23.2 C
Bangalore
Saturday, December 14, 2019

ಸ್ವಾಮೀ ತಪೋವನರ ಶ್ರೀ ಬದರೀಶಸ್ತೋತ್ರಮ್

Latest News

ಆರ್‌ಎಫ್‌ಐಡಿ ಸ್ಟಿಕರ್​ಗಳ ಕೊರತೆ: ಫಾಸ್ಟ್ಯಾಗ್​ ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರಿಯ ಹೆದ್ದಾರಿಯಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟ್ಯಾಗ್​ ಮೂಲಕ ಟೋಲ್​ ಶುಲ್ಕ ವಸೂಲಿ ಪ್ರಕ್ರಿಯೆ ಡಿ.1 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಆದರೆ, ಎಲ್ಲ ವಾಹನ ಮಾಲೀಕರೂ ಫಾಸ್ಟ್ಯಾಗ್​...

ದಾವಣಗೆರೆ ಲೋಕ ಅದಾಲತ್‌ನಲ್ಲಿ 21 ನ್ಯಾಯಾಧೀಶರು ಭಾಗಿ, 678 ಕೇಸ್ ವಿಲೆ, 7.34 ಕೋಟಿ ಪರಿಹಾರ ಇತ್ಯರ್ಥ

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾದ್ಯಂತ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲೆಯ...

ಫೆಬ್ರವರಿ 1 ರಂದು ಕೇಂದ್ರ ಬಜೆಟ್​, ಜನವರಿ 31 ರಂದು ಆರ್ಥಿಕ ಸಮೀಕ್ಷೆ ಮಂಡನೆ ಸಾಧ್ಯತೆ

ನವದೆಹಲಿ: ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ 2020-21 ಸಾಲಿನ ಕೇಂದ್ರ ಮುಂಗಡ ಪತ್ರ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆಯಿದೆ. ಅಂತೆಯೇ ಆರ್ಥಿಕ...

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

ಸ್ವಾಮೀ ತಪೋವನರು ರಚಿಸಿದ ಸಕಲ ವೇದಾಂತಗಳ ಸಾರಸಂಗ್ರಹ ರೂಪವಾಗಿರುವ ಶ್ರೀ ಬದರೀಶಸ್ತೋತ್ರಮ್ ಕೃತಿಗೆ ಸ್ವಾಮೀ ಚಿನ್ಮಯಾನಂದರು ವ್ಯಾಖ್ಯಾನ ಬರೆದಿದ್ದಾರೆ. ಅದನ್ನು ಸ್ವಾಮೀ ಆದಿತ್ಯಾನಂದರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಕ್ತಿಮಾರ್ಗದ ಕುರಿತಾದ ಚಿಂತನೆ ಇಲ್ಲಿದೆ.

ಜ್ಞಾನಿಯು ಸರ್ವದರ್ಶನಸಾರಸಂಗ್ರಹಭೂತಂ ಶ್ರೀ ಬದರೀಶ ಸ್ತೋತ್ರಮ್ ಅನ್ನು ಸದಾ ಸ್ತುತಿಸುತ್ತಿರುತ್ತಾನೆ. ಆಶೆಗಳನ್ನು ಹಾಗೂ ಉದ್ವೇಗಗಳನ್ನು ಜಯಿಸಿದ ಜ್ಞಾನಿಯು, ತನ್ನ ಒಳಗೆ ಹಾಗೂ ಹೊರಗೆ ಏಕವಾದ ಆತ್ಮತತ್ತ್ವವನ್ನೆ ಕಾಣುತ್ತಿರುತ್ತಾನೆ. ಆತನ ಪ್ರಾರ್ಥನೆಯು ಏಕತ್ವವನ್ನು ಬೋಧಿಸುವ ಸ್ತುತಿಗಳೇ ಆಗಿರುತ್ತವೆ. ಅದಕ್ಕಿಂತ ಮಿಗಿಲಾದ ಬೇರೆ ಪ್ರಾರ್ಥನೆಯು ಜ್ಞಾನಿಗೆ ಇರಲಿಕ್ಕೆ ಸಾಧ್ಯವಿಲ್ಲ.

ವಾಸ್ತವಕ್ಕೆ ಭಕ್ತಿಯಿಂದೆರಗುವುದು ಅಹಂಕಾರವನ್ನು ಇಲ್ಲವಾಗಿಸುತ್ತದೆ. ಆ ಭಕ್ತಿ ಪ್ರವಾಹವು ಹರಿಯುತ್ತ ಸಾಗಿ, ಅನಂತವಾದ ಆತ್ಮನಲ್ಲಿ ಲೀನವಾಗುತ್ತದೆ. ಭಕ್ತಿಯ ಮಾರ್ಗದಲ್ಲಿ ಭಕ್ತಿಯೊಂದೇ, ಎಲ್ಲ ಸಾಧಕರನ್ನು ಅವರ ಆತ್ಮಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಮಾರ್ಗವಾಗಿದೆ.

ಅನನ್ಯವಾದ ಭಕ್ತಿಯು ಬಹಳ ಬಲಶಾಲಿಯಾಗಿದ್ದು, ಅದು ಸಾಧಕನನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಭಕ್ತಿಯಿಲ್ಲದೆ ಕೇವಲ ತರ್ಕಮಾರ್ಗವು ಶಕ್ತಿಶಾಲಿಯಾಗಿದ್ದರೂ, ಅದು ಪಕ್ಷಿಗೆ ಹಾರಲು ಬೇಕಾದ ರೆಕ್ಕೆಗಳನ್ನು ತನ್ನಲ್ಲಿ ಗುರುತಿಸಲು ಅಸಮರ್ಥವಾಗುತ್ತದೆ. ಎಂತಹ ಅಡಚಣೆಗಳಿರುವ ರಸ್ತೆಯನ್ನು, ತರ್ಕ ದಾಟಬಹುದು. ಆದರೆ ಸೂಕ್ಷ್ಮವಾದ ಆತ್ಮಪ್ರಪಂಚವನ್ನು ಪ್ರವೇಶಿಸಲು ಅದಕ್ಕೆ ಭಕ್ತಿಯ ರೆಕ್ಕೆಗಳ ಅವಶ್ಯಕತೆ ಇದೆ. ನಮ್ಮ ಹೃದಯ ಹಾಗೂ ತಲೆ ಅಂದರೆ ಬುದ್ಧಿಯನ್ನು ಒಟ್ಟಿಗೆ ಸೇರಿಸಿ ಕರೆದೊಯ್ಯುವ ವಾಹನವು ಸ್ವಾಮೀ ತಪೋವನರದು. ಅವರು ಶಿಸ್ತುಬದ್ಧವಾಗಿ ವಿಚಾರಮಾಡುವ ರ್ತಾಕನನ್ನು ಒಪ್ಪಿಸಿ ಭಕ್ತಿಯ ಜೊತೆ ವಿವಾಹವನ್ನು ಮಾಡಿಸುತ್ತಾರೆ. ಇದು ತಪೋವನರ ವಿಶೇಷ ತಂತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಮಹಾತ್ಮರು ಅಂತರಂಗದಲ್ಲಿ ಆತ್ಮಾನಂದವನ್ನು ಅನುಭವಿಸಿ, ತಮ್ಮ ಅನುಭವವನ್ನು ಎಲ್ಲರೊಡನೆ ಹಂಚಿಕೊಂಡಿರುತ್ತಾರೆ. ಈ ತರಹದ ಕೃತ್ಯಕ್ಕೆ ಬಹಳಷ್ಟು ಧೈರ್ಯ ಬೇಕು. ಬುದ್ಧಿ ಹಾಗೂ ಭಕ್ತಿಯನ್ನು ಒಟ್ಟುಗೂಡಿಸಿ ಅಂತಿಮದ ಪಯಣಕ್ಕೆ ಸ್ವಾಮೀ ತಪೋವನರು ಮಾರ್ಗವನ್ನು ತೋರಿಸಿಕೊಡುತ್ತಾರೆ. ಶ್ರೀ ಬದರೀಶ ಸ್ತೋತ್ರವು ಜ್ಞಾನ ಹಾಗೂ ಭಕ್ತಿಯ ಸಮಾಗಮವಾಗಿದೆ.

ನಮ್ಮ ಶಾಸ್ತ್ರಗಳಲ್ಲಿ ಜೀವನ್ಮುಕ್ತನ ಬಗ್ಗೆ ವಿವರಣೆ ಬಂದಾಗ ‘ಜೀವನ್ಮುಕ್ತನು ಅಂತರಂಗದಲ್ಲಿ ಹಾಗೂ ಬಾಹ್ಯದಲ್ಲಿ ಆತ್ಮಾನಂದದ ಸವಿಯನ್ನೇ ಸೇವಿಸುತ್ತಿರುತ್ತಾನೆ’ ಎಂದು ಸಾರಿವೆ. ಸ್ವಾಮೀ ತಪೋವನರ ಎಲ್ಲ ಕೃತಿಗಳಲ್ಲೂ ಇದನ್ನು ಗುರುತಿಸಬಹುದು. ಅವರ ‘ಹಿಮಗಿರಿ ವಿಹಾರ’ ಎಂಬ ಪುಸ್ತಕದಲ್ಲಿ ಹಿಮಾಲಯದ ಅವರ ಪ್ರಯಾಣ ಎಲ್ಲೆಲ್ಲೂ ಆತ್ಮತತ್ತ್ವವನ್ನೆ ನಮಗೆ ತೋರಿಸುವ ರೀತಿಯಲ್ಲಿದೆ. ಅನಿತ್ಯದ ನಡುವೆಯೂ ಅವರು ನಮಗೆ ಸತ್ಯವನ್ನು ತೋರಿಸುತ್ತಾರೆ. ಜಡವಾದ ಹಿಮಾಲಯವನ್ನು ನಮಗೆ ಚೈತನ್ಯಮಯ ಆತ್ಮನಂತೆ ನಿರೂಪಿಸುತ್ತಾರೆ. ಸಾಧಕರನ್ನು ಅನುಗ್ರಹಿಸುವ ಸಲುವಾಗಿ, ಬಹಳ ಉತ್ತಮವಾದ ಸಾಧನೆಯನ್ನು ನಮಗೆ ನೀಡಿದ್ದಾರೆ. ಈ ಗ್ರಂಥವನ್ನು ಅಭ್ಯಾಸ ಮಾಡಿದರೆ, ಸಾಧಕನು ಎಲ್ಲೆಲ್ಲಿಯೂ ಶುದ್ಧ ಚೈತನ್ಯವನ್ನೇ ಕಾಣುತ್ತಾನೆ.

ಇದೇ ವಿಚಾರವನ್ನು ಮುಂದುವರಿಸುತ್ತ, ಭಕ್ತಿಯ ಮಾರ್ಗವು ಅನ್ಯಮಾರ್ಗಗಳಿಗಿಂತ ಶಕ್ತಿಶಾಲಿ ಎಂಬುದನ್ನು ನಮಗೆ ತೋರಿಸಿಕೊಡುತ್ತಾರೆ. ಸ್ವಾಮೀ ತಪೋವನರಂಥ ಶ್ರೇಷ್ಠ ವೇದಾಂತಿಗಳೇ ಈ ರೀತಿಯ ಮಾರ್ಗವನ್ನು ತೋರಿಸಲು ಸಾಧ್ಯ.

ಯಥಾನುರಕ್ತಿರ್ಭವತೋಂಘ್ರಿಮೂಲೇ

ಭಕ್ತಾನುಕಂಪಸ್ಯ ಭವಾರ್ತಿಹಾರಿನ್

ತಥಾತ್ರ ಕರ್ವಥ ಚ ರಾಜಯೋಗಃ

ಸುಖೇನ ನೈವೋನ್ನಮಯೇತ್ ಪುಮಾಂಸಮ್ || 3 ||

ಹೇ, ಸಂಸಾರದ ಬಾಧೆಯನ್ನು ನಾಶಮಾಡುವ ಶ್ರೀ ಬದರೀನಾಥನೇ! ಕರ್ಮಮಾರ್ಗವಾಗಲಿ ಅಥವಾ ರಾಜಯೋಗವಾಗಲಿ, ಸುಲಭವಾಗಿ ಅಧ್ಯಾತ್ಮದ ಉನ್ನತಿಯನ್ನು ಸಾಧಿಸಲು ಸಹಕಾರಿಯಾಗಿಲ್ಲ. ನಿನ್ನ ಪಾದಕಮಲದಲ್ಲಿ ಸದಾ ಯಾರು ಅನುರಕ್ತಿಯನ್ನು ಹೊಂದಿರುವರೋ, ಅಂತಹ ಮನುಷ್ಯರನ್ನು ನೀನು ಅನುಕಂಪದಿಂದ ಆಶೀರ್ವದಿಸಿ ಮುನ್ನಡೆಸುವೆ. (ಅರ್ತಿ-ಬಾಧೆ)

ನಿಜಸ್ವರೂಪವನ್ನರಿತು ತದನಂತರ ಅಹಂಕಾರವನ್ನು ಸಂಪೂರ್ಣವಾಗಿ ನಾಶ ಮಾಡಿದಾಗ, ನಮ್ಮ ಕೊರತೆಗಳೆಲ್ಲವು ಇಲ್ಲವಾಗುತ್ತವೆ. ಮನುಷ್ಯನು ಆತನ ದೇಹದ ಸ್ವಭಾವದಂತೆ ಇಂದ್ರಿಯ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾನೆ. ಮಾನಸಿಕವಾಗಿ, ಸಂವೇದನಾಶೀಲನಾಗಿ ಭಾವನೆಗಳನ್ನು ಹೊಂದಿರುತ್ತಾನೆ. ಬೌದ್ಧಿಕವಾಗಿ ಆತ ಹಲವಾರು ಆದರ್ಶಗಳಿಂದ ಉದ್ರಿಕ್ತನಾಗಿರುತ್ತಾನೆ. ದೇಹ, ಮನಸ್ಸು ಹಾಗೂ ಬುದ್ಧಿಯಲ್ಲಿ ಬಂಧನದ ಅನುಭವವನ್ನು ಅನುಭವಿಸುತ್ತಾನೆ. ಇದನ್ನೇ ಸಂಸಾರ ಹಾಗೂ ಅದರ ಕಾರ್ಯವೆಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಲ್ಲಿ ಶ್ರೀ ಬದರೀನಾಥನನ್ನು ‘ಆತ್ಮನಾಗಿ’, ನಮ್ಮ ನಿಜಸ್ವರೂಪವಾಗಿ ಸ್ವಾಮೀ ತಪೋವನರು ಕಂಡುಕೊಂಡಿದ್ದಾರೆ. ಆದ್ದರಿಂದ ಆತ್ಮನ ಅರಿವು, ಅಂದರೆ ಶ್ರೀ ಬದರೀನಾಥನ ನಿಜಸ್ವರೂಪದ ಅರಿವು, ನಮ್ಮ ಸಂಸಾರದ ಬಂಧನವನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.

ಹಿಂದೂ ಸಂಪ್ರದಾಯದಲ್ಲಿ ದೇವರ, ಗುರುಗಳ, ಹಿರಿಯರ ಅಥವಾ ತಂದೆ ತಾಯಿಗಳ ಪಾದಗಳಿಗೆ ಅಭಿವಂದಿಸುವುದರ ಮುಖಾಂತರ ನಮ್ಮ ಶ್ರದ್ಧೆಯನ್ನು ತೋರಿಸುತ್ತೇವೆ. ಪಾದಗಳನ್ನು ನಾವು ಸಾಮಾನ್ಯವಾಗಿ ಪಾದಕಮಲಗಳು ಎಂದೇ ಸಂಬೋಧಿಸುತ್ತೇವೆ. ದೇಹದ ಇನ್ನಿತರ ಅಂಗಗಳಿಗಿಂತ ಪಾದಗಳನ್ನು ಅತ್ಯಂತ ಶ್ರೇಷ್ಠವೆಂದೇ ಭಾವಿಸಿದ್ದೇವೆ. ಇದು ವಿಚಿತ್ರವೆಂಬಂತೆ ಹಲವರಿಗೆ ಅನ್ನಿಸಬಹುದು. ಯಾರಿಗೆ ಸಂಪ್ರದಾಯದ ಅರಿವು ಇಲ್ಲವೋ ಅವರಿಗೆ ಮಾತ್ರ ಇಂತಹ ಭಾವನೆ ಬರುತ್ತದೆ. ಗುರುವಿನ ಅರಿವು ಆತನ ಬುದ್ಧಿಯಲ್ಲಿದ್ದರೂ, ತಂದೆ ತಾಯಿಗಳ ಪ್ರೀತಿ ಅವರ ಹೃದಯದಲ್ಲಿದ್ದರೂ, ದೇವರ ನಗುವು ಆತನ ಮುಖದಲ್ಲಿ ಕಂಡುಬಂದರೂ, ನಾವು ಮಾತ್ರ ಅವರ ಪಾದಕ್ಕೆ ಗೌರವವನ್ನು ಸಲ್ಲಿಸುತ್ತೇವೆ. ತಲೆಯಲ್ಲಿರುವ ಬೌದ್ಧಿಕ ವಿಷಯಗಳನ್ನು, ಹೃದಯದಲ್ಲಿರುವ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಆದರೂ ಯಾವ ಕಾಲುಗಳ ಮೇಲೆ ಆತನು ನಿಂತಿದ್ದಾನೋ ಅದು ಗೌರವಕ್ಕೆ ಹೆಚ್ಚು ಪ್ರಾಶಸ್ಱವಾದುದಾಗಿದೆ. ಆತನ ಪಾದುಕೆಗಳನ್ನು ನಾವು ಪೂಜಿಸುವುದರ ಮುಖಾಂತರ ಆತನನ್ನು ಯಾವುದಕ್ಕಾಗಿ ಗೌರವಿಸುತ್ತೇವೆಯೋ ಅದನ್ನು ಗೌರವಿಸಿದಂತಾಗುತ್ತದೆ. ಇದೇ ವಾಸ್ತವವನ್ನು ಗುರುವು ನಮಗೆ ತಿಳಿಸಲು ಪ್ರಯತ್ನಿಸುತ್ತಿದ್ದಾನೆ. ಸಾಧಕರಾಗಿ, ಭಕ್ತರಾಗಿ ನಾವು ಅದನ್ನೇ ಅನುಭವಿಸಬೇಕು.

‘ನಾನು ನನ್ನ ತಲೆಯ

ಲ್ಲಿ, ನೀವು ಯಾವ ತತ್ತ್ವದ ಮೇಲೆ ನಿಂತಿರುವಿರೋ ಅದನ್ನರಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ’ ಎಂಬ ಭಾವನೆಯೇ ನಮಸ್ಕಾರದ ಹಿಂದಿರುವ ಉದ್ದೇಶವಾಗಿದೆ. ಇದೇ ಪಾದಗಳಿಗೆ ನಮಸ್ಕರಿಸುವುದರ ಹಿಂದಿರುವ ಮಹತ್ತ್ವವಾಗಿದೆ.

ಇಲ್ಲಿ ಸ್ವಾಮೀ ತಪೋವನರು, ವೇದಾಂತಿಗಳಾಗಿದ್ದರೂ ಜ್ಞಾನಮಾರ್ಗದಲ್ಲಿ ಬರುವ ಅನೇಕ ಕಷ್ಟಗಳನ್ನು ಮನಗಂಡು ಭಕ್ತಿಮಾರ್ಗವನ್ನು ಶ್ರೇಷ್ಠವೆಂದು ಸಾಮಾನ್ಯ ಸಾಧಕರಿಗೆ ವಿವರಿಸುತ್ತಿದ್ದಾರೆ. ಸಾಧಕನು ಈ ಭಕ್ತಿಮಾರ್ಗದಲ್ಲಿ ತನ್ನ ಸಾಧನೆಯನ್ನು ಮುಂದುವರಿಸಿದಾಗ ಆತನು ತನ್ನ ಮನಸ್ಸನ್ನು ಶುದ್ಧಿ ಮಾಡಿಕೊಳ್ಳುತ್ತಾನೆ. ನಂತರ ಏಕಾಗ್ರತೆಯನ್ನು ಸಂಪಾದಿಸಿಕೊಳ್ಳುತ್ತಾನೆ. ತನ್ನ ಇಂದ್ರಿಯಗಳನ್ನು ನಿಗ್ರಹಿಸಿ ಧ್ಯಾನದಲ್ಲಿ ಹೆಚ್ಚು ಸಮಯವನ್ನು ಕಳೆಯುವಂತೆ ಮುಂದುವರಿಯುತ್ತಾನೆ. ಇಲ್ಲಿ ಸ್ವಾಮೀೕಜಿಯವರು ಭಕ್ತಿಯೋಗವನ್ನು ಕರ್ಮಯೋಗಕ್ಕಿಂತ, ರಾಜಯೋಗಕ್ಕಿಂತ ಅಂದರೆ, ಪತಂಜಲಿ ಮಹರ್ಷಿಗಳ ಯೋಗಮಾರ್ಗಕ್ಕಿಂತ ಉತ್ತಮವಾದುದೆಂದು ಹೇಳುತ್ತಿದ್ದಾರೆ.

ಎಲ್ಲಿ ಭಕ್ತಿಯಿದೆಯೋ ಅಲ್ಲಿಗೆ ಮನಸ್ಸು ಬಹಳ ಸುಲಭವಾಗಿ ತಲುಪುತ್ತದೆ. ಒಬ್ಬ ಪ್ರೇಮಿಗೆ ತನ್ನ ಪ್ರೇಯಸಿಯನ್ನು ಸ್ಮರಿಸಿ ಆಕೆಯ ಬಗ್ಗೆ ಆಲೋಚಿಸುವುದಕ್ಕೆ ಯಾವುದೇ ಯತ್ನ ಬೇಕಾಗಿಲ್ಲ. ಒಂದು ವೇಳೆ ಭಗವಂತನ ಬಗ್ಗೆ ಇಂಥದ್ದೇ ಭಕ್ತಿಯಿದ್ದರೆ, ಅದು ಗಹನವಾಗಿದ್ದರೆ ನಮ್ಮಲ್ಲಿರುವ ಸಮಗ್ರ ಭಾವನೆಗಳು ಹಾಗೂ ಸಂವೇದನೆಗಳು ಬಹು ಬೇಗ ಆತನತ್ತ ಹರಿಯುತ್ತವೆ. ಹೀಗಾಗಲು ನಮ್ಮ ಅಂತರಾತ್ಮವು ವಾಸ್ತವದರಿವನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಉಪನಿಷತ್ತುಗಳಲ್ಲಿ ಈ ವಿಚಾರವನ್ನು ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ. ಮುಂಡಕ ಉಪನಿಷತ್ತಿನಲ್ಲಿ ನಾವು ಇದನ್ನು ಕಾಣಬಹುದು.

ನಾಯಮಾತ್ಮಾ ಪ್ರವಚನೇನ ಲಭ್ಯಃ

ನ ಮೇಧಯಾ ನ ಬಹುನಾ ಶ್ರುತೇನ

ಯಮೇವೈಷ ವೃಣುತೇ ತೇನ ಲಭ್ಯಃ

ತಸೈಷ ಆತ್ಮಾ ವಿವೃಣುತೇ ತನುಂ ಸ್ವಾಮ್ 3-2-3

‘ಈ ಆತ್ಮನು ಪ್ರವಚನದಿಂದಾಗಲೀ, ಮೇಧಾಶಕ್ತಿಯಿಂದಾಗಲಿ, ಬಹುವಾಗಿ ಶ್ರವಣ ಮಾಡುವುದರಿಂದಾಗಲೀ ಸಿಕ್ಕುವವನಲ್ಲ. ಯಾವನು ಆ ಪರಮಾತ್ಮನನ್ನೇ ಪಡೆಯಬೇಕೆಂದು ಬಯಸುವನೋ ಅಂತಹ ತೀವ್ರ ಬಯಕೆಯಿಂದ ಅವನು ಲಭ್ಯನು. ಅಂತಹವನಿಗೆ ಆತ್ಮನು ತನ್ನ ನಿಜ ಸ್ವರೂಪವನ್ನು ಪ್ರಕಾಶಪಡಿಸುವನು’.

ನಾವು ಆತನನ್ನು ಪಡೆಯಲು ಅಸಾಧ್ಯ, ಆತನು ತನ್ನ ನಿಜ ಸ್ವರೂಪವನ್ನು ಪ್ರಕಾಶಪಡಿಸಬೇಕು. ನಾವು ರಾಮನನ್ನು ಬಯಸುವುದಿಲ್ಲ, ಆದ್ದರಿಂದ ನಾವು ಆತನನ್ನರಿಯುವುದಿಲ್ಲ. ನಾವು ಕಾಮನನ್ನು ಬಯಸುತ್ತೇವೆ, ಆದ್ದರಿಂದ ನಾವು ಅತಿಯಾದ ಆಶೆಯುಳ್ಳವರಾಗಿ ಅದರಿಂದ ನೀಚವಾದ ಹಲ್ಲೆಗೊಳಗಾಗುತ್ತೇವೆ. ಒಬ್ಬ ಭಕ್ತನು ತನ್ನ ಇಷ್ಟದೇವನನ್ನು ಬಯಸುತ್ತಾನೆ, ಆತನಿಗೆ ತನ್ನ ಭಕ್ತಿಯನ್ನು ಸಮರ್ಪಿಸುತ್ತಾನೆ. ಹೀಗಾಗಿ ಆತನು ವಾಸ್ತವದ ಮಿನುಗು ನೋಟವನ್ನು ಅನುಭವಿಸುತ್ತಾನೆ. ಭಕ್ತಿಮಾರ್ಗ ಸುಲಭ ಹಾಗೂ ಪ್ರಯತ್ನರಹಿತವಾದುದಾಗಿದೆ. ಅದರಲ್ಲಿ ಅಡೆಚಣೆಗಳು ಬಹಳ ಕಡಿಮೆಯಿದೆ. ಕರ್ಮಯೋಗ ಹಾಗೂ ರಾಜಯೋಗಗಳಲ್ಲಿ ಬುದ್ಧಿಯು ಸ್ಪಷ್ಟವಾಗಿ ತಿಳಿದಿದ್ದರೂ, ಆತ್ಮನನ್ನು ಕುರಿತು ಸದಾ ಆಲೋಚನೆ ಮಾಡುತ್ತಿದ್ದರೂ, ಆತನ ಹೃದಯವು ಅಂದರೆ ಮನಸ್ಸು ಇಂದ್ರಿಯಗಳ ಚಾಪಲ್ಯತೆಯಿಂದಾಗಿ ಬಹಿಮುಖವಾಗಿ ಓಡುತ್ತದೆ.

ಸ್ವಾಮೀ ತಪೋವನರ ಜೀವನ

ಸ್ವಾಮೀ ತಪೋವನರೇ ಸಂಸ್ಕೃತದಲ್ಲಿ ಬರೆದಿರುವ ‘ಈಶ್ವರ ದರ್ಶನ’ ಎಂಬ ಆತ್ಮಚರಿತ್ರೆಯಿಂದ ಅವರ ಜೀವನದ ಬಗ್ಗೆ ತಿಳಿಯುತ್ತದೆ. ಕೇರಳ ರಾಜ್ಯದ ಪಾಲಕ್ಕಾಡ್​ನಲ್ಲಿ ಬಾಲಾಂಬ ಹಾಗೂ ಅಚ್ಯುತನ್ ನಾಯರ್ ದಂಪತಿಗೆ 1889ರಲ್ಲಿ ಸ್ವಾಮೀಜಿಯವರು ಜನಿಸಿದರು. ಕರ್ನಾಟಕದ ಹರಿಹರ ಪುಣ್ಯಕ್ಷೇತ್ರದಲ್ಲಿ ತಮ್ಮ ಅಂತರಾಳದ ತುಡಿತಕ್ಕೆ ಮನಸೋತು ಆಂತರಿಕ ಸಂನ್ಯಾಸವನ್ನು ಧಾರಣೆ ಮಾಡಿದರು. ಹೃಷಿಕೇಶದ ಬಳಿ ಇರುವ, ಪುರಾಣಿ ಜಡಿ ಎಂಬ ದ್ವೀಪದಲ್ಲಿ ಕುಟೀರವನ್ನು ಕಟ್ಟಿಕೊಂಡು, ತಪಸ್ಸನ್ನು ಮಾಡಿದರು. ಆ ದಿನಗಳಲ್ಲಿ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಮೀ ಜನಾರ್ಧನ ಗಿರಿಗಳಿಂದ ಸಂನ್ಯಾಸವನ್ನು ನೀಡಲಾಯಿತು. ಅಂದಿನಿಂದ ಅವರನ್ನು ಸ್ವಾಮೀ ತಪೋವನರೆಂದು ಕರೆಯಲಾಯಿತು. ಜೀವನದರ್ಶನಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ಅವರು ರಚಿಸಿದ್ದಾರೆ.

(ಪ್ರತಿಕ್ರಿಯಿಸಿ: [email protected])

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...