ 2-0 ಸೆಟ್​ಗಳಿಂದ ದಾವಣಗೆರೆ ಆರ್​ಎಲ್ ತಂಡದ ವಿರುದ್ಧ, ಉಡುಪಿ ವಿ.ಬಿ. ತಂಡ 2-0 ಸೆಟ್​ಗಳಿಂದ ಮಂಗಳೂರು ಎಸ್​ಡಿಎಂ ತಂಡದ ವಿರುದ್ಧ, ಬೆಂಗಳೂರು ರಾಮಯ್ಯ ತಂಡ 2-0 ಸೆಟ್​ಗಳಿಂದ ಬೆಳಗಾವಿ ಆರ್​ಎಲ್ ತಂಡದ ವಿರುದ್ಧ ಗೆಲುವು ಸಾಧಿಸಿವೆ.