ಪ್ಯಾರಿಸ್: ಬ್ಯಾಡ್ಮಿಂಟನ್‌ನಲ್ಲಿ ಏಕೈಕ ಪದಕ ಭರವಸೆ ಎನಿಸಿರುವ ಯುವ ಷಟ್ಲರ್ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನ ಸೆಮಿೈನಲ್‌ನಲ್ಲಿ ಪರಾಭಗೊಂಡರು. ಅವರಿನ್ನು ಕಂಚಿನ ಪದಕಕ್ಕೆ ಹೋರಾಡಲಿದ್ದಾರೆ. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 22 ವರ್ಷ ಲಕ್ಷ್ಯ ಸೇನ್ 20-22, 14-21 ನೇರ ಗೇಮ್‌ಗಳಿಂದ ಹಾಲಿ ಒಲಿಂಪಿಕ್ಸ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ಎದುರು ಮುಗ್ಗರಿಸಿದರು. 54 ನಿಮಿಷಗಳ ಕಾದಾಟದಲ್ಲಿ ಆಕ್ಸೆಲ್‌ಸೆನ್ ಅವರ ಸ್ಮ್ಯಾಷ್‌ಗಳ ಎದುರು ಚೊಚ್ಚಲ ಬಾರಿ ಕೂಟದಲ್ಲಿ ಆಡುತ್ತಿರುವ ಲಕ್ಷ್ಯಸೇನ್ ಮಂಕಾದರು. ಎರಡು ಗೇಮ್‌ಗಳಲ್ಲಿ ಆರಂಭಿಕ ಮುನ್ನಡೆ ಪಡೆದ ನಡುವೆಯೂ ಲಕ್ಷ್ಯ ಸೇನ್ ನಿರಾಸೆ ಅನುಭವಿಸಿದರು.
ಮೊದಲ ಗೇಮ್‌ನಲ್ಲಿ 17-11, ಎರಡನೇ ಗೇಮ್‌ನಲ್ಲಿ 7-0 ಹಿನ್ನಡೆಯಲ್ಲಿದ್ದ ಆಕ್ಸೆಲ್‌ಸೆನ್ ಭರ್ಜರಿ ಕಂಬ್ಯಾಕ್ ಮಾಡಿದರು. ಎರಡು ಬಾರಿ ವಿಶ್ವ ಚಾಂಪಿಯನ್ ಆಕ್ಸೆಲ್‌ಸೆನ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ.
ಲಕ್ಷ್ಯ ಸೇನ್ ಒಬ್ಬ ಅದ್ಭುತ ಆಟಗಾರ. ಹಾಲಿ ಒಲಿಂಪಿಕ್ಸ್‌ನಲ್ಲಿ ಪ್ರಬಲ ಪ್ರತಿಸ್ಪರ್ಧಿ ಎಂಬುದನ್ನು ತೋರಿಸಿದ್ದಾರೆ. ಇನ್ನು ಮುಂದಿನ ನಾಲ್ಕು ವರ್ಷಗಳಲ್ಲಿ (2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್) ಚಿನ್ನ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗುತ್ತಾರೆ ಎಂಬ ಖಾತ್ರಿ ನನಗಿದೆ.
ವಿಕ್ಟರ್ ಆಕ್ಸೆಲ್‌ಸೆನ್
ಕಂಚಿಗೆ ಪೈಟ್
ಉಪಾಂತ್ಯದಲ್ಲಿ ಕನಸಿನ ಓಟಕ್ಕೆ ಪೆಟ್ಟು ಬಿದ್ದ ನಡುವೆಯೂ ಲಕ್ಷ್ಯಸೇನ್ ಚೊಚ್ಚಲ ಒಲಿಂಪಿಕ್ಸ್ ಪದಕ ಜಯಿಸುವ ಆಸೆ ಜೀವಂತವಿದೆ. ಸೆಮಿಪೈನಲ್‌ನಲ್ಲಿ ಸೋತ ಇಬ್ಬರು ಆಟಗಾರರು ಕಂಚಿನ ಪದಕಕ್ಕೆ ಸೆಣಸಲಿದ್ದು, ಸೋಮವಾರ ನಡೆಯಲಿರುವ ಪ್ಲೇಆ್ನಲ್ಲಿ ಮಲೇಷ್ಯಾಸ ಲೀ ಝಿ ಜಿಯಾ ವಿರುದ್ಧ ಆಡಲಿದ್ದಾರೆ. ಲೀ ಝಿ ಜಿಯಾ ಇನ್ನೊಂದು ಸೆಮಿಪೈನಲ್‌ನಲ್ಲಿ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಎದುರು 14-21, 15-21 ರಿಂದ ಸೋಲುಂಡರು.
ಲಕ್ಷ್ಯಸೇನ್ ಕಂಚಿನ ಪದಕ ಜಯಿಸುವಲ್ಲಿ ಸಫಲರಾದರೆ ಭಾರತ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸತತ 4ನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಲಿದೆ. ಲಕ್ಷ್ಯಸೇನ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎನಿಸಲಿದ್ದಾರೆ. ಪಿವಿ ಸಿಂಧು (2016 ಬೆಳ್ಳಿ, 2020 ಕಂಚು), ಸೈನಾ ನೆಹ್ವಾಲ್ (2012) ಹಿಂದಿನ ಪದಕ ಸಾಧಕರು.