ನವದೆಹಲಿ: ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಇಂದು ಆಡಳಿತಾರೂಢ ಬಿಜೆಪಿಯನ್ನು ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ಬುಧವಾರ ಖಚಿತಪಡಿಸಿವೆ.
ಹರಿಯಾಣದ ಹಿಸ್ಸಾರ್ ಮೂಲದ ಸೈನಾ ನೆಹ್ವಾಲ್(29) ಬಿಜೆಪಿ ಸೇರಿದ್ದೇ ಆದಲ್ಲಿ ಪಕ್ಷಕ್ಕೆ ಪ್ರಭಾವಿ ಮಹಿಳೆಯೊಬ್ಬರ ಆಗಮನವಾಗಲಿದೆ. ಪ್ರಖ್ಯಾತ ಕ್ರೀಡಾಪಟು ಆಗಿದ್ದುಮ ಬಹುದೊಡ್ಡ ಅಭಿಮಾನಿಗಳ ಬಳಗ ಹೊಂದಿರುವುದರಿಂದ ಪಕ್ಷಕ್ಕೂ ಹೊಸ ವರ್ಚಸ್ಸು ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಮಾಜಿ ನಂ 1 ಬ್ಯಾಡ್ಮಿಂಟನ್ ತಾರೆಯಾಗಿರುವ ನೆಹ್ವಾಲ್, ದೇಶದ ಅತ್ಯುನ್ನತ ಪ್ರಶಸ್ತಿಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ನೆಹ್ವಾಲ್ 24 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಲಂಡನ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ವಿಶ್ವದ ಬ್ಯಾಡ್ಮಿಂಟನ್ ತಾರೆಗಳಲ್ಲಿ 2019ರಲ್ಲಿ 2 ಮತ್ತು 2015ರಲ್ಲಿ 1ನೇ ಸ್ಥಾನದಲ್ಲಿದ್ದರು.
ತಮ್ಮ ಟ್ವೀಟ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದುದ್ದು ಬಿಜೆಪಿ ಕಡೆಗಿನ ಅವರ ಆಸಕ್ತಿಯನ್ನು ತೋರುತ್ತಿತ್ತು. (ಏಜೆನ್ಸೀಸ್)